|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಗಾಂಧೀಜಿಯವರು ‘ಅಪರಿಗ್ರಹ‘ ವ್ರತವನ್ನು ಕೈಗೊಂಡಿದ್ದರು. ತನ್ನ ಬದುಕಿಗೆ ಅಗತ್ಯವಾಗಿರುವುದಷ್ಟನ್ನು ಮಾತ್ರ ಉಳಿಸಿಕೊಳ್ಳುವುದು ಈ ವ್ರತದ ಸಾರಾಂಶ. ಡಾ. ಎಚ್.ನರಸಿಂಹಯ್ಯ ಅವರೇನು ಅಪರಿಗ್ರಹ ವ್ರತವನ್ನು ಸ್ವೀಕರಿಸಿರಲಿಲ್ಲ. ಆದರೆ ಸ್ವೀಕರಿಸಿದವರಿಗಿಂತಲೂ ಹೆಚ್ಚಿನ ಬದುಕನ್ನು ನಡೆಸಿದರು. ನ್ಯಾಷನಲ್ ಕಾಲೇಜಿನ 10 X 12 ಅಡಿಯ ಕೋಣೆ ಅವರ ವಾಸಸ್ಥಳ. ದಟ್ಟಿ ಪಂಚೆ, ತುಂಬು ತೋಳಿನ ಖಾದಿ ಷರಟು, ತಲೆಗೊಂದು ಗಾಂಧಿ ಟೊಪ್ಪಿಗೆ - ಇಷ್ಟೇ ಅವರ ಉಡುಗೆ. ಪ್ರಾಧ್ಯಾಪಕರಾಗಿ ಪಡೆದ ಪಗಾರ, ಉಪಕುಲಪತಿಗಳಾಗಿ ಪಡೆದ ಸಂಬಳ, ನಿವೃತ್ತಿ ವೇತನ, ವಿಧಾನ ಸಭೆಯ ಸದಸ್ಯರಾಗಿ ಪಡೆದ ಗೌರವ ವೇತನ - ಎಲ್ಲವನ್ನೂ ನ್ಯಾಶನಲ್ ಕಾಲೇಜಿನಡಿ ಬರುವ ಸಂಸ್ಥೆಗಳಿಗೆ ದಾನಮಾಡಿದರು. ತಾವು ಸತ್ತ ಮೇಲೆ ತಮ್ಮ ಶವಸಂಸ್ಕಾರ ಹೇಗೆ ನಡೆಯಬೇಕು ಎನ್ನುವುದನ್ನು ತಿಳಿಸುವುದರ ಜೊತೆಗೆ ಅದಕ್ಕೆ ಬೇಕಾದ ಹಣವನ್ನೂ ಎತ್ತಿಟ್ಟರು. ‘ಯಾವ ಧಾರ್ಮಿಕ ಅಂತ್ಯಸಂಸ್ಕಾರದಲ್ಲೂ ನನಗೆ ನಂಬಿಕೆಯಿಲ್ಲ‘ ಮತ್ತು ‘ನಾನು ಸತ್ತಾಗ ನಮ್ಮ ಯಾವ ಸಂಸ್ಥೆಗೂ ರಜಾ ಕೊಡಕೂಡದು‘ ಎಂದಿದ್ದರು.
|
| |
|
|
|
|
|
|
|
|