|
|
|

| Rs. 80 | 10% |
Rs. 72/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇವು ವಿಜ್ಞಾನಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರ ವ್ಯಕ್ತಿಚಿತ್ರಣಗಳು. ಇಲ್ಲಿನ ಹೀರೋ ಪಾಲ್ ಏರ್ಡಿಶ್. ತನ್ನ ಜೀವಿತಕಾಲದಲ್ಲಿ ಗಣಿತವನ್ನೇ ಉಸಿರಾಡುತ್ತಿದ್ದ ಈತ 83 ವರ್ಷ ಬದುಕಿದ್ದ. 80 ವಿಜ್ಞಾನಿಗಳು ಅಷ್ಟೇ ವರ್ಷ ಬದುಕಿ ಸಾಧಿಸಬಹುದಾದ್ದನ್ನು ಈತನೊಬ್ಬನೇ ಮಾಡಿದ್ದನೆಂಬ ಸ್ವಲ್ಪ ಉತ್ಪ್ರೇಕ್ಷಿತ ಲೆಕ್ಕಾಚಾರದಿಂದಾಗಿ “ಏಳು ಸಾವಿರ ವರ್ಷ” ಬದುಕಿದಂತಾಯಿತು ಎಂದು ಕಿರೀಟ ತೊಡಿಸಲಾಗಿದೆ. ಇನ್ನಿತರ ವೈದ್ಯಕೀಯ, ಗಣಿತ, ವಿಮಾನಯಾನ, ಹಡಗು ನಿರ್ಮಾಣ - ಮುಂತಾದ ವಿವಿಧ ರಂಗಗಳಲ್ಲಿ ಹೆಸರು ಗಳಿಸಿದವರ ಬಗೆಗೂ ಲೇಖನಗಳು ಇವೆ. ಕಳೆದೆರಡು ಶತಮಾನಗಳಲ್ಲಿ ಜಾಗತಿಕವಾಗಿ ಪ್ರಗತಿ ಹೊಂದಿದ ಕ್ಷೇತ್ರಗಳಲ್ಲೆಲ್ಲಾ ವಿಜ್ಞಾನದ್ದೇ ಮೇಲುಗೈ. ಇವನ್ನೆಲ್ಲಾ ಸಾಧಿಸಿದ ವಿಜ್ಞಾನಿಗಳು ಗುರಿಸಾಧನೆಗಾಗಿ ಏನೆಲ್ಲಾ ಬವಣೆ ಅನುಭವಿಸಿ, ಅಡೆತಡೆಗಳನ್ನು ಎದುರಿಸಿ ನಿಂತರೆಂದು ತಿಳಿದಾಗ ಅವರ ಬಗ್ಗೆ ಗೌರವ ಮೂಡುತ್ತದೆ. ಇಂದಿನ ವಿಲಾಸೀ ಜೀವನಕ್ಕೆ ಹೊಂದಿಕೊಂಡ ನಾವು ಓದಲೇಬೇಕಾದ ಲೇಖನಗಳು.
|
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.
|
|
| |
|
|
|
|
|
|
|
|
|