|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
“ಲೀಲಾವತೀ” ದೇಶವಿದೇಶಗಳಲ್ಲಿ ಮನ್ನಣೆ ಪಡೆದ ಗಣಿತದ ಬಹು ಕರಾರುವಾಕ್ಕಾದ ಒಂದು ಗ್ರಂಥ. ಪ್ರಾಚೀನ ಕಾಲದಲ್ಲಿ ಗಣಿತವನ್ನು ಕಲಿಸುವ ವಿಧಾನ ಆಕರ್ಷಣೀಯವಾಗಿತ್ತು. ಇಂದಿನ ಗಣಿತಕ್ಕೆ ಇದೇ ಬುನಾದಿ. ಭಾರತೀಯ ಗಣಿತ ಪಂಡಿತರೆಂದು ಖ್ಯಾತರಾದ ಭಾಸ್ಕರಾಚಾರ್ಯರು ತಮ್ಮ ಪುತ್ರಿ ಲೀಲಾವತಿಗೆ ಗಣಿತ ಹೇಳಿಕೊಡುವ ಪ್ರಾಚೀನ ಶೈಲಿಯಲ್ಲಿದೆ. ಮೂಲವು ಸಂಸ್ಕೃತ ಶ್ಲೋಕಗಳಲ್ಲಿದ್ದು ನೂರ ಎಂಟು ಗಣಿತದ ಸಮಸ್ಯೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಎಂಥ ಕ್ಲಿಷ್ಟ ಸಮಸ್ಯೆಯೇ ಆಗಿರಲಿ, ಸೂತ್ರಗಳ ಸಹಾಯದಿಂದ ಬಗೆಹರಿಸುವ ಪದ್ಧತಿ ಹಿಂದೆಯೂ ಇದ್ದು ಇಂದಿಗೂ ಅದೇ ವಿಧಾನವನ್ನು ಅಂಗೀಕರಿಸಲಾಗಿದೆ. ಇಂದಿನ ಭಿನ್ನರಾಶಿ -ಸರಾಸರಿ-ವರ್ಗಮೂಲ-ರೇಖಾಗಣಿತ-ಇವೆಲ್ಲ ದಿನನಿತ್ಯದ ವ್ಯವಹಾರದಲ್ಲಿ ಎಲ್ಲರಿಗೂ ಬೇಕಾದ ಲೆಕ್ಕಾಚಾರವೇ ಆಗಿದೆ. ಶ್ರೀಸಾಮಾನ್ಯನಿಗೆ ಲೆಕ್ಕಬಾರದಿದ್ದರೆ ಆತ ನಿರುಪಯುಕ್ತನಾಗುವ ಸಂಭವವೇ ಹೆಚ್ಚು. ಈ ಕೃತಿಯಲ್ಲಿ ಹಲವಾರು ಚಮತ್ಕಾರಿಕ ಗಣಿತ ಸಮಸ್ಯೆಗಳನ್ನು ತಿಳಿಯಬಹುದು. ‘ಲೀಲಾವತಿ’ ಕೃತಿಯಿಂದ ಆಯ್ದ 108 ಸಮಸ್ಯೆಗಳಳನ್ನು ಮೂಲಶ್ಲೋಕಗಳು, ಸರಳ ಕನ್ನಡದಲ್ಲಿ ಅವುಗಳ ಭಾವಾರ್ಥ ಮತ್ತು ಗಣಿತರೀತಿಯಲ್ಲಿ ಸಮಸ್ಯೆಗಳ ಪರಿಹಾರ ಹಾಗೂ ಟಿಪ್ಪಣಿಗಳೊಂದಿಗೆ ವಿವರಿಸಲಾಗಿದೆ.
|
ಡಾ. ಬಾಲಚಂದ್ರ ರಾವ್ ಎಸ್ ಅವರು ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರು. ಈಗ ಬೆಂಗಳೂರಿನ ಭಾರತೀಯ ವಿದ್ಯಾಭವನದ‘ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರ‘ದ ಗ್ಪುರವ ನಿರ್ದೇಶಕರಾಗಿದ್ದಾರೆ. ಗಣಿತ ಮತ್ತು ಖಗೋಳ ವಿಜ್ಞಾನ ಹಾಗೂ ವೈಚಾರಿಕತೆಗೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ.
|
|
| |
|
|
|
|
|
|
|
|
|