Items
0
Total
  0.00 
Welcome Guest.

 
ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ
ಲೇಖಕರು: ದಿವಾಕರ್ ಎಸ್, Diwakar S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2007
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ಕೋಡ್ : 143260

ಕನ್ನಡಕ್ಕೆ ‘ರ್ಕೌರ್ಯ’ದಂಥ ಅಪರೂಪದ ಕತೆಯನ್ನು ಕೊಟ್ಟು ಹೆಸರು ಮಾಡಿದ ಎಸ್. ದಿವಾಕರ್ ಅವರ ಎರಡನೆಯ ಕಥಾ ಸಂಕಲನವಿದು. ಅವರ ಚೊಚ್ಚಲು ಕಥಾ ಸಂಗ್ರಹ ‘ಇತಿಹಾಸ’ದಲ್ಲಿ ಸೇರಿದ ಈ ಕತೆ ಪ್ರಕಟವಾದ ಅಲ್ಪ ಕಾಲದಲ್ಲೇ ‘ಶತಮಾನದ ಸಣ್ಣಕಥೆ’ ಎನ್ನುವ ಬೃಹತ್ ಸಂಕಲನವನ್ನು ಒಳಗೊಂಡು ಹಲವು ಪ್ರಾತಿನಿಧಿಕ ಸಂಕಲನಗಳಲ್ಲಿ ಸ್ಥಾನ ದೊರಕಿಸಿ ಸಣ್ಣ ದಾಖಲೆ ನಿರ್ಮಿಸಿತು! ಸದ್ಯದಲ್ಲೇ ಪ್ರಕಟಗೊಂಡ ಅವರ ‘ನಾಪತ್ತೆಯಾದ ಗ್ರಾಮಾಫೋನು’ ಎನ್ನುವ ಪ್ರಬಂಧಗಳ ಸಂಗ್ರಹ ಕೂಡ ಇದು ದಿವಾಕರರ ಛಾಪು ಉಳ್ಳ ವಿಶಿಷ್ಟ ಬರವಣಿಗೆ ಎಂದು ವಿಮರ್ಶಕರ ಪ್ರಶಂಸೆ ಗಳಿಸಿದೆ.

ಪ್ರಸ್ತುತ ಕಥಾ ಸಂಗ್ರಹದಲ್ಲಿ ಎಂಟು ಕತೆಗಳಿವೆ. ಎಂಟೂ ಕತೆಗಳು ಕತೆಗಾರಿಕೆಯಲ್ಲಿ ಮಾಡಿದ ಹೊಚ್ಚ ಹೊಸ ಪ್ರಯೋಗಗಳಾಗಿವೆ. ಪ್ರಯೋಗಶೀಲತೆ ಈ ಬರವಣಿಗೆಯ ಕಣ್ಣಿಗೆ ಹೊಡೆಯುವ ವೈಶಿಷ್ಟ್ಯವಾಗಿದೆ. ‘ಸಣ್ಣಕತೆ’ ಎನ್ನುವ ಸಾಹಿತ್ಯ ಪ್ರಕಾರವನ್ನು ಕುರಿತು ಪ್ರಚಲಿತವಿರುವ ವಿಚಾರಗಳ ಬಗ್ಗೆ ಮಾಡಿಕೊಂಡ ಕಲ್ಪನೆಗಳ ಬಗ್ಗೆ ಓದಿ ಕೇಳಿ ಬೇಸರಪಟ್ಟ ಮನಸ್ಸು ಒಂದು ಬಗೆಯ ತುಂಟತನದ ಮೂಡಿನಲ್ಲಿದ್ದಾಗ ಈವರೆಗೆ ಬಂದ ಕತೆಗಳಿಂದ ತೀರಾ ಭಿನ್ನವಾದ ರೀತಿಯಲ್ಲಿ ಬರೆಯುವುದೂ ಶಕ್ಯವಿದೆ. ಎನ್ನುವುದನ್ನು ತೋರಿಸಲು ಹೊರಟಿದ್ದರ ಪರಿಣಾಮವಾಗಿ ಈ ಕತೆಗಳು ಹುಟ್ಟಿಕೊಂಡಂತಿವೆ. ಪಾತ್ರಸೃಷ್ಟಿ, ಭಾಷೆ, ಕಾಲವಿನ್ಯಾಸ, ವಿವರಗಳ ವಿಪುಲತೆ, ನಿರೂಪಣಾ ತಂತ್ರ ಅಷ್ಟೇಕೆ, ಕತೆಗಳ ಶೀರ್ಷಿಕೆ, ಪಾತ್ರಗಳ ಹೆಸರುಗಳನ್ನೂ ಬಿಡದೇ ಪ್ರತಿಯೊಂದು ಕ್ಷೇತ್ರದಲ್ಲಿ ಈ ಪ್ರಯೋಗ ತನ್ನ ದಿಟ್ಟ ಹೆಚ್ಚೆ ಇಟ್ಟಿದೆ. ‘ಕ್ರೌರ್ಯ’ದಂತೆ ಈ ಕಥಾಸಂಗ್ರಹದಲ್ಲಿ ಬರುವ ‘ಬಿಳಿಯ ಹೂಗಳ ಕವಿತೆ’ ಕೂಡ ದಿವಾಕರರ ಸಾಹಿತ್ಯಸೃಷ್ಟಿಯ ಉಚ್ಚಾಂಕವಾಗಿ ಕನ್ನಡದಲ್ಲಿ ಉಳಿಯುತ್ತದೆ.

ಎಸ್. ದಿವಾಕರ್ ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ದೇವನಹಳ್ಳಿಯಲ್ಲಿ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ. ವೃತ್ತಿಯಿಂದ ಪತ್ರಕರ್ತರಾಗಿರುವ ಅವರು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ, ಸಂಯುಕ್ತ ಕರ್ನಾಟಕ, ಮಲ್ಲಿಗೆ, ಸುಧಾ, ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ, ಸಂಪಾದಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಕೆಲಸಮಾಡಿದವರು; ೧೯೮೯ರಿಂದ ೨೦೦೫ರವರೆಗೆ ಚೆನ್ನೈಯಲ್ಲಿರುವ ಅಮೆರಿಕನ್ ಕಾನ್ಸುಲೇಟ್‌ನಲ್ಲಿ ಸಂಪಾದಕರಾಗಿದ್ದವರು. ಸದ್ಯ ಬೆಂಗಳೂರಿನ ವಸಂತ ಪ್ರಕಾಶನ ಸಂಸ್ಥೆಯಲ್ಲಿ ಸಾಹಿತ್ಯ ಸಲಹೆಗಾರರು. ಸಣ್ಣಕತೆ, ಕಾವ್ಯ, ಪ್ರಬಂಧ, ವಿಮರ್ಶೆ, ಭಾಷಾಂತರ, ಅಂಕಣ ಬರಹ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಅವರು ೨೦೦೨ರಲ್ಲಿ ಅಮೆರಿಕದ ಅಯೋವಾ ವಿಶ್ವವಿದ್ಯಾಲಯ ವರ್ಷವರ್ಷವೂ ಆಯೋಜಿಸುತ್ತಿರುವ ಅಂತರರಾಷ್ಟ್ರೀಯ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ದಿವಾಕರ್ ಪಡೆದಿರುವ ಅನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಸೀನಿಯರ್ ಫೆಲೋಶಿಪ್, ರೈಟರ್-ಇನ್-ರೆಸಿಡೆನ್ಸ್, ಅಯೋವಾ ವಿಶ್ವವಿದ್ಯಾಲಯ, ಯು.ಎಸ್.ಎ., ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಖಿಲ ಭಾರತ ಕಥಾ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕೋಲ್ಕತಾದ ಅಖಿಲ ಭಾರತ ಹಿಂದೀ ಪುರಸ್ಕಾರ್ ಮುಖ್ಯವಾದುವು.

ಲೇಖಕರ ಇತರ ಕೃತಿಗಳು
10%
ಪುಸ್ತಕ ಓದಿದ್ದಕ್ಕೆ ಪುಸ್ತಕವೇ ....
ದಿವಾಕರ್ ಎಸ್, Diwakar S
Rs. 130    Rs. 117
10%
ವಿಧಾನಸಭೆಯಲ್ಲೊಂದು ಹಕ್ಕಿ
ದಿವಾಕರ್ ಎಸ್, Diwakar S
Rs. 70    Rs. 63
5%
ಶತಮಾನದ ಸಣ್ಣ ಕತೆಗಳು ....
ದಿವಾಕರ್ ಎಸ್, Diwakar S
Rs. 599    Rs. 569
Rs. 320    Rs. 288
Best Sellers
ಯೋಗಪ್ರವೇಶ
ರಾಮಕೃಷ್ಣ ಜಿ, Ramakrishna G
Rs. 77/-   Rs. 85
ಎಲೆಕ್ಟ್ರಾನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ, Sapna
Rs. 252/-   Rs. 280
ಪಕ್ಷಿಕಾಶಿ (ಕಾವ್ಯ)
ಕುವೆಂಪು, Kuvempu
Rs. 74/-   Rs. 78
ಮೊರಸು ಒಕ್ಕಲಿಗರು – ಒಂದು ಸಾಂಸ್ಕೃತಿಕ ಅಧ್ಯಯನ
ನಾಗರಾಜು ಎಂ ಎಚ್, Nagaraju M H
Rs. 225/-   Rs. 250

Latest Books
ಫ್ರಾನ್ಜ್ ಕಾಫ್ಕ
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 63/-   Rs. 70
Dr B V Sreekantan : A Pioneer Physicist (A scientific biography)
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 180/-   Rs. 200
ಎಳೆಯರಿಗಾಗಿ ಹಿರಿಯರು ಹೇಳಿದ ಕೆಲವು ಕಥೆಗಳು
ಗೋಪಾಲಕೃಷ್ಣ ಉಡುಪ ಎನ್, Gopalakrishna Udupa N
Rs. 162/-   Rs. 180
ಅನಂತಮೂರ್ತಿ ವಾಙ್ಮಯ
ಅಶೋಕ ಟಿ ಪಿ, Ashoka T P
Rs. 144/-   Rs. 160


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.