|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನಸ್ಸೊಂದು ಕ್ರಿಯಾಶೀಲವಾಗಿದ್ದು ಸುತ್ತಲ ಘಟನೆಗಳನ್ನು ವಿಶೇಷ ರೀತಿಯಲ್ಲಿ ಗ್ರಹಿಸಿದಾಗ ಇಂತಹ ಲೇಖನಗಳು ಮೂಡಬಲ್ಲವು. ಇವು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲ್ಪಟ್ಟ ಪತ್ರಿಕೆಗಳಲ್ಲೂ ಕಾಣಿಸಿಕೊಂಡಂಥವು. ವಿನೋದ-ಲಘುಹರಟೆ-ಲಘು ಹಾಸ್ಯ ಮುಂತಾದವುಗಳ ಸಂಗಮವಾಗಿದ್ದು ನಮ್ಮನ್ನು ಹರ್ಷಚಿತ್ತರನ್ನಾಗಿಸುತ್ತವೆ. ಘಟನೆಗಳೇನೇ ಇರಲಿ, ಅವನ್ನು ವರ್ಣಿಸುವ-ಹೇಳುವ ಕಲೆ ಕರಗತವಾಗಿದ್ದಲ್ಲಿ ಕೇಳಲೂ ಉತ್ಸಾಹ, ಓದಲೂ ಆತುರ. ಪ್ರತಿದಿನವೂ ಪ್ರತಿಕ್ಷಣವೂ ನಮಗಾಗುವ ಅನುಭವಗಳಿಗೇನೂ ಕೊರತೆ ಇರುವುದಿಲ್ಲ ಕೆಲವಂತೂ ರೋಚಕ-ಆನಂದ-ಆಘಾತ-ವಿಸ್ಮಯ-ಆತಂಕ... ಇನ್ನೂ ಏನೇನೋ! ಅವನ್ನೆಲ್ಲ ಸಮಚಿತ್ತದಿಂದ ಸ್ವೀಕರಿಸಿ ಸಮಾನಮನಸ್ಕರೊಂದಿಗೆ ಹಂಚಿಕೊಂಡರಂತೂ ಇನ್ನೂ ಖುಷಿ. ಬಾಲ್ಯದ ತುಂಟಾಟ, ಹರೆಯದ ಕಲ್ಪನಾಲೋಕ, ಪ್ರೌಢವಯಸ್ಸಿನ ಗಾಂಭೀರ್ಯ ಇವೆಲ್ಲ ಜೀವನದಲ್ಲಿ ಒಂದೇ ಸಲಕ್ಕೆ ದಕ್ಕಲಾರದಂಥವು. ಹಂತ ಹಂತವಾಗಿ ಪಕ್ವವಾಗಿ ಬರುವ ಈ ಅನುಭವಗಳು ಯಾವುದೇ ಇರಲಿ, ತಾವು ಕಂಡುದನ್ನು ವಿಶ್ಲೇಷಿಸಿ ನಮಗೂ ರುಚಿ ಹತ್ತಿಸಿ ಓದಬೇಕೆಂಬಾಸೆ ಮೂಡಿಸಿದವರು ಶ್ರೀಮತಿ ಎಸ್. ಸಾಯಿಲಕ್ಷ್ಮಿ.
|
| |
|
|
|
|
|
|
|
|
|