Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 145    
10%
Rs. 131/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಚಂದ್ರಗಿರಿ ಪ್ರಕಾಶನ, Chandragiri Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 195
ಪುಸ್ತಕದ ಗಾತ್ರ : 1/8 Demy Size
ಕೋಡ್ : 173113

ಸಾರಾ ಅನನ್ಯತೆಯ ಸಾಕಾರ ರೂಪ. ಕಂಡ ಸತ್ಯವನ್ನು ಸರಳವಾಗಿ ಬಿಂಬಿಸಿ ಹೆಣ್ಣುಮಕ್ಕಳ ನೋವಿಗೆ ಧರ್ಮಗಳ ಬೇದವಿಲ್ಲ ಎಂದು ಸಾರಿದವರು ಸಾರಾ ಅಬೂಬಕ್ಕರ್. ಸಾರಾ ಅವರ ಸಾಹಿತ್ಯ ಕರಾವಳಿಯ ಸಾರಸ್ವತ ಲೋಕದಲ್ಲಿ ಹೊಸ ಶಕೆಯ ಆರಂಭಕ್ಕೆ ಕಾರಣವಾಯಿತು. ಅವರು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳ ಹುಳುಕುಗಳನ್ನು ಮಾತ್ರ ಎತ್ತಿ ತೋರಿಸಲಿಲ್ಲ. ಎಲ್ಲ ಧರ್ಮಗಳಲ್ಲೂ ಹೆಣ್ಣುಮಕ್ಕಳನ್ನು ಹೇಗೆ ಶೋಷಿಸಲಾಗುತ್ತಿದೆ ಎಂಬುದನ್ನು ಸಾಹಿತ್ಯದಲ್ಲಿ ಪರಿಣಮಕಾರಿಯಾಗಿ ಬಿಂಬಿಸಿದರು.

ಸಮಾಜದ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸುವ ಹೆಣ್ಣುಮಕ್ಕಳು ಸಾಕಷ್ಟು ನೋವುಗಳನ್ನು ಅನುಭವಿಸುತ್ತಿದ್ದು, ಅವರ ನೋವಿಗೆ ಜಾತಿ ಅಥವಾ ಧರ್ಮದ ಲೇಪನ ಅಗತ್ಯವಿಲ್ಲ. ಕರಾವಳಿಯಲ್ಲಿ ಲೇಖಕಿಯರ ಮತ್ತು ವಾಚಕಿಯರ ಸಂಘ ಕಟ್ಟಿ ಬೆಳಸುವಲ್ಲಿ ಸಾರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಹಲವು ಭಾಷೆ, ಧರ್ಮಗಳ ದಕ್ಷಿಣ ಕನ್ನಡ ಜನರ ಮಧ್ಯೆ ಸಾರಾ ವಿಭಿನ್ನರಾಗಿ ನಿಂತಿದ್ದಾರೆ.

ಸಾರಾ ಅಬೂಬಕ್ಕರ್ ಅವರ ಮೊದಲ ಕಾದಂಬರಿ ` ಚಂದ್ರಗಿರಿಯ ತೀರದಲ್ಲಿ’ ಪ್ರಕಟವಾಗಿ 25 ವರ್ಷಗಳು ಕಳೆದು ಹೋಗಿವೆ. ಈ 25 ವರ್ಷಗಳಲ್ಲಿ ಚಂದ್ರಗಿರಿ ಮತ್ತು ನೇತ್ರಾವತಿ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಚಂದ್ರಗಿರಿಯ ತೀರದ ಸಾರಾ ಅಬೂಬಕ್ಕರ್ ಮಂಗಳೂರು ಬಳಿಯ ನೇತ್ರವತಿಯ ತೀರಕ್ಕೆ ಬಂದು ಸೇರಿದಂದಿನಿಂದ ಮುಸ್ಲಿಂ ಮಹಿಳೆಯರನ್ನೂ ಒಳಗೊಂಡಂತೆ ಅನೇಕ ದಮನಿತ ಮಹಿಳೆಯರ ಧ್ವನಿಗಳಿಗೆ ಹೊಸ ಅರ್ಥ ಬಂದಿದೆ. ಚಂದ್ರಗಿರಿ ಎಂಬುದು ಕರಾವಳಿ ಮಹಿಳೆಯರ ಸುಖ-ಸಂತೋಷ, ದುಖಃ-ದುಮ್ಮಾನಗಳಿಗೆ ಅನನ್ಯವಾದ ರೂಪಕವಾಗಿ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ದಾಖಲಾಗಿದೆ.

ಹಿರಿಯ ಸಾಹಿತಿ ಹಾಗೂ ಹೋರಾಟಗಾತಿಯಾಗಿರುವ ಸಾರಾ ಅಬೂಬಕ್ಕರ್ ಅವರಿಗೆ ರಾಜ್ಯದ ಸಾಹಿತ್ಯಾಸಕ್ತರು ಡಿಸೆಂಬರ್ 20ರಂದು ಅಭಿನಂದನೆ ಸಲ್ಲಿಸಿದರು. `ಚಂದ್ರಗಿರಿ’ ಅಭಿನಂದನ ಗ್ರಂಥವನ್ನು ಸಲ್ಲಿಸುವ ಅತ್ಮೀಯ ಸಮಾರಂಭದಲ್ಲಿ ಹಿರಿಯ ವಿದ್ವಾಂಸರಾದ ಡಾ. ಬಿ.ಎ.ವಿವೇಕ ರೈರವರು ಸಾರಾ ಅಬೂಬಕ್ಕರ್ ಅವರ ಸಾಹಿತ್ಯಕ ಮತ್ತು ಸಾಮಾಜಿಕ ಸಾಧನೆ ಹಾಗೂ ಪ್ರಸ್ತುತತೆಗಳನ್ನು ಮೇಲಿನ ಮಾತುಗಳಲ್ಲಿ ವಿವರಿಸಿದರು. ಸಾರಾ ಅಬೂಬಕ್ಕರ್ ಅವರು ಮೊದಲ ಕೃತಿಯಾಗಿ ’ಚಂದ್ರಗಿರಿಯ ತೀರದಲ್ಲಿ’ ಪ್ರಕಟವಾದ ಅಲ್ಪಾವಧಿಯಲ್ಲೇ ಧಾರ್ಮಿಕ ಮೂಲಭೂತವಾದಿಗಳಿಗೆ ಶಾಕ್ ನೀಡಿತು; ಮಾತ್ರವಲ್ಲ ಅವರಿಂದ ತೀವ್ರವಾಗಿ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. 1985ರಲ್ಲಿ ಪುತ್ತೂರಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಏರ್ಪಡಿಸಿದ್ದ ಜಾತಿ ಜನಾಂಗಗಳ ಸ್ಥಿತಿಗತಿ ಬಗೆಗಿನ ವಿಚಾರ ಸಂಕಿರಣದಲ್ಲಿ ಸಾರಾ ಅವರು ಮಾತನಾಡಲು ಎದ್ದು ನಿಂತಾಗ ಅಂಥ ಗುಂಪೊಂದು ಅವರ ಮೇಲೆ ಹಲ್ಲೆಗೆ ಯತ್ನಿಸಿತು. ಆ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಬಿ.ಎ.ವಿವೇಕ ರೈಗಳಿಗೆ ಆ ಸಂದರ್ಭ ಕೈಬೆರಳಿಗೆ ಗಾಯಾವಾದುದನ್ನು ರೈಗಳು ಮೊನ್ನಿನ ಅಭಿನಂದನ ಸಮಾರಂಭದಲ್ಲಿ ನೆನಪಿಸಿದ್ದು ಮಾತ್ರವಲ್ಲ ಅದರಿಂದಾಗಿ ತಾನು ಕೇವಲ ಅಕಾಡೆಮಿಕ್ ಆಗಿ ಉಳಿಯದೆ ದೈರ್ಯಶಾಲಿಯಾಗಿ ಸಾಮಾಜಿಕವಾಗಿ ಮುನ್ನಡೆಯುವಂತಾಯಿತು ಎಂಬುದಾಗಿಯೂ ತಿಳಿಸಿದರು.

ಹಲವಾರು ಪುರಸ್ಕಾರ ಗೌರವ ಪ್ರಶಸ್ತಿಗಳನ್ನು ಪಡೆದಿರುವ ಡಾ|ಸಾರಾ ಅಬೂಬಕ್ಕರ್ 8 ಕಾದಂಬರಿಗಳನ್ನೂ, ಕೆಲವು ಕಥಾ ಸಂಕಲನಗಳನ್ನೂ ಭಾಷಾಂತರ ಕೃತಿಗಳನ್ನೂ, ಪ್ರಬಂಧ ಸಂಕಲಗಳನ್ನೂ ಪ್ರಕಟಿಸಿದ್ದಾರೆ. ಅವರ ’ಚಂದ್ರಗಿರಯ ತೀರದಲ್ಲಿ’ 6 ಭಾಷೆಗಳಿಗೆ ಅನುವಾದಗೊಂಡಿದೆ. ತಮಿಳು ಭಾಷೆಯಲ್ಲಿ ಸಿನಿಮಾ ಅಗಿಯೂ ಮೂಡಿಬಂದು ಪ್ರಶಸ್ತಿ ಪುರಸ್ಕೃತವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 1984ರ ಅತ್ಯುತ್ತಮ ಕಾದಂಬರಿ ಪ್ರಶಸ್ತಿ ಪಡೆದಿದೆ. ಹಾಗೆಯೇ ಅವರ ಉಳಿದೆಲ್ಲ ಕಾದಂಬರಿಗಳೂ ಇತರ ಬರಹಗಳೂ ಒಂದಲ್ಲ ಒಂದು ಪ್ರಶಸ್ತಿ ಪಡೆದಿವೆ. ಕೆಲವು ಕೃತಿಗಳು ಇತರ ಭಾಷೆಗಳಿಗೂ ಅನುವಾದಗೊಂಡಿವೆ.

ಸಾರಾ ಅಬೂಬಕರ್ ಅವರ ಒಟ್ಟು ಕೃತಿಗಳನ್ನು ಪರಿಶೀಲಿಸಿದಾಗ- ಅವರೇ ಗುರುತಿಸಿರುವ- ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮುಸ್ಲಿಂ ಮಹಿಳೆಯರ ಶೋಷಣೆ ಹಾಗೂ ಕೋಮು ಸೌಹಾರ್ದ- ಈ ಮೂರು ವಿಷಯಗಳ ಕುರಿತು ಕತೆ, ಕಾದಂಬರಿ ಹಾಗೂ ಲೇಖನಗಳನ್ನು ಬರೆಯಲಾಗಿದೆ. ಬಹುಪತ್ನಿತ್ವ, ಪದರ್ಾ ಹಾಗೂ ಸುಲಭದ ತಲಾಖ್ ಪದ್ಧತಿ- ಇವನ್ನು ಅನುಷ್ಠಾನಗೊಳಿಸುತ್ತಿರುವ ವ್ಯವಸ್ಥೆಯನ್ನು ಅವರ ಬರಹಗಳು ಪ್ರಶ್ನಿಸುತ್ತವೆ. ಇದರಿಂದಾಗಿ ಮೂಲಭೂತವಾದಿಗಳೂ ಪ್ರಗತಿ ವಿರೋಧಿಗಳೂ ಆಗಿರುವ ಕೆಲವು ಮುಸ್ಲಿಂ ಮತಾಂಧರ ವಿರೋಧಕ್ಕೆ ಸಾರಾ ಈಡಾಗಿದ್ದಾರೆ.

ಸಾರಾ ಅವರನ್ನು ಈ ಬಗೆಯಲ್ಲಿ ವಿವರಿಸುವುದರಿಂದ ಅವರು ಧರ್ಮ ವಿರೋಧಿಗಳೆಂದೂ ಅತ್ಯಂತ ಆಧುನಿಕ ಚಿಂತನೆಯವರೆಂದೂ ನಾವು ತಪ್ಪಾಗಿ ತಿಳಿಯುವ ಸಾಧ್ಯತೆ ಇದೆ. ಆವರೇ ಅವರ ಬರಹ, ಭಾಷಣಗಳಲ್ಲಿ ವಿವರಿಸಿದಂತೆ ಅವರು ಅತ್ಯಂತ ಧಾರ್ಮಿಕ ನಿಷ್ಠೆಯ ವ್ಯಕ್ತಿ. ಅವರ ಸಾಮೀಪ್ಯ ಹೊಂದಿದ ಎಲ್ಲರೂ ಇದನ್ನು ಬಲ್ಲರು. ರಮ್ಜಾನ್ ತಿಂಗಳಲ್ಲಿ ಅವರು ಯಾವುದೇ ಬಹಿರಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ದೇವರಲ್ಲಿ ವಿಶ್ವಾಸ, ಪ್ರತಿದಿನವೂ ಹೊತ್ತುಹೊತ್ತಿಗೆ ನಮಾಜ್, ರಮ್ಜಾನ್ ಉಪವಾಸ- ಇವೂ ಅಲ್ಲದೆ ಇನ್ನೂ ಅನೇಕ ಧಾರ್ಮಿಕ ಆಚರಣೆಗಳನ್ನು ತಮ್ಮ ನಿತ್ಯ ವಿಧಿಗಳಲ್ಲಿ ಅವರು ಇರಿಸಿಕೊಂಡೇ ಇದ್ದಾರೆ. ಇಸ್ಲಾಮಿನ ಶರೀಯತ್ತಿನ ವಿಧಿಗಳಲ್ಲಿ ಸ್ತ್ರೀ ಪುರುಷರಿಗೆ ಪ್ರತ್ಯೇಕ ಕ್ರಮಗಳು ಇರುವುದಿಲ್ಲ. ಎಂಬುದನ್ನು ಇಸ್ಲಾಂ ಧಾರ್ಮಿಕ ಸಾಹಿತ್ಯದ ತನ್ನ ಓದಿನ ಆಧಾರದಲ್ಲಿ ಅವರು ವಿವರಿಸುತ್ತಾರೆ. ಇದರಂತೆ ಮುಸ್ಲಿಂ ಮಹಿಳೆಯರಿಗೆ ಬುರ್ಖ ಕಡ್ಡಾಯವಲ್ಲ ಎಂದು ತಿಳಿಸುತ್ತಾ, ಇತ್ತೀಚಿಗೆ ಮೂಲಭೂತವಾದಿಗಳು ಬುರ್ಖ ಕಡ್ಡಾಯ ಗೊಳಿಸುವ ಮೂಲಕ ಮಹಿಳೆಯರು ಮುನ್ನಡೆಗೆ ಬರುವುದನ್ನು ತಡೆಯುತ್ತಿದ್ದಾರೆ ಎಂದು ತಿಳಿಸುತ್ತಿದ್ದಾರೆ.

ಹೆಣ್ಣಿನ ಒಂದು ದಿನದ ಮದುವೆಯ ಔಚಿತ್ಯವನ್ನು ’ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಪ್ರಶ್ನಿಸಿದೆ. ಬಹುಪತ್ನಿತ್ವದಿಂದ ಮಹಿಳೆ ಅನುಭವಿಸುವ ನೋವನ್ನು ’ಸಹನಾ’ ಕಾದಂಬರಿ ಹಾಗೂ ಇತರ ಕೃತಿಗಳು ವಿವರಿಸುತ್ತವೆ. ವಿಚ್ಛೇದಿತ ಮಹಿಳೆಯರು ತವರಿನಲ್ಲಿ ಸುಖವಾಗಿದ್ದಾರೆಂದೂ ಅವರಿಗೆ ಜೀವನಾಂಶ ಅಗತ್ಯವಿಲ್ಲವೆಂಬುದೂ ಪೊಳ್ಳುವಾದಗಳು ಎಂಬುದಾಗಿ ’ವಜ್ರಗಳು’ ಕಾದಂಬರಿ ನಿರೂಪಿಸಿದೆ. ಸೃಜನಾತ್ಮಕ ಕೃತಿಗಳ ಮೂಲಕವಲ್ಲದೆ ಇತರ ಬರಹ ಭಾಷಣಗಳ ಮೂಲಕವೂ ಸಾರಾ ಅಬೂಬಕ್ಕರ್ ಅವರು ಮತಾಂಧ ಪುರುಷರೊಂದಿಗೆ ಸಂಘರ್ಷಕ್ಕೆ ಇಳಿದದ್ದುಂಟು. ಕೆಲವು ಪುರುಷ ಬರಹಗಾರರು ತನಗೆ ನೀಡಿದ ಬಹಿಷ್ಕಾರವನ್ನು ಅವರು ನ್ಯಾಯಲಯದಲ್ಲೂ ಪ್ರಶ್ನಿಸಿ ಗೆದ್ದಿದ್ದಾರೆ. ಧಾರ್ಮಿಕ ನಿಯಮಗಳನ್ನು ಹೊರತುಪಡಿಸಿ, ನಾವು ಯಾವ ದೇಶದಲ್ಲಿ ಬದುಕುತ್ತಿದ್ದೇವೆಯೋಆ ದೇಶದ ಸಾಮಾಜಿಕ ನಿಯಮಗಳನ್ನು (ವಿವಾಹ ವಿಚ್ಛೇದನ ಮುಂತಾದವುಗಳು) ಅನುಸರಿಸಬೇಕೆಂದು ಖುರಾನ್ ಬೋಧನೆ. ಅದರಂತೆ ಸಿವಿಲ್ ನಿಯಮಗಳನ್ನು ರೂಪಿಸಿಬೇಕೆಂದು ಸಾರಾ ಆಗ್ರಹಿಸುತ್ತಾರೆ.

ಕಳೆದ ಎರಡು ದಶಕಗಳಿಂದ ಕೆಟ್ಟಿರುವ ಕೋಮು ಸೌಹಾರ್ದ ಸಾರಾ ಅವರನ್ನು ಧೃತಿಗೆಡಿಸಿದೆ. ಅವರು ಸೌಹಾರ್ದವನ್ನು ಗಟ್ಟಿಗೊಳಿಸಲು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ತಾವಾಗಿಯೇ ಬಂದು ಭಾಗವಹಿಸುತ್ತಿದ್ದಾರೆ. ಅವರೊಂದಿಗೆ ದ್ವೇಷ ಇಟ್ಟುಕೊಂಡಿರುವ ಮೂಲಭೂತವಾದಿ ಮತಾಂಧರು ಕೂಡಾ ಇಂಥ ಸೌಹಾರ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಅವರಿಗೆ ಇಕ್ಕಟ್ಟಿನ ಸನ್ನಿವೇಶವಾಗಿದೆ. ಇದೇ ಮತಾಂಧರು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕಿನ ಹೆಸರಿನಲ್ಲಿ ಕಾಲೇಜ್ ವಿದ್ಯಾರ್ಥಿಯನಿಯರಿಗೆ ಬುರ್ಖ ಕಡ್ಡಾಯಗೊಳಿಸಲು ಮಾಡುತ್ತಿರುವ ಹುನ್ನಾರವನ್ನು ಬಯಲುಗೊಳಿಸುವಲ್ಲಿ ಅವರು ಹಿಂದುಳಿದಿಲ್ಲ. ಅದರ ಜೊತೆಗೆ ಹಿಂದೂ ಮತಾಂಧರು ಗುಜರಾತಿನಲ್ಲಿ 2002ರಲ್ಲಿ ನಡೆಸಿದ ಕಗ್ಗೊಲೆಯನ್ನು ಬಯಲುಗೊಳಿಸಿದ ಆರ್.ಬಿ.ಶ್ರೀಕುಮಾರ್ ಅವರ ’ಧರ್ಮದ ಹೆಸರಿನಲ್ಲಿ’ ಪುಸ್ತಕವನ್ನು ಅನುವಾದಿಸಿ ಪ್ರಕಟಿಸುವ ತುರ್ತನ್ನೂ ಅವರು ಇಟ್ಟುಕೊಂಡಿದ್ದಾರೆ. ಅಷ್ಟೇ ಖೇದದಿಂದ ’ತುರ್ತು ಪರಿಸ್ಥಿತಿಯ ಕರಾಳ ಮುಖಗಳು್’ ಮೂಲಕ ಕೇರಳದ ರಾಜನ್ ಕೊಲೆ ಪ್ರಕರಣವೂ ಸರ್ವಾಧಿಕಾರದ ಅಮಾನುಷ ಮುಖ ಎಂಬುದನ್ನು ಮನಕಲಕುವಂತೆ ಅನುವಾದಿಸಿದ್ದಾರೆ.

ನಮ್ಮ ಕಾಲದ ಅತಿ ಮುಖ್ಯರಾದ ಬರಹಗಾರ್ತಿಯೊಬ್ಬರು ಬರವಣಿಗೆಗೆ ತೊಡಗಿದ್ದು ತುಂಬಾ ತಡವಾಗಿ- ತಮ್ಮ ಮಧ್ಯ ವಯಸ್ಸಿಗೆ ತಲುಪಿದಾಗ. 50 ರ ದಶಕದಲ್ಲಿ ಎಸ್ಎಸ್ಎಲ್ಸಿ ವರೆಗೆ ಮುಸ್ಲಿಂ ಹೆಣ್ಣುಮಗಳೊಬ್ಬಲು ಓದಿದ್ದೇ ವಿಶೇಷ. ಅವರೊಳಗೇ ಇದ್ದ ಮುಸ್ಲಿಂ ಹೆಣ್ಣು ಮಕ್ಕಳ ದುಃಖ ಉಮ್ಮಳ ತಲ್ಲಣಗಳೆಲ್ಲ ಎಷ್ಟೋ ಧೀರ್ಘಕಾಲದ ಬಳಿಕ ಸಾರಾ ಅವರ ಕೃತಿಗಳಲ್ಲಿ ಅವರು ಸೃಷ್ಠಿಸಿದ ಪಾತ್ರಗಳಿಂದ ಬಹಿರಂಗಕ್ಕೆ ಗೋಚರವಾದುದು ಕನ್ನಡ ಸಾಂಸ್ಕೃತಿಕ ಪ್ರಪಂಚದ ಅತೀ ಮುಖ್ಯ ವಿದ್ಯಮಾನ. ಈ ವಿದ್ಯಮಾನದಿಂದ ಪ್ರಜೋದನೆ ಪಡೆದು ಇನ್ನೂ ಅನೇಕ ದಮನಿತ ಧ್ವನಿಗಳೂ ಕನ್ನಡ ಸಾಹಿತ್ಯದಲ್ಲಿ ಕೇಳಿಸುವಂತಾಗಿದೆ ಎಂಬುದನ್ನೂ ನಾವೆಲ್ಲ ಗಮನಿಸಬೇಕು.

ಲೇಖಕರ ಇತರ ಕೃತಿಗಳು
10%
ಪಾಕ ವೈವಿಧ್ಯ ಮಾಂಸಾಹಾರಿ ....
ಸಾರಾ ಅಬೂಬಕ್ಕರ್, Sara Aboobakar
Rs. 160    Rs. 144
10%
ಚಂದ್ರಗಿರಿ ತೀರದಲ್ಲಿ
ಸಾರಾ ಅಬೂಬಕ್ಕರ್, Sara Aboobakar
Rs. 125    Rs. 113
10%
ಸಂದೇಹದ ಸುಳಿಯಲ್ಲಿ
ಸಾರಾ ಅಬೂಬಕ್ಕರ್, Sara Aboobakar
Rs. 150    Rs. 135
Best Sellers
ದಶಾವತಾರ ಶ್ರೀರಾಮಕಥಾಸುಧಾ (ಬಾಲಕಾಂಡ) (Hard Cover)
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 315/-   Rs. 350
ಮೊರಸು ಒಕ್ಕಲಿಗರು – ಒಂದು ಸಾಂಸ್ಕೃತಿಕ ಅಧ್ಯಯನ
ನಾಗರಾಜು ಎಂ ಎಚ್, Nagaraju M H
Rs. 225/-   Rs. 250
ಕೈಲಾಸಂ joಕ್ಸೂ. Sonಗ್ಸೂ. ಹಾಗೂ ಬೀchi ಬುಲೆಟ್ಸು ಬಾಂಬ್ಸು ಭಗವದ್ಗೀತೆ
ಕೇಶವರಾವ್ ಬಿ ಎಸ್, Keshava Rao B S
Rs. 136/-   Rs. 160
ಅಮರ ಚಿತ್ರ ಕಥೆ ಮಾಲಿಕೆ(Set of 8 Books) / Amar Chitra Katha (Kannada)
ಅನಂತ್ ಪೈ, Anant Pai
Rs. 360/-   Rs. 400

Latest Books
ಹಿಮಗಿರಿಯ ಗರ್ಭದಲ್ಲಿ
ರವಿ ಬೆಳಗೆರೆ, Ravi Belagere
Rs. 108/-   Rs. 120
ಶ್ರೀ ರಾಮಾಯಣ ದರ್ಶನಂ : ವಿಶೇಷ ಆವೃತ್ತಿ (ಗಮಕದ ಧ್ವನಿ ಮುದ್ರಿಕೆಯ ಸಹಿತ)
ಕುವೆಂಪು, Kuvempu
Rs. 500/-
ನೂರೆಂಟು ಮಾತು - 10
ವಿಶ್ವೇಶ್ವರ ಭಟ್, Vishweshwar Bhat
Rs. 203/-   Rs. 225
ಹತ್ತು ಮುತ್ತು : ಮಕ್ಕಳ 10 ನೀತಿಯುಕ್ತ ನಾಟಕಗಳು
ನಾಗರಾಜ ಕೋಟೆ, Nagaraja Kote
Rs. 104/-   Rs. 115


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.