Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 145    
10%
Rs. 131/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/4 Crown Size
ISBN : 9788184673104
ಕೋಡ್ : 002075

ಕಂಪ್ಯೂಟರ್ ಕುರಿತು ಕನ್ನಡದಲ್ಲಿ ಪುಸ್ತಕ ಬರೆಯಲು ಹೊರಟವರಿಗೆ ಮೊದಲು ಎದುರಾಗುವ ಪ್ರಶ್ನೆ - ಯಾವ ಹಂತದವರಿಗೆ? ಇದರ ಹಿಂದೆಯೇ ಇನ್ನೊಂದು ಪ್ರಶ್ನೆ ಏಳುತ್ತದೆ - ನಿರೂಪಣೆ ಹೇಗಿರಬೇಕು? ಈ ಹೊತ್ತು, ಬದುಕೆಲ್ಲ ಇಂಗ್ಲಿಷ್‌ಮಯವಾಗಿರುವಾಗ ಹೊಸತಾಗಿ ಕಂಪ್ಯೂಟರ್ ಕಲಿಯಲು ಹೊರಟವರಿಗೆ ಶುದ್ಧ ಕನ್ನಡದಲ್ಲಿ ಬರೆದು ಪದ ಪದಗಳಿಗೂ ಅರ್ಥಕ್ಕಾಗಿ ನಿಘಂಟು ಹುಡುಕುವಂತೆ ಮಾಡುವ ಭಾಷಾ ಪ್ರೇಮಿಗಳದ್ದು ಒಂದು ವರ್ಗ. ಆವರಣದಲ್ಲಿ ಇಂಗ್ಲಿಷ್ ಸಮಾನ ಪದಗಳನ್ನು ಕೊಡುತ್ತ `ಬರೆದು ಗೆದ್ದೇ` ಎಂದು ಸಂಭ್ರಮಿಸುವ ಇನ್ನೊಂದು ವರ್ಗ. ಸಾಕ್ಷರರು ಎಂದರೆ ಅಕ್ಷರ ಕಲಿತವರು ಎನ್ನುವುದು ಅಡುಗೂಲಜ್ಜಿ ಕಾಲದ ವ್ಯಾಖ್ಯೆಯಾಯಿತು. ಮೊಬೈಲ್ ಫೋನ್‌ಗಳು ಈಗ ತಂತ್ರಜ್ಞಾನ ಮತ್ತು ಬಳಕೆದಾರರ ನಡುವಿನ ಕಂದರವನ್ನು ಹೆಚ್ಚು ಕಡಿಮೆ ಮುಚ್ಚಿಹಾಕಿಬಿಟ್ಟಿವೆ. ಅಕ್ಷರದ ಮಟ್ಟಿಗೆ ಸಾಕ್ಷರತೆ ಇಲ್ಲದವರು ಮೊಬೈಲ್ ವಿಚಾರಕ್ಕೆ ಬಂದಾಗ ಸಾಕ್ಷರರೇ. ಆದರೆ ಅಂಥದೇ ಬಿರುಗಾಳಿ ಕಂಪ್ಯೂಟರ್ ಸಾಕ್ಷರತೆಯ ಬಗ್ಗೆ ಇಂದಿಗೂ ಬೀಸಿಲ್ಲ ಎಂಬುದು ವಿಷಾದವೆನ್ನಿಸಿದರೂ ವಾಸ್ತವತೆಯೇ. ಕಂಪ್ಯೂಟರ್ ಚರಿತ್ರೆಯಿಂದ ತೊಡಗಿ ಕ್ಯೂಆರ್ ಕೋಡ್‌ವರೆಗೆ ವಿಸ್ತರಿಸಿರುವ `ಕಂಪ್ಯೂಟರ್ ಪ್ರಪಂಚ` ಕಲಿಯಲು ಪ್ರೇರೇಪಿಸುವ ಹೊಸ ಮಾರ್ಗವೊಂದನ್ನು ಅನಾವರಣಗೊಳಿಸಿದೆ. ಬ್ಲಾಗ್ ತೆರೆಯಬೇಕೆ? ಇಮೇಲ್ ಮಾಡಬೇಕೆ? ಇಂಟರ್‌ನೆಟ್ ಬಗ್ಗೆ ಇಣುಕು ನೋಟಬೇಕೆ? ಕುರ್ಚಿಯಲ್ಲಿ ಅಲ್ಲಾಡದೆ ಕುಳಿತು ಕಂಪ್ಯೂಟರ್ ಪ್ರಪಂಚದಲ್ಲಿ ವಿಹರಿಸಲು ನೆರವಾಗುವ ಆತ್ಮೀಯ ಧಾಟಿಯಲ್ಲಿ ನಿಮಗೆ ಇನ್‌ಸ್ಟ್ರಕ್ಷನ್ಸ್‌ಗಳನ್ನು ಕೊಡುವ ಕೃತಿ `ಕಂಪ್ಯೂಟರ್ ಪ್ರಪಂಚ`. ಖುಷಿಕೊಡುವ ಒಂದು ವಿಚಾರ - ಅನೇಕ ಅಧ್ಯಾಯಗಳಲ್ಲಿ ನಿಮಗೆ ಟಿಪ್ಸ್‌ಗಳಿವೆ. ವಿಶೇಷ ಮಾಹಿತಿಗಳಿವೆ

ಟಿ ಜಿ ಶ್ರೀನಿಧಿಯವರು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಿಂದ ಬಿ.ಇ. ಪದವಿ ಹಾಗೂ ಬಿಟ್ಸ್ ಪಿಲಾನಿಯಿಂದ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಾಫ್ಟ್‌ವೇರ್ ತಂತ್ರಜ್ಞನಾಗಿ ಉದ್ಯೋಗ. ವಿಜ್ಞಾನ ತಂತ್ರಜ್ಞಾನ ಬರವಣಿಗೆ ಅಚ್ಚುಮೆಚ್ಚಿನ ಹವ್ಯಾಸ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಈವರೆಗೆ ಐದುನೂರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಹಲವು ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೂ ಉಂಟು. ಪುಸ್ತಕಗಳ ಸಾಲಿನಲ್ಲಿ ಇದು ಹತ್ತನೆಯದು. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಬಂದಿದೆ.

ಲೇಖಕರ ಇತರ ಕೃತಿಗಳು
10%
ಟೆಕ್ ಲೋಕದ ಹತ್ತು ....
ಶ್ರೀನಿಧಿ ಟಿ ಜಿ, Srinidhi T G
Rs. 60    Rs. 54
10%
ಪುಟ್ಟ ಪುಟ್ಟಿಯ ಪರಿಸರ ....
ಶ್ರೀನಿಧಿ ಟಿ ಜಿ, Srinidhi T G
Rs. 60    Rs. 54
10%
ಡಿಜಿಟಲ್ ಕ್ಯಾಮೆರಾ ಮೋಡಿ ....
ಶ್ರೀನಿಧಿ ಟಿ ಜಿ, Srinidhi T G
Rs. 175    Rs. 158
10%
ಕಂಪ್ಯೂಟರ್‌ಗೆ ಪಾಠ ಹೇಳಿ...
ಶ್ರೀನಿಧಿ ಟಿ ಜಿ, Srinidhi T G
Rs. 70    Rs. 63
Best Sellers
Little Oxford English Dictionary (Hard Cover)
Sara Hawker
Rs. 344/-   Rs. 382
ಹುಳಿಮಾವು ಮತ್ತು ನಾನು
ಇಂದಿರಾ ಲಂಕೇಶ್, Indira Lankesh
Rs. 135/-   Rs. 150
ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ
ಅನಂತರಾಮು ಟಿ ಆರ್, Anantharamu T R
Rs. 153/-   Rs. 170
ಮಾರ್ಗ (ಭಾಗ - 4)
ಕಲಬುರ್ಗಿ ಎಂ ಎಂ, Kalburgi M M
Rs. 475/-   Rs. 500

Latest Books
ರಾಜೇಂದ್ರ್ ಕಾರಂತ ೨ ನಾಟಕ : ಮರಣ ಮೃದಂಗ ಮತ್ತು ಪೋಲೀಸ್
ರಾಜೇಂದ್ರ ಕಾರಂತ, Rajendra karanth
Rs. 126/-   Rs. 140
ಬದಲಾವಣೆಯ ಬೆನ್ನಟ್ಟಿ.... : ಕಲೈಡೋಸ್ಕೋಪಿನಲ್ಲಿ ಕಾಲನ ಹೆಜ್ಜೆಗಳು
ಪ್ರಕಾಶ್ ನಾಯಕ್, Prakash Nayak
Rs. 360/-   Rs. 400
ಚಾಣಕ್ಯ ಕಣಜ
ಬಿರಾದಾರ ಎನ್ ಎಂ, Biradar N M
Rs. 713/-   Rs. 750
ಅರೆ ಬೆಳಕು
ಜೋಗಿ, Jogi
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.