|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅಖಾದ್ಯ ತೈಲಗಳನ್ನು ಬಳಸಿ ಜೈವಿಕ ಇಂಧನವನ್ನು ತಯಾರಿಸುವ ಸಾಧ್ಯತೆಗಳ ಬಗೆಗೆ ಸಮಗ್ರ ವಿಕಾಸದ ಶ್ರೀ ವೈ. ಬಿ. ರಾಮಕೃಷ್ಣ ಮತ್ತು ಅವರ ಸ್ನೇಹಿತರು ಇಪ್ಪತ್ತೈದು ವರ್ಷಗಳ ಹಿಂದೆಯೇ ವಿಚಾರ ಸಂಕಿರಣವೇ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಹೋಗಿ ಹೋಗಿ ಹೊಂಗೆ ಎಣ್ಣೆ ಪೆಟ್ರೋಲಿಗೆ ಪರ್ಯಾಯವಾಗುತ್ತದೆಯೇ, ಅದೂ ಭಾರತದಂತಹ ಬೃಹತ್ ದೇಶದಲ್ಲಿ? ಎಂದು ಮೂಗು ಮುರಿದವರೇ ಹೆಚ್ಚು. ಜೈವಿಕ ಇಂಧನದ ತತ್ವ ನೀತಿರೂಪವನ್ನು ತಾಳಿ ಸರ್ಕಾರದ ಅಧಿಕೃತ ಮುದ್ರೆ ಧರಿಸಿ ಅನುಷ್ಠಾನದ ಹಂತಕ್ಕೆ ತಲುಪಿರುವಾಗ ಅದೇ ಮುರಿದ ಮೂಗಿನ ಮೇಲೆ ಬೆರಳಿಟ್ಟು ನೋಡುವ ಹಾಗಾಗಿದೆ. ಕರ್ನಾಟಕ ರಾಜ್ಯ ಜೈವಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷಪೀಠವನ್ನು ಅಲಂಕರಿಸಿ ಕಾರ್ಯಕ್ರಮದ ಚುಕ್ಕಾಣಿ ಹಿಡಿದಿರುವ ರಾಮಕೃಷ್ಣ ಮತ್ತವರ ತಂಡ ಇಡೀ ರಾಜ್ಯದಲ್ಲಿ ಜೈವಿಕ ಇಂಧನ ಕಾರ್ಯಕ್ರಮವನ್ನು ಆಂದೋಲನದೋಪಾದಿಯಲ್ಲಿ ನಡೆಸಹೊರಟಿರುವ ರೀತಿಯಿಂದಲೇ ಜೈವಿಕ ಇಂಧನವು ಭವಿಷ್ಯದ ಭರವಸೆಯಾಗಿರುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬಹುದಾಗಿದೆ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಪೆಟ್ರೋಲಿಯಮ್ ಇಂಧನದ ಅತಿಯಾದ ಬಳಕೆ, ಆಮದು, ವಿದೇಶಿ ವಿನಿಮಯಗಳಿಗೆ ಸಂಬಂಧಿಸಿದ ವಿಚಾರಗಳು ಮುಖ್ಯವಾಗಿವೆ. ಪರ್ಯಾಯ ಇಂಧನವಾಗಿ ಜೈವಿಕ ಇಂಧನದ ಉತ್ಪಾದನೆ ಮತ್ತಿತರ ವಿಷಯಗಳ ಬಗೆಗೆ ಶ್ರೀ ರಾಮಕೃಷ್ಣರು ಲೇಖಕರೊಂದಿಗೆ ಹಂಚಿಕೊಂಡ ವಿಚಾರಗಳನ್ನು ಈ ಕಿರುಹೊತ್ತಿಗೆಯಲ್ಲಿ ನೀಡಲಾಗಿದೆ.
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|