Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 110   
10%
 
 
Rs. 99/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9789389308761
ಕೋಡ್ : 003611

ಈ ಭಾಷಣಗಳನ್ನು ೧೯೬೭ರಲ್ಲಿ ಗ್ರಂಥರೂಪದಲ್ಲಿ ನಾವು ಪ್ರಕಟಿಸಿದಾಗ ಅನೇಕ ಜನರು ಇದನ್ನು ಸ್ವಯಂಸ್ಫೂರ್ತಿಯಿಂದ ಸ್ವಾಗತಿಸಿದರು. "ಮರಾಠಾ" ಪತ್ರಿಕೆಯ ಆಚಾರ್ಯ ಅತ್ರೆ, "ನವಕಾಳ" ಪತ್ರಿಕೆಯ ಶ್ರೀ ಅಪ್ಪಾಸಾಹೇಬ ಖಾಡಿಲ್ಕರ್, "ನವಶಕ್ತಿ"ಯ ಪು. ರಾ. ಬೆಹೆರೆ, ಶ್ರೀ ಪಾಂ. ವಾ. ಗಾಡ್ಗೀಳರು ಮುಂತಾದ ಪತ್ರಕರ್ತರು ವಿಶೇಷ ಅಗ್ರಲೇಖನಗಳನ್ನು ಬರೆದು ಅದರ ಮಹತ್ವವನ್ನು ಕೊಂಡಾಡಿದರು. ಸಾಕಷ್ಟು ವೃತ್ತಪತ್ರಿಕೆಗಳು ಅದರ ವಿಸ್ತೃತ ಪರಾಮರ್ಶೆಯನ್ನು ಕೈಗೊಂಡವು. ಅನೇಕ ಓದುಗರು ಸತತವಾಗಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ ನಮಗೆ ಅಭಿನಂದನೆ ಸಲ್ಲಿಸಿದರು. ಸಮಾಜದ ಎಲ್ಲ ಸ್ತರಗಳಲ್ಲೂ ಈ ಕೃತಿಯನ್ನು ಅತ್ಯುತ್ತಮವಾಗಿ ಸ್ವಾಗತ ಮಾಡಲಾಯಿತು. “ಲೋಕಮಾನ್ಯ ತಿಲಕರ ನಂತರ ಭಾರತದ ರಾಜಕಾರಣದ ಮೇಲೆ ತಮ್ಮ ಛಾಪು ಬೀರುವ ನಾಯಕ ಕಾ|| ಡಾಂಗೆ ಬಿಟ್ಟರೆ ಬೇರೊಬ್ಬರಿಲ್ಲ” ಎಂದು ಮಾಡಖೋಲ್ಕರ್‌ರಂತಹ ಅನುಭವಿ ಪತ್ರಕರ್ತರು ಮತ್ತು ಶ್ರೇಷ್ಠ ಸಾಹಿತಿಗಳು ಅವರ ಬಗ್ಗೆ ಮಾಡಿದ ಉದ್ಗಾರವು ಒಂದು ರೀತಿಯಲ್ಲಿ ಕಾ|| ಡಾಂಗೆಯವರ ಪ್ರಭಾವಶಾಲಿ ವ್ಯಕ್ತಿತ್ವಕ್ಕೆ ನೀಡಿದ ಗೌರವವೆಂದೇ ನಾವು ಭಾವಿಸುತ್ತೇವೆ.

"ಭಾಷಣದಿಂದ ನಾಯಕತ್ವ ಮತ್ತು ನಾಯಕತ್ವದಿಂದ ಭಾಷಣ, ಇವುಗಳ ಸಮತೋಲನವನ್ನು ಸಾಧಿಸಿದ ಕಾ|| ಡಾಂಗೆಯಂತಹ ಸವ್ಯಸಾಚಿ ನಾಯಕ ಭಾರತದಲ್ಲಿ ಸಿಗುವುದು ಅಪರೂಪ" ಎಂದು "ನವಕಾಳ" ಪತ್ರಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಇದೀಗ ೭೬ ವರ್ಷ ದಾಟಿದ ಕಾ|| ಡಾಂಗೆಯವರು, ೧೬ನೇ ವಯಸ್ಸಿನಿಂದ ಆರಂಭಿಸಿ ಇಲ್ಲಿಯವರೆಗೂ ಅಕ್ಷರಶಃ ಸಾವಿರಾರು ಸಭೆ-ಸಮ್ಮೇಳನ-ಮೈದಾನಗಳಲ್ಲಿ ಮಾಡಿದ ಭಾಷಣಗಳು ಅಪೂರ್ವವಾದವು. ಇಂದಿಗೂ ಅವರ ವಾಗ್ಮಯತೆ ಕಿಂಚಿತ್ತೂ ಕುಂದಿಲ್ಲ. ಚುನಾಯಿತ ಪ್ರತಿನಿಧಿಯಾಗಿ ಅವರು ಮಾಡಿರುವ ಭಾಷಣಗಳನ್ನು ಹಲವು ಸಂಪುಟಗಳಲ್ಲಿ ಪ್ರಕಟಿಸಬಹುದಾಗಿದೆ. ರಾಜಕಾರಣ, ಕಾರ್ಮಿಕ ಚಳವಳಿ, ಅರ್ಥಶಾಸ್ತ್ರ, ಚರಿತ್ರೆ, ಸಾಹಿತ್ಯ, ತತ್ವಜ್ಞಾನ, ಯಾವುದೇ ವಿಷಯವೂ ಕಾ|| ಡಾಂಗೆಯವರಿಗೆ ನಿಷಿದ್ಧವಾಗಿರಲಿಲ್ಲ.

ಯಾರಾದರೂ ಘನವಿದ್ವಾಂಸರು ಹಳೆಯ ವೃತ್ತಪತ್ರಿಕೆಗಳಲ್ಲಿರುವ ಅವರ ಭಾಷಣಗಳನ್ನು ಕಡತಗಳಿಂದ ಹುಡುಕಿ ತೆಗೆದು ಒಂದೆಡೆ ಸಂಕಲನ ಮಾಡಿದಲ್ಲಿ ಭಾರತದ ಚರಿತ್ರೆಗೆ ಅಮೂಲ್ಯ ಕೊಡುಗೆಯಾಗಬಹುದು ಎಂದೇ ನಾನು ಭಾವಿಸುತ್ತೇನೆ. ಅಲ್ಲಿಯವರೆಗೆ ಇದು ಕ್ಷೀರದಾಹವನ್ನು ತಣಿಸಿಕೊಳ್ಳುವ ಒಂದು ಯತ್ನವಾಗಿದೆ.

Best Sellers
ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ
ಸುಭಾಷ ಪಾಳೇಕರ್, Subhash Palekar
Rs. 135/-   Rs. 150
ಗೋಮುಖ (ಪ್ರವಾಸ ಕಥನ)
ಗಜಾನನ ಶರ್ಮ ಡಾ, Gajanana Sharma Dr
Rs. 207/-   Rs. 230
ಬದುಕು ಬದಲಿಸಬಹುದು
ನೇಮಿಚಂದ್ರ, Nemichandra
Rs. 158/-   Rs. 175
ಕಳಸಾ ಬಂಡೂರಿ ನೀರಿಗಾಗಿ ಹಾಹಾಕಾರ ಮತ್ತು ನೀಚ ರಾಜಕಾರಣ
ಸಿರಿಮನೆ ನಾಗರಾಜ್, Sirimane Nagaraj
Rs. 23/-   Rs. 25

Latest Books
ಮುರಿದ ಸೈಕಲ್ ಹುಲಾ ಹೂಪ್ ಹುಡುಗಿ
ಯೋಗೀಂದ್ರ ಮರವಂತೆ, Yogindra Maravante
Rs. 113/-   Rs. 125
ಮೀಸಲಾತಿ : ಭ್ರಮೆ ಮತ್ತು ವಾಸ್ತವ
ನಾಗಮೋಹನದಾಸ್ ಹೆಚ್ ಎನ್, Nagamohanadas H N
Rs. 108/-   Rs. 120
ಪ್ರೀತಿಯಲ್ಲಿ : ಓಶೋ
ಓಶೋ, Osho
Rs. 176/-   Rs. 195
ಮೋಬೀಡಿಕ್ ಮತ್ತು ಅದ್ಭುತ ದ್ವೀಪ
ನಾಗರಾಜರಾವ್ ಎಂ ವಿ, Nagarajarao M v
Rs. 68/-   Rs. 75


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.