|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವೆಸೂವಿಯಸ್, ಕ್ರಕಟೋವ, ಹೆಲೆನ್ಸ್, ಇಯಾಕುಟ್ಲ್, ಕಟ್ಲಾ, ಹೆಕ್ಲಾ, ಪಿನತುಬೋ, ಮೌನಲೋಅ - ಏನಿವು? ಭೂಮಿಯಲ್ಲಿ ಅಡಗಿರುವ ನಿಸರ್ಗದ ಟೈಂ ಬಾಂಬುಗಳು, ಬೆಂಕಿಯ ಕುಲುಮೆಗಳು, ಭೂಮಿಯ ಅಂತರಾಳ ವೀಕ್ಷಿಸಲು ನಿಸರ್ಗವೇ ಕೊರೆದಿರುವ ಕಿಂಡಿಗಳು - ಇವು ಜ್ವಾಲಾಮುಖಿಗಳು. ಒಂದೆಡೆ ಅವುಗಳ ಬೀಭತ್ಸರೂಪ ಮತ್ತೊಂದೆಡೆ ಅಮೂಲ್ಯ ಲೋಹಭಂಡಾರಗಳನ್ನು ಭೂಗರ್ಭದಿಂದ ಎತ್ತಿಕೊಡುವ ಅವುಗಳ ನಿರಂತರ ಕಾಯಕ. ಜ್ವಾಲಾಮುಖಿಗಳು ಮನುಕುಲವನ್ನು ಬಹುದೀರ್ಘಾಕಾಲ ಕಾಡಿವೆ, ನಾಗರಿಕತೆಯ ಪುಟಗಳನ್ನು ಅಳಿಸಿಹಾಕಿವೆ. ಕೆಲವು ಒಂದೆರಡು ಬಾರಿ ಕೆಕ್ಕರಿಸಿ ಸ್ತಬ್ಧವಾಗಿವೆ ಮತ್ತೆ ಕೆಲವು ಆಗಾಗ ಗುಟುರು ಹಾಕುತ್ತವೆ. ಸದ್ದಿಲ್ಲದೆ ಒಳಗೊಳಗೇ ತಯಾರಿಮಾಡಿಕೊಂಡು ಒಮ್ಮೆಲೇ ಬಾಂಬಿನಂತೆ ಎರಗುತ್ತವೆ. ಹವಾಯಿ ದ್ವೀಪಗಳಂತೂ ನಿತ್ಯವೂ ಜ್ವಾಲಾಮುಖಿಗಳಿಂದ ದೀಪಾವಳಿ ಆಚರಿಸುತ್ತಿವೆ. ವೆಸೂವಿಯಸ್ ಜ್ವಾಲಾಮುಖಿ ಇಟಲಿಯ ಪಾಂಪೆ ಮತ್ತು ಹರ್ಕ್ಯುಲೇನಿಯಮ್ ನಗರಗಳನ್ನೇ ಜೀವಂತವಾಗಿ ಸಮಾಧಿಮಾಡಿ ಇದರ ಮೇಲೆ ಕಲ್ಲು ಬೂದಿಯ ಸ್ತರಗಳನ್ನು ಪೇರಿಸಿ ಸುಮಾರು ಎರಡು ಸಾವಿರ ವರ್ಷಗಳೇ ಸಂದಿವೆ. ಈಗಲೂ ಅದು ಬುಸುಗುಟ್ಟುತ್ತಿದೆ. ಸಾಗರ ತಳದಲ್ಲಿ ಜ್ವಾಲಾಮುಖಿಗಳು ಇಂದಿಗೂ ಲಾವಾರಸ ಹರಿಸುತ್ತಿವೆ. ಜ್ವಾಲಾಮುಖಿಗಳ ಅಧ್ಯಯನವೇ ಭೂಇತಿಹಾಸದ ರೋಚಕ ಅಧ್ಯಾಯ. ಭೂಮಿಯ ಟೈಂ ಬಾಂಬ್ ಜ್ವಾಲಾಮುಖಿ ಕೃತಿಯು ನಿಸರ್ಗದ ಈ ವಿದ್ಯಮಾನದ ಎಲ್ಲ ಮುಖಗಳನ್ನೂ ಪರಿಚಯಮಾಡಿಕೊಡುತ್ತದೆ.
|
ಟಿ ಆರ್ ಅನಂತರಾಮುರವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು. ನಾಲ್ಕು ದಶಕಗಳಿಂದ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ನವಕರ್ನಾಟಕದ ‘ವಿಜ್ಞಾನ-ತಂತ್ರಜ್ಞಾನ ಪದಸಂಪದ’ದ ಸಂಪಾದಕರಲ್ಲೊಬ್ಬರು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಕ್ಕೆ ಪಾತ್ರರು. ಕರ್ನಾಟಕ ಸರ್ಕಾರದ ‘ವಿಶನ್ ಗ್ರೂಪ್’ ನೀಡುವ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
|
|
| |
|
|
|
|
|
|
|
|
|