|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೬೭ರಲ್ಲಿ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ ಎಂಬ ಗ್ರಂಥಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡ ಶ್ರೀ ಡಿ.ವಿ. ಗುಂಡಪ್ಪನವರು ಸಾಹಿತ್ಯದಲ್ಲಿ, ಸಾರ್ವಜನಿಕದಲ್ಲಿ ತಮ್ಮ ಹಿರಿಮೆಯನ್ನು ಮೆರೆದಂಥ ವಿಶಿಷ್ಟ ವ್ಯಕ್ತಿ. ದೇಶದ ಹಿತವೇ ಅವರ ಮುಖ್ಯ ಕಾಳಜಿಯಾಗಿತ್ತು. ಅವರಿಂದಾಗಿಯೇ ಕನ್ನಡ ಸಾಹಿತ್ಯ ಪರಿಷತ್ತು ‘ಸಾಂಸ್ಕೃತಿಕ ಕೇಂದ್ರ’ವಾಗಿ ಬಎಳೆತು. “ಕನ್ನಡ ನಾಡಿನಲ್ಲಿ ಕನ್ನಡ ಮೊದಲನೆಯ ಸ್ಥಾನದಲ್ಲಿರಬೇಕು” ಎಂಬ ದೃಢವದ ನಿಲುವನ್ನು ಮೆರೆದ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಾಡಿರುವ ಕಾರ್ಯ ವಿಶೇಷ ಮಹತ್ವದ್ದಾಗಿದೆ. ಸಾರ್ವಜನಿಕರನ್ನು ಉದ್ಭೋದಗೊಳಿಸುವ ಅವರ ಪ್ರಯತ್ನದ ಪ್ರತೀಕವೇ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ”. ‘ಸಾರ್ವಜನಿಕರಲ್ಲಿ ಸಾತ್ವಿಕ’ ಎಂಬ ಅವರ ಒಂದು ಕೃತಿಯ ಹೆಸರೇ ಅವರ ಬದುಕು-ವ್ಯಕ್ತಿತ್ವಗಳನ್ನು ಅರ್ಥಪೂರ್ಣವಾಗಿ ನಿರೂಪಿಸುತ್ತದೆ. ಡಿ.ವಿ.ಜಿಯವರ ನಿಕಟವರ್ತಿಗಳೂ ವಾರಣಾಸಿ ಹಿಂದೂ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪದವಿಧರರೂ, ನಿವೃತ್ತ ಲೆಕ್ಕಪತ್ರ ಅಧಿಕಾರಿಗಳೂ ಆದ ಶ್ರೀ ಡಿ. ಆರ್. ವೆಂಕಟರಮಣನ್ ಈ ಪುಸ್ತಕದ ಲೇಖಕರು.
|
| |
|
|
|
|
|
|
|
|
|