|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬೊಜ್ಜುದೇಹ ಆರೋಗ್ಯಕ್ಕೆ ಹಾನಿಕರ. ಬೊಜ್ಜಿನಿಂದಾಗಿ ತೂಕ ಹೆಚ್ಚಾಗುವುದಲ್ಲದೆ ಜೊತೆಯಲ್ಲೇ ಮಧುಮೇಹ, ಹೃದಯಾಘಾತ ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳನ್ನೂ ಕರೆತರುತ್ತದೆ. ಪ್ರಪಂಚದಾದ್ಯಂತ ಇದನ್ನೊಂದು ರೋಗವೆಂದೇ ಪರಿಗಣಿಸಿ ಬೊಜ್ಜು ಇಳಿಸಲು ವಿವಿಧ ಚಿಕಿತ್ಸೆಗಳ ಮೊರೆ ಹೋಗಲಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಸುಖಜೀವನದ ಬೆನ್ನು ಹತ್ತಿ ಶರೀರಕ್ಕೆ ಶ್ರಮವಿಲ್ಲದ ಹಗುರ ಕೆಲಸ, ಸಿದ್ಧ ಆಹಾರ ಸೇವನೆ, ಐಷಾರಾಮಿ ಜೀವನಶೈಲಿ ಮುಂತಾದವು ಬೊಜ್ಜು ಶೇಖರವಾಗಲು ರಾಜ ರಸ್ತೆಗಳು. ಹಿತಮಿತವಾದ ಆಹಾರ ಸೇವನೆಯಿಂದ, ಶಿಸ್ತಿನ ಜೀವನಕ್ರಮದಿಂದ ಬೊಜ್ಜನ್ನು ಹೇಗೆ ನಿವಾರಿಸಬಹುದೆಂದು ಈ ಪುಸ್ತಕದಲ್ಲಿ ತಿಳಿಸಿಕೊಡಲಾಗಿದೆ.
|
ಡಾ|| ವಿ. ಪರಮೇಶ್ವರ ನಾಡಿನ ಹಿರಿಯ ವೈದ್ಯರು, ಹೃದಯ ರೋಗ ತಜ್ಞರು. ರಾಯಲ್ ಕಾಲೇಜ್ ಆಫ್ ಲಂಡನ್ನಿಂದ ಸ್ನಾತಕೋತ್ತರ ಪದವಿ ಪಡೆದವರು. ದೇಶ ವಿದೇಶಗಳ ವೈದ್ಯ ಸಂಘ-ಸಂಸ್ಥೆಗಳು ಇವರಿಗೆ ಫೆಲೋಷಿಪ್ಗಳನ್ನು ನೀಡಿವೆ. ಅಖಿಲ ಭಾರತ ವೈದ್ಯಸಂಘ, ಅಖಿಲ ಭಾರತ ಫಿಸಿಷಿಯನ್ ಸಂಘಗಳ ಅಧ್ಯಕ್ಷರಾಗಿಯೂ ಮತ್ತು ಇಂಡಿಯನ್ ಕಾಲೇಜ್ ಆಫ್ ಫಿಸಿಷಿಯನ್ಸ್ನ ಡೀನ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ, ಡಾ|| ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ. ಹಲವಾರು ಲೇಖನಗಳನ್ನು ಪುಸ್ತಕಗಳನ್ನೂ ಬರೆದಿರುವ ಈ ವೈದ್ಯರು ಇಂದು ಜನರನ್ನು ಕಾಡುತ್ತಿರುವ ರೋಗಗಳ ಬಗ್ಗೆ ಪುಸ್ತಕ ಮಾಲೆಯನ್ನು ಹೊರತರುವವರಿದ್ದಾರೆ.
|
|
| |
|
|
|
|
|
|
|
|