|
|

 | Rs. 250 | 20% |
Rs. 200/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಂಕೀರ್ಣವಾದ ಮಹಾಭಾರತವನ್ನು ವಿಭಿನ್ನವಾದ ವಿಶ್ಲೇಷಣೆಗೆ ಒಳಪಡಿಸುವ ಕಾದಂಬರಿ "ದ್ವಾಪರ". ವಿವಿಧ ಸಂದರ್ಭ, ಸನ್ನಿವೇಶಗಳನ್ನು ಆಯಾ ಪಾತ್ರಗಳು ಮನೋವೈಜ್ಞಾನಿಕವೆನ್ನುವಂತೆ ವಿಶ್ಲೇಷಿಸುತ್ತ, ತಮ್ಮ ತಮ್ಮ ಅಂತರಂಗದ ತುಮುಲಗಳನ್ನು ಶೋಧಸಿಕೊಳ್ಳುತ್ತಲೇ ವಾಸ್ತವವನ್ನು ಉಧ್ವಸ್ಥಗೊಳಿಸುತ್ತ, ವೈಚಾರಿಕ-ವೈಜ್ಞಾನಿಕವಾಗಿ ವರ್ತಮಾನದ ಒರೆಗಲ್ಲಿಗೆ ಹಚ್ಚುತ್ತ, ಮಿಥ್ಗಳನ್ನು ಒಂದೊಂದಾಗಿ ಒಡೆಯುತ್ತ ಸಾಗುತ್ತದೆ.. ಎಲ್ಲವನ್ನು ಸ್ಥೂಲವಾಗಿ, ಸೂಚ್ಯವಾಗಿ ನಿರ್ವಚಿಸಿದಂತೆ ಕಂಡರೂ ಎಲ್ಲ ಅರ್ಥ ಸಾಧ್ಯತೆಗಳನ್ನೂ ಹೊರಹೊಮ್ಮಿಸುವ ಕಂನಾಡಿಗಾ ನಾರಾಯಣ ಅವರದು ಅದ್ಭುತ ಚಿತ್ರಕ ಶಕ್ತಿ. ಇವೆಲ್ಲದರ ಹಿಂದಿನ ಅವರ ಅಪಾರ ಓದು, ಪರಿಶ್ರಮ, ಕಲ್ಪನಾಶಕ್ತಿಯಿಂದ ವಿಸ್ತಾರವಾದ ಮಹಾಭಾರತವನ್ನು ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿ, ವಿಸ್ತರಿಸಿ, ವಿಚ್ಛೇದಿಸಿ, ಪುನರ್ನಿರ್ಮಿಸುವ ಹಾಗೂ ಅವೆಲ್ಲವನ್ನೂ ತಳುಕು ಹಾಕುವ ಸ್ವೋಪಜ್ಞತೆಯಿಂದಾಗಿ "ದ್ವಾಪರ" ಆಪ್ತವಾಗುತ್ತದೆ.
|
ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಬಿ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕ ಪತ್ರ ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕರಾಗಿರುವ ಇವರು ಬಿ.ಬಿ.ಎಂ.ಪಿ.ಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್ಗೆ ಅನುವಾದಗೊಂಡಿವೆ. “ಕಥಾಭೂಮಿ” ದ್ವೈಮಾಸಿಕದ ಗೌರವ ಸಂಪಾದಕರು.
|
|
| |
|
|
|
|
|
|
|
|
|