|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅ ನಾ ರಾವ್ ಜಾದವ್ ಹತ್ತು-ಹಲವಾರು ಹವ್ಯಾಸಗಳುಳ್ಳ ವ್ಯಕ್ತಿ. ನಟನೆ, ನಾಟಕ ರಚನೆ, ನಿರ್ದೇಶನ, ಚಾರಣ, ಛಾಯಾಗ್ರಹಣ, ಬರವಣಿಗೆ, ಪಕ್ಷಿವೀಕ್ಷಣೆ, ಮರ-ಗಿಡಗಳ ಅಧ್ಯಯನ... ಹೀಗೆ ಅನೇಕ ಕ್ಷೇತ್ರಗಳನ್ನು ಹಚ್ಚಿಕೊಂಡವರು. ಅನೇಕ ನಾಟಕಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಂಗದಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಮತ್ತು ‘ಕರ್ವಾಲೊ’ ಕೃತಿಗಳನ್ನಾಧರಿಸಿ ನಾಟಕಗಳನ್ನು ರಚಿಸಿದ್ದಾರೆ. ‘ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು?’ ಎಂಬ ಮಕ್ಕಳ ನಾಟಕವನ್ನೂ ರಚಿಸಿದ್ದಾರೆ. ‘ಹಿಮಗಿರಿಯ ಕಣಿವೆಗಳಲ್ಲಿ’ ಇವರ ಪ್ರಕಟಗೊಂಡಿರುವ ಚಾರಣ ಕಥನ ಕೃತಿ. ‘ಪ್ರಕೃತಿ-ಪರಂಪರೆ’ ಕುರಿತಾದ ಇವರ ಅಸಂಖ್ಯ ಚಿತ್ರ-ಲೇಖನಗಳು ನಾಡಿನ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಹಾಗೇ ಇವರ ಅನೇಕ ಹನಿಗವನಗಳೂ ಪ್ರಕಟಗೊಂಡಿವೆ. ಇವರ ಛಾಯಾಚಿತ್ರಗಳು ರಾಷ್ಟ್ರಮಟ್ಟದ ಪ್ರಶಸ್ತಿ - ಪುರಸ್ಕಾರಗಳನ್ನು ಪಡೆದಿವೆ. ನಮ್ಮ ಸುತ್ತಮುತ್ತಲಿನ ಮರ-ಗಿಡಗಳು ಮತ್ತು ಪಕ್ಷಿ ಸಮೂಹಗಳ ಮಾಹಿತಿಯನ್ನು ಸಹ ಒದಗಿಸಬಲ್ಲರು. ದೇಶದ ಉದ್ದಗಲಕ್ಕೂ ‘ಚಾರಣ’ವೆಂದು ಕಾಡು-ಮೇಡು ಅಲೆದಿದ್ದಾರೆ. ನಾಟಕ ಪ್ರದರ್ಶನಗಳನ್ನು ನೀಡುತ್ತಿರುವ, ಇವರ ‘ರಂಗ ವಿಸ್ಮಯ’ ತಂಡದ ಮೂಲಕ ಇದೀಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸುವುದರೊಂದಿಗೆ ಅಭಿನಯದ ಪಾಠಗಳನ್ನೂ ಬೋಧಿಸುತ್ತಿದ್ದಾರೆ.
|
|
| |
|
|
|
|
|
|
|
|
|