|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಯಾವುದೇ ಸಾಹಿತ್ಯ ಎತ್ತರದ ನೆಲೆಯದಾಗಬೇಕಾದರೆ ಅದರಲ್ಲಿ ಉತ್ತಮ ರೀತಿಯ ಮಕ್ಕಳ ಸಾಹಿತ್ಯವೂ ಇರಬೇಕಾಗುತ್ತದೆ. ಕನ್ನಡದಲ್ಲಿ ಪಂಜೆ, ಕುವೆಂಪು, ರಾಜರತ್ನಂ, ಹೊಯ್ಸಳರಂತ ನವೋದಯ ಸಾಹಿತಿಗಳು ಮಕ್ಕಳಿಗಾಗಿ ಉತ್ಕೃಷ್ಟ ಕವಿತೆಗಳನ್ನು ರಚಿಸಿದ್ದಾರೆ. ನಂತರ ಬಂದ ನವ್ಯ ಸಾಹಿತ್ಯದಲ್ಲಿಯೂ ವೆಂಕಟೇಶ ಮೂರ್ತಿ, ಸುಮತೀಂದ್ರ ನಾಡಿಗ ಮೊದಲಾದವರು ಈ ಸಂಬಂಧ ಶ್ಲಾಘ್ಯ ಕೆಲಸ ಮಾಡಿದ್ದಾರೆ. ಚಂದಿರ ಶಾಲೆ ಪುಸ್ತಕದಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡುವ ವಸ್ತು ವೈವಿಧ್ಯ ಇದೆ; ಅವರ ಕಿವಿಸೆಳೆಯುವ, ಹಗುರ ನಡಿಗೆಯ ಸುಲಭ ಸುಂದರ ರಚನೆಗಳಿವೆ. ಆನೆ ಬಂತು, ಜೋಗುಳ, ದೀಪ, ತರಕಾರಿ - ಇಂಥ ಹಲವಾರು ರೋಚಕ ಪದ್ಯಗಳು ಮಕ್ಕಳಿಗೆ ಪ್ರಿಯವಾಗಬಲ್ಲವು. ಈ ಸಂಕಲನದ ಕೆಲವು ಪದ್ಯಗಳಿಗೆ ಚಿತ್ರಗಳೂ ಇರುವುದರಿಂದ ಈ ಪುಸ್ತಕ ಇನ್ನಷ್ಟು ರಂಜಕವಾಗುವುದರಲ್ಲಿ ಸಂದೇಹವಿಲ್ಲ.
|
ಡಾ|| ಮುಳುಕುಂಟೆ ರಮೇಶ್ ಒಬ್ಬ ಅನುಭವಿ ಅಧ್ಯಾಪಕರು ಮತ್ತು ಅಧ್ಯಯನಶೀಲರು ಮತ್ತು ಉತ್ತಮ ಲೇಖಕರು. ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಸತತವಾಗಿ ನಾಲ್ಕು ವರ್ಷಗಳ ಕಾಲ ಪ್ರಬುದ್ಧ ಸಾಹಿತ್ಯ ವಿಮರ್ಶೆಯನ್ನು ಬರೆದ ಅವರು ಬಿ.ಜಿ.ಎಲ್. ಸ್ವಾಮಿಯವರಂಥ ಮೇಧಾವಿ ಲೇಖಕರನ್ನು ಕುರಿತು ವಿಚಾರಭರಿತವೂ ಆಕರ್ಷಕವೂ ಆದ ಜೀವನ ಚರಿತ್ರೆಯನ್ನು ರಚಿಸಿದ್ದಾರೆ. ‘ಬಣ್ಣದ ಬುಗುರಿ’ ಎಂಬ ತಮ್ಮ ಮೊದಲ ಮಕ್ಕಳ ಪದ್ಯ ಸಂಗ್ರಹವನ್ನ ಹೊರತಂದಿದ್ದಾರೆ.
|
|
| |
|
|
|
|
|
|
|
|
|