|
|

| Rs. 220 | 10% |
Rs. 198/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2020 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
268 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9386646293 |
ಕೋಡ್ |
: |
1123718 |
ಈ ಪರಿಯ ಸೊಬಗು
ಜೀವನ ಅನೇಕ ಪಾಠಗಳನ್ನು ಕಲಿಸುತ್ತ ಹೋಗುತ್ತೆ, ಹೆಚ್ಚೆಚ್ಚು ವರ್ಷಗಳು ಉರುಳಿದಾಗ ಮನುಷ್ಯ ತನ್ನ ಸ್ವಂತ ಅನುಭವಗಳಿಂದ ಪಕ್ವವಾಗುತ್ತ ಹೋಗುವುದೆ ಜೀವನ ವಿಧಾನ. ಇದು ಪ್ರಕೃತಿಯ ಸಂವಿಧಾನ! ರಾಜಕೀಯ, ಸಿರಿವಂತಿಕೆ, ಸ್ಥಾನಮಾನ, ಅಧಿಕಾರ, ಯೌವನವು ಶಾಶ್ವತವಲ್ಲ. ಇದು ನಿಜ! ಸಂಪೂರ್ಣ ಸತ್ಯ! ಆದರೆ ಅದರ ಅರಿವು ಆಗುವುದು ಎಷ್ಟು ಮಂದಿಗೆ?
ಅಂಥ ಹಲವಾರು ಮಂದಿ ಕಾದಂಬರಿಯ ಉದ್ದಕ್ಕೂ ಬರುತ್ತಾರೆ. ಇವರೆಲ್ಲ ನೀವುಗಳು ಕಾಣದವರಲ್ಲ, ಎಲ್ಲಿಂದಲೋ ಹೆಕ್ಕಿ ತೆಗೆದ ಸಂದರ್ಭಗಳು, ಸನ್ನಿವೇಶಗಳು ಅಲ್ಲ! ಇವರೆಲ್ಲ ನಮ್ಮವರೇ, ನಮ್ಮ ಒಳಗಿನವರೇ!
ಮಹಾಭಾರತ, ರಾಮಾಯಣ ನನ್ನ ಇಷ್ಟದ ಗ್ರಂಥಗಳು. ತುಂಬ ತುಂಬ ಇಷ್ಟವಾಗುವ ಪಾತ್ರ ಭಗವಾನ್ ಶ್ರೀಕೃಷ್ಣನದು. ಭಗವದ್ಗೀತೆಯ ಮೂಲಕ ಕಲಿಯುಗಕ್ಕೆ ಬೋಧಕನಾಗಿದ್ದಾನೆ. ಶರಣಾಗತಿಯನ್ನು ಬೋಧಿಸಲಿಲ್ಲ. ಅಧರ್ಮವನ್ನು ಸದೆಬಡೆಯಲು ಉತ್ಸಾಹ ತುಂಬಿದ. ಅದಕ್ಕೆ ಬೇರೆ ಬೇರೆ ರೂಪ ಅಷ್ಟೆ.
ಸಾಯಿಸುತೆ (ಮುನ್ನುಡಿಯಿಂದ)
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|