|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜಗತ್ತಿನ ಶ್ರಮಜೀವಿಗಳೆಲ್ಲರ ಬದುಕು ಬಂಡವಾಳಶಾಹಿಗಳ ಕೈಯಲ್ಲಿ ನಲುಗಿ ಹೋಗಿದ್ದಂತಹ ಕಾಲಘಟ್ಟದಲ್ಲಿ ಹೋರಾಟಕ್ಕೆ ಕರೆ ನೀಡಿದವರು ಕಾರ್ಲ್ ಮಾರ್ಕ್ಸ್. ಇಂದು ಚರಿತ್ರೆ ಮರುಕಳಿಸುತ್ತಿದೆಯೆ? ಜಾಗತೀಕರಣದ ಎಲ್ಲ ಘಟ್ಟಗಳಲ್ಲೂ ಸಾಮ್ರಾಜ್ಯಶಾಹಿಗಳು ಮತ್ತೊಂದು ರೀತಿಯಲ್ಲಿ ಬಡವರ ಶೋಷಣೆ ಮಾಡುತ್ತಿರುವುದು ಎದ್ದು ಕಾಣುತ್ತದೆ. ಕಾರ್ಲ್ ಮಾರ್ಕ್ಸ್ ಹೋರಾಟದ ದಾರಿ ಹಿಡಿದಾಗ ಕಾಲಕ್ಕಿಂತಲೂ ಪರಿಸ್ಥಿತಿ ಭಿನ್ನವಾಗಿದೆಯಾದರೂ ಶೋಷಣೆಯ ಸ್ವರೂಪವೇನೂ ಬದಲಾಗಿಲ್ಲ. ಹಣ ಮತ್ತು ಅಧಿಕಾರದ ಬಲದಿಂದ ಪ್ರಜಾಪ್ರಭುತ್ವದ ದಾರಿಯಾಗಿ ಆರಿಸಿಬಂದು ಗೋಮುಖ ವ್ಯಾಘ್ರದಂತಹ ನಯವಾದ ಶೋಷಣೆ ಇಂದಿನದು! ಸಮಾಜವಾದದ ಹಣೆಪಟ್ಟಿ ಧರಿಸಿ ದೇಶೀಯ ಬಂಡವಾಳ ಶಕ್ತಿಗಳು ಇದರಲ್ಲಿ ಶಾಮೀಲಾಗಿವೆ. ಹಲವು ಬುದ್ಧಿಜೀವಿಗಳು ಮಾರ್ಕ್ಸ್ವಾದದ ಕಡೆಗೆ ವಿಶ್ಲೇಷಣಾತ್ಮಕ ನೋಟ ಬೀರಿ ಅಲ್ಲಿನ ಸಾರ್ವಕಾಲಿಕ ಸತ್ಯಗಳನ್ನು ಇಂದು ಅರ್ಥೈಸತೊಡಗಿದ್ದಾರೆ. ಹಲವು ಸಿದ್ಧಾಂತಗಳಿಗೆ ಕಾಲ-ದೇಶದ ಎಲ್ಲೆ ಇರುವುದಿಲ್ಲ. ಆತನ ಚಿಂತನೆ, ಸಮಾಜವಾದೀ ಧೋರಣೆ, ನ್ಯಾಯಕ್ಕಾಗಿ ಹೋರಾಟಗಳೆಲ್ಲ ಸವೆದುಹೋದಂತಹ ಮೌಲ್ಯಗಳಲ್ಲಿ - ಎಂದೆಂದಿಗೂ ಪ್ರಸ್ತುತವೆಂದು ಸಾಧಿಸಿದ ಕೃತಿ.
|
| |
|
|
|
|
|
|
|
|
|