|
|

| Rs. 175 | 10% |
Rs. 158/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಪುಸ್ತಕ ಫೋಟೋ ತೆಗೆಯುವ ಹವ್ಯಾಸ ಉಳ್ಳವರಿಗಾಗಿ ಮಾಹಿತಿ ನೀಡುವ ಕೈಪಿಡಿಯಂತಿದೆ. ಫೋಟೋ ತೆಗೆಯಬೇಕಾದಲ್ಲಿ ಫೋಟೋಗ್ರಫಿ ಕಲಿಯಬೇಕಾದ ಕಾಲ ಹಿಂದೆ ಸರಿದು ನವನವೀನ ತಂತ್ರಜಾನದ ಅಭಿವೃದ್ಧಿಯಾಗಿ ಕ್ಯಾಮೆರಾ ಇದ್ದಲ್ಲಿ ಯಾರೂ ಫೋಟೋ ತೆಗೆಯಬಹುದಾದ ಸಂದರ್ಭ ಸೃಷ್ಟಿಯಾಗಿದೆ. ಕ್ಯಾಮೆರಾಗಳ ವಿಧ, ಲೆನ್ಸ್ ಉಪಯೋಗ, ಪಾಯಿಂಟ್ ಅಂಡ್ ಶೂಟ್ ಝೂಮ್ ಬಳಕೆ ಮುಂತಾಗಿ ವಿವರವಾಗಿ ತಿಳಿಸುವ ಕೃತಿಯಿದು. ಫೋಟೋ ತೆಗೆಯುವಲ್ಲಿ ಅನುಸರಿಸಬೆಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸುತ್ತ ಡಿಜಿಟಲ್ ಕ್ಯಾಮೆರಾದ ವೈಶಿಷ್ಟ್ಯವನ್ನು ಎತ್ತಿಹಿಡಿಯಲಾಗಿದೆ. ಇನ್ನಿತರ ಕ್ಯಾಮೆರಾ ಬಳಕೆ ಬಗ್ಗೆ ಮಾಹಿತಿಯಿದ್ದು ಇಂದಿನ ದಿನಗಳಲ್ಲಿ ಹೆಚ್ಚು ಉಪಯೋಗಕ್ಕೆ ಬರುವ ಪುಸ್ತಕವಿದು.
|
ಟಿ ಜಿ ಶ್ರೀನಿಧಿಯವರು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಿಂದ ಬಿ.ಇ. ಪದವಿ ಹಾಗೂ ಬಿಟ್ಸ್ ಪಿಲಾನಿಯಿಂದ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ತಂತ್ರಜ್ಞನಾಗಿ ಉದ್ಯೋಗ. ವಿಜ್ಞಾನ ತಂತ್ರಜ್ಞಾನ ಬರವಣಿಗೆ ಅಚ್ಚುಮೆಚ್ಚಿನ ಹವ್ಯಾಸ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಈವರೆಗೆ ಐದುನೂರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಹಲವು ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೂ ಉಂಟು. ಪುಸ್ತಕಗಳ ಸಾಲಿನಲ್ಲಿ ಇದು ಹತ್ತನೆಯದು. 2011ರಲ್ಲಿ ಪ್ರಕಟವಾದ ‘ತಿನ್ನಲಾಗದ ಬಿಸ್ಕತ್ತು ನುಂಗಲಾರದ ಟ್ಯಾಬ್ಲೆಟ್ಟು’ ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಬಂದಿದೆ.
|
|
| |
|
|
|
|
|
|
|
|
|