
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
196 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9789384486402 |
ಕೋಡ್ |
: |
189105 |
ಕೆ.ಎಸ್. ನರಸಿಂಹಸ್ವಾಮಿಯವರು ಹುಟ್ಟಿದ್ದು ೧೯೧೫ರಲ್ಲಿ, ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ. ೧೯೨೧ರಿಂದ ೧೯೨೮ರವರೆಗಿನ ಅವಧಿಯಲ್ಲಿ ಮೈಸೂರು ಟ್ರೈನಿಂಗ್ ಕಾಲೇಜಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ; ೧೯೨೮ರಿಂದ ೧೯೩೧ರವರೆಗಿನ ಅವಧಿಯಲ್ಲಿ ಮೈಸೂರಿನ ಮಹಾರಾಜ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ; ೧೯೩೪ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಪೂರ್ಣ ಶಿಕ್ಷಣ. ೧೯೩೭ರಲ್ಲಿ ಸರಕಾರಿ ನೌಕರಿಗೆ ಸೇರಿದ ಅವರು ೧೯೭೦ರಲ್ಲಿ ಹೌಸಿಂಗ್ ಬೋರ್ಡ್ ನೌಕರಿಯಿಂದ ನಿವೃತ್ತರಾದರು. ಅವರು ನಿಧನರಾದದ್ದು ೨೦೦೩ರಲ್ಲಿ. ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ನರಸಿಂಹಸ್ವಾಮಿಯವರ ಮೊದಲ ಕವನ `ಕಬ್ಬಿಗನ ಕೂಗು` ಪ್ರಕಟವಾದದ್ದು ೧೯೩೧ರಲ್ಲಿ, `ಪ್ರಬುದ್ಧ ಕರ್ಣಾಟಕ` ಪತ್ರಿಕೆಯಲ್ಲಿ. ೧೯೪೨ರಲ್ಲಿ ಅವರಿಗೆ ಕಾಲಾತೀತ ವಿಖ್ಯಾತಿಯನ್ನು ತಂದುಕೊಟ್ಟ ಮೈಸೂರ ಮಲ್ಲಿಗೆ ಹೊರಬಂದಿತು. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ತೆರೆದ ಬಾಗಿಲು, ನವಪಲ್ಲವ, ದುಂಡು ಮಲ್ಲಿಗೆ, ಸಂಜೆ ಹಾಡು, ಕೈಮರದ ನೆಳಲಲ್ಲಿ, ಎದೆ ತುಂಬ ನಕ್ಷತ್ರ, ಮೌನದಲಿ ಮಾತ ಹುಡುಕುತ್ತ, ದೀಪ ಸಾಲಿನ ನಡುವೆ ಅವರ ಇತರ ಮುಖ್ಯ ಕವನ ಸಂಕಲನಗಳು. ೧೯೮೬ರಲ್ಲಿ ಅವರ ಸಮಗ್ರ ಕಾವ್ಯ ಮಲ್ಲಿಗೆಯ ಮಾಲೆ ಪ್ರಕಟವಾಯಿತು. ಉಪವನ ಅವರ ಪ್ರಬಂಧಗಳ, ವಿಮರ್ಶೆಗಳ ಸಂಕಲನ. ಗಾಂಧೀಜಿಯವರ ಕೃತಿಗಳಿಂದ ಆಯ್ದ ಭಾಗಗಳಿರುವ ನನ್ನ ಕನಸಿನ ಭಾರತ, ಯೂರಿಪಿಡೀಸ್ನ ನಾಟಕ ಮೀಡಿಯ, ಮಾರ್ಕ್ ಟ್ವೇನನ ಕಾದಂಬರಿ ಹಕಲ್ಬರಿ ಫಿನ್ನನ ಸಾಹಸಗಳು ಅವರು ಅನುವಾದಿಸಿರುವ ಮುಖ್ಯ ಗ್ರಂಥಗಳು. ನರಸಿಂಹಸ್ವಾಮಿಯವರು ಪಡೆದಿರುವ ಅನೇಕಾನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ದೇವರಾಜ ಬಹದ್ದೂರ್ ಬಹುಮಾನ (೧೯೪೩), ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಶಾಖೆಯ ಬಹುಮಾನ (೧೯೫೭), ಕರ್ನಾಟಕ ರಾಜ್ಯ ಪ್ರಶಸ್ತಿ (೧೯೭೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೮), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಫೆಲೋಶಿಪ್ (೧೯೮೫), ಕೇರಳದ `ಕವಿ ಕುಮಾರನ್ ಆಶಾನ್` ಪ್ರಶಸ್ತಿ (೧೯೮೭), ೬೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೯೦), ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ (೧೯೯೨), ಪಂಪ ಪ್ರಶಸ್ತಿ (೧೯೯೬), ಮಾಸ್ತಿ ಪ್ರಶಸ್ತಿ (೧೯೯೬), ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಫೆಲೋಷಿಪ್ (೧೯೯೯), ಗೊರೂರು ಪ್ರಶಸ್ತಿ (೨೦೦೦) ಮುಖ್ಯವಾದುವು.
|
|
| |
|
|
|
|