|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡವನ್ನು ತಪ್ಪಿಲ್ಲದೆ ಓದಿ, ಬರೆದು, ಸಂವಹನಿಸುವುದು ಸಮಸ್ತರ ಜವಾಬ್ದಾರಿಯುತ ಸಂಕಲ್ಪ. ಅದಕ್ಕೆ ಪೂರಕವಾಗಿ ತಾಯ್ನುಡಿಯ ಸಾಂಪ್ರದಾಯಿಕ ಕಲಿಕೆಯನ್ನು ಒಪ್ಪಿತ ರೀತಿಯಲ್ಲಿ ಪೋಷಿಸುವ ಉದ್ದೇಶದಿಂದ ಭಾಷಾವೈಜ್ಞಾನಿಕತೆಯನ್ನೂ ಯಥಾರ್ಥ ರೀತಿಯಲ್ಲಿ ಅಳವಡಿಸಿಕೊಂಡ ಪ್ರಯತ್ನ ಈ ಪುಸ್ತಕದ್ದು. ನುಡಿ ಉಚ್ಚಾರಣೆಯ ಸ್ಪಷ್ಟತೆ, ಧ್ವನಿವ್ಯತ್ಯಯ, ಪದರಚನೆ-ಬಳಕೆ, ಅರ್ಥವತ್ತಾದ ವಾಕ್ಯ ತಯಾರಿ, ಅರ್ಥವಿಶೇಷತೆ, ಸಾಂದರ್ಭಿಕತೆಯ ಪ್ರಾಯೋಗಿಕ ವಿನ್ಯಾಸ, ನುಡಿತಾತ್ವಿಕತೆ, ಭಾಷಾಸಮುದಾಯದ ಒಪ್ಪಿತತೆ ಇತ್ಯಾದಿಯ ಅನ್ವಯಿಕತೆಯ ನೆಲೆಯಲ್ಲಿ ಕನ್ನಡವನ್ನು ಸರಿಯಾಗಿ ಮಾತನಾಡುವ, ಓದುವ ಮತ್ತು ಬರೆಯುವ ಶುದ್ಧಾಶುದ್ಧತೆಯನ್ನು ಸುದೀರ್ಘವಾಗಿ ಸಲ್ಲಾಪಿಸುತ್ತ ಸಾಕಾಷ್ಟು ಪ್ರಾಯೋಗಿಕ ನಿದರ್ಶನಗಳನ್ನು ಅಳವಡಿಸಿದ ಪುಸ್ತಕವಿದು. ಕನ್ನಡದ ನೇಮಾಧಿಗಳನ್ನು ಆಧರಿಸಿ, ಕನ್ನಡ ಕಲಿಕೆಯ ಹೊತ್ತಿನಲ್ಲಿ ಎದುರಾಗುವ ಭಾಷಿಕ ಸಮಸ್ಯೆಗಳನ್ನು ಅರಿತ ಲೇಖಕರು ಸೂಕ್ತ ಒಪ್ಪಿತ ರಚನೆಗಳ ಕಲಿಕಾ ಸಹಿತ ಅಭ್ಯಾಸಯೋಗ್ಯ ಪುಸ್ತಕವನ್ನು ನೀಡಿದ್ದಾರೆ. ಕನ್ನಡ ಮಾತೃಭಾಷಿಗಳಿಗೇ ಅಲ್ಲದೇ ಕನ್ನಡ ಕಲಿಯುವ ಆಸಕ್ತರಿಗೆ ನೆರವಾಗಬಲ್ಲ ಸಹಾಯಕ ಕೃತಿಯಿದು.
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|