Items
0
Total
  0.00 
Welcome Guest.

 
ಡಾ. ಜಿ. ಎಸ್. ಶಿವರುದ್ರಪ್ಪ ಸಮಗ್ರ ಗದ್ಯ - ಸಂಪುಟ - 1
ಲೇಖಕರು: ಶಿವರುದ್ರಪ್ಪ ಜಿ ಎಸ್, Shivarudrappa G S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 450    
10%
Rs. 405/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, Priyadarshini Publications, Bengaluru
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2007
ರಕ್ಷಾ ಪುಟ : ಉತ್ತಮ
ಪುಟಗಳು : 570
ಪುಸ್ತಕದ ಗಾತ್ರ : 1/8 Demy Size
ಕೋಡ್ : 108836

ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಹುಟ್ಟಿದ್ದು ೧೯೨೬ರಲ್ಲಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಅಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ. ೧೯೫೩ರಲ್ಲಿ ಮೈಸೂರು ವಿಶ್ವದ್ಯಾನಿಲಯದಿಂದ ಮೂರು ಚಿನ್ನದ ಪದಕಗಳೊಡನೆ ಎಂ.ಎ. ಪದವಿ; ೧೯೬೫ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ `ಸೌಂದರ್ಯ ಸಮೀಕ್ಷೆ` ಪ್ರೌಢಪ್ರಬಂಧಕ್ಕಾಗಿ ಡಾಕ್ಟೊರೇಟ್ ಪದವಿ. ೧೯೪೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಶಿವರುದ್ರಪ್ಪನವರು ೧೯೬೩ರಿಂದ ೧೯೬೬ರ ವರೆಗೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು; ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ನಂತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾದರು. ಶಿವರುದ್ರಪ್ಪನವರು ಕನ್ನಡದ ಅಗ್ರಶ್ರೇಣಿಯ ಕವಿಗಳಲ್ಲಿ ಒಬ್ಬರಾಗಿ ಮನೆಮಾತಾಗಿರುವವರು. ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ಗೋಡೆ, ಕಾರ್ತೀಕ, ಪ್ರೀತಿ ಇಲ್ಲದ ಮೇಲೆ, ಹೀಗೆ ಅವರ ೧೩ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟವಾಗಿವೆ. ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ, ಮಹಾಕಾವ್ಯ ಸ್ವರೂಪ, ಅನುರಣನ, ಕನ್ನಡ ಕವಿಗಳ ಕಾವ್ಯಕಲ್ಪನೆ, ಅವರ ವಿಮರ್ಶಾ ಕೃತಿಗಳಲ್ಲಿ ಮುಖ್ಯವಾದುವು. ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚಾತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಪ್ರವಾಸ ಕಥನಗಳು. ಶಿವರುದ್ರಪ್ಪನವರು ಪಡೆದಿರುವ ಅನೇಕಾನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ಕರ್ನಾಟಕದ ರಾಷ್ಟ್ರಕವಿ ಗೌರವ (೨೦೦೬), ಸೋವಿಯೆಟ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೩), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೪), ಪಂಪ ಪ್ರಶಸ್ತಿ (೧೯೯೮), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೨), ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ (೨೦೧೦) ಮುಖ್ಯವಾದುವು. ದಾವಣಗೆರೆಯಲ್ಲಿ ನಡೆದ ೬೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದ ಶಿವರುದ್ರಪ್ಪನವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಪ್ರಶಸ್ತಿಗಳೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ `ನಾಡೋಜ` ಪ್ರಶಸ್ತಿಯೂ ಲಭಿಸಿವೆ.

ಲೇಖಕರ ಇತರ ಕೃತಿಗಳು
Rs. 36    Rs. 32
10%
ಜಿ ಎಸ್ ಶಿವರುದ್ರಪ್ಪ ....
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 140    Rs. 126
Rs. 95    Rs. 86
Rs. 450    Rs. 405
Best Sellers
ಡಾ. ಶಿವರಾಮ ಕಾರಂತರ ಸಮಗ್ರ ನಾಟಕಗಳು : ಭಾಗ 1 ರಿಂದ 4
ಶಿವರಾಮ ಕಾರಂತ ಕೆ, Shivarama Karantha K
Rs. 1700/-   Rs. 2000
ಕನ್ನಡ ಛಂದಸ್ಸು
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 108/-   Rs. 120
ಆಚಾರ್ಯ ವಿನೋಬಾ ಭಾವೆ (ವಿಶ್ವಮಾನ್ಯರು)
ಆನಂದ್ ಎನ್ ಎಲ್, Anand N L
Rs. 23/-   Rs. 25
Three Thousand Stitches : Ordinary People, Extraordinary Lives
ಸುಧಾ ಮೂರ್ತಿ, Sudha Murthy
Rs. 213/-   Rs. 250

Latest Books
ತ್ರಿಜ್ಯ : ಆಲೋಚನೆಗಳ ಕುರಿತು ಚಿಂತನೆಗಳು
ಗಣೇಶ ದೇವಿ, Ganesh Devi
Rs. 153/-   Rs. 170
ಕಗ್ಗ ರಸಧಾರೆ : ಡಿವಿಜಿಯವರ ಮಂಕುತಿಮ್ಮನ ಕಗ್ಗಗಳ ರಸಧಾರೆ - ಸಂಪುಟ ೪
ರವಿ ತಿರುಮಲೈ, Ravi Thirumalai
Rs. 225/-   Rs. 250
ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್
ಬೇನಾಳ ಎಚ್ ಎಸ್, Benal H s
Rs. 216/-   Rs. 240
ಸಾಧನಗಳಿಂದ ಯೋಗ ಸಾಧನೆ
ವಿರೂಪಾಕ್ಷ ಬೆಳವಾಡಿ, Virupaksha Belavadi
Rs. 306/-   Rs. 340


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.