|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜ್ಞಾನಪೀಠ ಪ್ರಶಸ್ತಿ ವಿಜೇತ ತಕಳಿ ಶಿವಶಂಕರ ಪಿಳ್ಳೈಯವರು ‘ಕೇರಳದಲ್ಲಿ ಇಬ್ಬರು ಶಂಕರರು ಇದ್ದಾರೆ. ಮೊದಲನೆಯವರು ಅಧ್ಯಾತ್ಮಗುರು ಶಂಕರಾಚಾರ್ಯ ಹಾಗೂ ಎರಡನೆಯವರು ಶಂಕರನ್ ನಂಬೂದಿರಿಪ್ಪಾಡ್. ಆದಿಶಂಕರ ವೇದಾಂತಿ. ಶಂಕರನ್ ನಂಬೂದಿರಿ ರಾಜಕೀಯ ಚಿಂತಕ. ಭಾರತದಲ್ಲಿ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಸ್ಪಷ್ಟ ರೂಪುಕೊಟ್ಟವರೂ, ಅಗಾಧವಾದ ಒಳನೋಟ ಮತ್ತು ಜಾಗೃತಿಯನ್ನು ಹೊಂದಿದವರೂ ಆದ ರಾಜಕೀಯ ವ್ಯಕ್ತಿ ಇಎಂಎಸ್‘ ಎಂದು ಹೇಳಿರುವರು.
ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಯ್ಕೆಯಾದ ಇಎಂಎಸ್ ಉತ್ತಮ ಲೇಖಕರಾಗಿದ್ದರು. ಮಲಯಾಳದಲ್ಲಿ 79, ಇಂಗ್ಲಿಷಿನಲ್ಲಿ 20 ಪುಸ್ತಕಗಳನ್ನು ಬರೆದಿರುವರು. 200ಕ್ಕೂ ಹೆಚ್ಚು ಲೇಖನಗಳನ್ನೂ ಬರೆದಿರುವರು. ಇಎಂಎಸ್ ತಮ್ಮ ಆತ್ಮಕಥೆಯಲ್ಲಿ ಖಾಸಗಿ ಬದುಕಿನ ವಿವರಣೆಗಿಂತ ತಾವು ಕಂಡ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹೋರಾಟಗಳನ್ನು ದಾಖಲಿಸಿರುವರು. ಇವರ ‘ಆತ್ಮಕಥೆ‘ ಕೃತಿಗೆ 1970ರ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಸಂದಿದೆ.
|
| |
|
|
|
|
|
|
|
|
|