|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಮ್ಮಿಂದದ ಹೇಳಿಸಿಕೊಳ್ಳದೆ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡಿವುದಿಲ್ಲ; ಅದು ಏನು ಮಾಡಿವುದಿದ್ದರೂ ನಾವು ಹೇಳಿದ್ದನ್ನುಷ್ಟೆ, ಹೇಳಿದಂತೆಯೇ ಮಾಡುತ್ತದೆ ಎನ್ನುವುದು ನಮಗೆ ಗೊತ್ತು. ಆದರೆ ನಮಗೇನು ಬೇಕು ಎನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ?
ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್ವೇರನ್ನು ಕೊಂಡುಕೊಂಡರೆ ತಾನೆ? ಹಾಗಾದರೆ ಸಾಫ್ಟ್ವೇರನ್ನು ಸಿದ್ಧಪಡಿಸುವುದು ಎಂದರೇನು, ಮತ್ತು ಅದು ಸಾಧ್ಯವಾಗುವುದು ಹೇಗೆ?
ತರ್ಕ (ಲಾಜಿರ್ಕ್), ಆಲ್ಗರಿದಂ (ಕ್ರಮಾವಳಿ), ಪ್ಲೋಚಾರ್ಟ್ (ಪ್ರವಾಹನಕ್ಷೆ) ಇತ್ಯಾದಿಗಳಿಂದ ಪ್ರೋಗ್ರಾಮಿಂಗ್, ಸಾಫ್ಟ್ವೇರ್ ಇಂಜಿನಿಯರಿಂಗ್ನಂತಹ ವಿಷಯಗಳವರೆಗೆ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಅಂಶಗಳನ್ನು ಸರಳವಾಗಿ ಪರಿಚಯುಸುವ ಪ್ರಯತ್ನವೇ ಈ ಪುಸ್ತಕ ‘ಕಂಪ್ಯೂಟರ್ಗೆ ಪಾಠ ಹೇಳಿ...‘
|
ಟಿ ಜಿ ಶ್ರೀನಿಧಿಯವರು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಿಂದ ಬಿ.ಇ. ಪದವಿ ಹಾಗೂ ಬಿಟ್ಸ್ ಪಿಲಾನಿಯಿಂದ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ತಂತ್ರಜ್ಞನಾಗಿ ಉದ್ಯೋಗ. ವಿಜ್ಞಾನ ತಂತ್ರಜ್ಞಾನ ಬರವಣಿಗೆ ಅಚ್ಚುಮೆಚ್ಚಿನ ಹವ್ಯಾಸ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಈವರೆಗೆ ಐದುನೂರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಹಲವು ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೂ ಉಂಟು. ಪುಸ್ತಕಗಳ ಸಾಲಿನಲ್ಲಿ ಇದು ಹತ್ತನೆಯದು. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಬಂದಿದೆ.
|
|
| |
|
|
|
|
|
|
|
|
|