|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಡಾ. ವಾಲ್ದಿಮರ್ ಹಾಫ್ಕಿನ್ ಕಾಲರಾ ರೋಗವನ್ನು ನಿಗ್ರಹಿಸಬಲ್ಲ ಲಸಿಕೆಯನ್ನು ರೂಪಿಸಿದಾಘ ಪ್ಯಾಶ್ಚರ್, ಮೆಚಿನ್ಕಾಫ್ ಮುಂತಾದ ಯುರೋಪಿನ ಹಿರಿಯ ವಿಜ್ಞಾನಿಗಳು ಲಸಿಕೆಯನ್ನು ಒಪ್ಪುವುದಿಲ್ಲ. ಕಾಲರಾಕ್ಕೆ ಕಾರಣವಾದ ‘ವಿಬ್ರಿಯೋ ಕಾಲರೆ‘ಯನ್ನು ರಾಬರ್ಟ್ ಕಾಚ್ ಅವರು ಕಂಡುಹಿಡಿದಿದ್ದರೂ, ಕಾಲರಾಕ್ಕೆ ಅದುವೇ ಕಾರಣವೆನ್ನುವುದಕ್ಕೆ ಸಾಕಷ್ಟು ಪುರಾವೆ ಇರಲಿಲ್ಲ. ಹಾಫ್ಕಿನ್ ನೇರವಾಗಿ ಭಾರತಕ್ಕೆ ಬಂದು ಕಲ್ಕತ್ತದ ಕತ್ತಲಬಾಗಿನಲ್ಲಿ ತಮ್ಮ ಲಸಿಕೆಯನ್ನು ಪ್ರಯೋಗಿಸಿದರು. ಲಸಿಕೆಯ ಮಹತ್ವವನ್ನು ತಿಳಿಯದೆ ಸ್ಥಳೀಯ ಜನರು ಪ್ರತಿಭಟನೆಯನ್ನು ಸೂಚಿಸುತ್ತಾರೆ. ಒಂದು ಇಸ್ಲಾಮಿಕ್ ಸಂಘಟನೆಯು ಹಾಫ್ಕಿನ್ ಅವರನ್ನು ಕೊಲ್ಲುವ ವಿಫಲ ಪ್ರಯತ್ನ ನಡೆಸುತ್ತದೆ. ಇದೆಲ್ಲವನ್ನು ಕಂಡ ಹಾಫ್ಕಿನ್ ನೆರೆದ ಸಮಸ್ತ ಜನರ ಮುಂದೆ ತಮ್ಮ ತೋಳಿನ ಶರಟನ್ನು ಮೇಲೇರಿಸಿ ಕಾಲರಾ ಲಸಿಕೆಯನ್ನು ತಾವೇ ಚುಚ್ಚಿಕೊಳ್ಳುತ್ತಾರೆ! ಲಸಿಕೆ ಸುರಕ್ಷಿತವಾದದ್ದೆಂದು ನಿರೂಪಿಸುತ್ತಾರೆ. ನೆರೆದ 200 ಜನರಲ್ಲಿ 116 ಜನರು ಲಸಿಕೆಯನ್ನು ತೆಗೆದುಕೊಂಡಾಗ, ಅವರಲ್ಲಿ ಒಬ್ಬರಿಗೂ ಕಾಲರಾ ಬರಲಿಲ್ಲ!
|
ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
|
|
| |
|
|
|
|
|
|
|
|
|