|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಚಂದ್ರಶೇಖರ ವೆಂಕಟರಾಮನ್ (1888-1970) ಸಿ.ವಿ. ರಾಮನ್ ಎಂದೇ ಖ್ಯಾತರು. ಭಾರತದ ಆದ್ಯ ಭೌತ ಶಾಸ್ತ್ರಜ್ಞರು. 1930ರಲ್ಲಿ ‘ಬೆಳಕಿನ ಚೆದುರುವಿಕೆ‘ಯ ಮೇಲೆ ಸಂಶೋಧನೆಯನ್ನು ನಡೆಸಿದುದಕ್ಕಾಗಿ ‘ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ‘ಯನ್ನು ಪಡೆದರು. ರಾಮನ್ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ, ಪ್ರಥಮ ಏಷಿಯನ್ ಹಾಗೂ ಪ್ರಥಮ ಶ್ವೇತೇತರ ವ್ಯಕ್ತಿ! 1954ರಲ್ಲಿ ಭಾರತ ಸರ್ಕಾರವು ಸಿ.ವಿ. ರಾಮನ್ ಅವರಿಗೆ ‘ಭಾರತರತ್ನ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ರಾಮನ್ ವಿಜ್ಞಾನವನ್ನು ಸ್ವಸಾಮರ್ಥ್ಯದಿಂದ ಕಲಿತದ್ದು ಅವರ ದೊಡ್ಡ ಹಿರಿಮೆ. ರಮನ್ ಕಲ್ಕತ್ತದ ‘ಇಂಡಿಯನ್ ಅಸೊಸಿಯೇಶನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್‘ ಸಂಸ್ಥೆಯಲ್ಲಿ ತಮ್ಮ ಸಹೋದ್ಯೋಗಿ ಕೆ.ಎಸ್. ಕೃಷ್ಣನ್ ಜತೆಗೂಡಿ ಕೆಲಸ ಮಾಡುವಾಗ, ಫೆಬ್ರವರಿ 28, 1928ರಂದು ಬೆಳಕಿನ ಚೆದುರುವಿಕೆಗೆ ಸಂಬಂಧಿಸಿದ ಹಾಗೆ ನಿರ್ಣಾಯಕ ಫಲಿತಾಂಶವನ್ನು ಪಡೆಯುತ್ತಾರೆ. ಆದರೆ ರಾಮನ್ ನೊಬೆಲ್ ಪಾರಿತೋಷಕವನ್ನು ಕೃಷ್ಣನ್ ಜೊತೆ ಹಂಚಿಕೊಳ್ಳುವುದಿಲ್ಲ. ನೊಬೆಲ್ ಪ್ರಶಸ್ತಿ ಪತ್ರದಲ್ಲಿ ಕೃಷ್ಣನ್ ಅವರ ಹೆಸರು ಹಾಗೂ ಅವರು ಸಲ್ಲಿಸಿರುವ ನೆರವಿನ ಸ್ಮರಣೆಯಿದೆ. ಸರ್ ಸಿ.ವಿ. ರಾಮನ್ ಸದಾ ಕಾಲಕ್ಕೂ ಭಾರತೀಯರಿಗೆ ಸ್ಫೂರ್ತಿದಾಯಕ ವಿಜ್ಞಾನಿ. ರಾಮನ್ ಬದುಕು-ಸಾಧನೆಯನ್ನು ಡಾ|| ವಸುಂಧರಾ ಭೂಪತಿಯವರು ಸೊಗಸಾಗಿ ಪರಿಚಯಿಸಿದ್ದಾರೆ.
|
ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.
|
|
| |
|
|
|
|
|
|
|
|
|