|
|

|
Rs. 180 10% |
|
Rs. 162/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |  | ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ `ಬೇಂದ್ರೆ ಗ್ರಂಥ ಬಹುಮಾನ`ಪ್ರಶಸ್ತಿ 2014-15 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಛಂದ ಪುಸ್ತಕ, Chanda Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
256 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
|
ಕೋಡ್ |
: |
186097 |
ವಿಲಿಯಂ ಕಾಂಕ್ವಾಂಬಾ ಎಂಬ ಹುಡುಗನ ಅಮೋಘ ಸಾಧನೆಯ ಕಥೆ ಇದು. ವಿದ್ಯುತ್ ಸಂಪರ್ಕವೂ ಇರದ ಆಫ್ರಿಕದ ಕಡುಬಡ ಹಳ್ಳಿಯಲ್ಲಿ, ಭೀಕರ ಬರಗಾಲದ ನಡುವೆ, ಶಾಲೆಗೂ ಹೋಗಲಾಗದ ಸ್ಥಿತಿಯಲ್ಲೂ ತನ್ನ ಹಿತ್ತಿಲಲ್ಲಿ ಗಾಳಿಯಂತ್ರವನ್ನು ನಿರ್ಮಿಸಿ, ಬೆಳಕು ಹೊಮ್ಮಿಸಿ, ಹೈಟೆಕ್ ಜಗತ್ತನ್ನು ದಂಗು ಬಡಿಸಿದವನ ಆತ್ಮಕಥೆ ಇದು.
ಹಳ್ಳಿಯ ಪುಟ್ಟ ಲೈಬ್ರರಿಯ ಪುಸ್ತಕವೊಂದರಲ್ಲಿ ಗಾಳಿಯಂತ್ರದ ಚಿತ್ರ ನೋಡಿ ಆಕರ್ಷಿತನಾದ ಈ ಹುಡುಗ ಡೈನಮೊ, ಮ್ಯಾಗ್ನೆಟ್, ಸರ್ಕ್ಯೂಟ್ ಬ್ರೆಕರ್ಗಳ ಬಗ್ಗೆ, ತನಗೆ ಅರ್ಥವಾಗದ ಇಂಗ್ಲಿಷ್ ಭಾಷೆಯಲ್ಲಿ ಓದುತ್ತ ತಾನೂ ಒಂದು ಗಾಳಿಯಂತ್ರ ನಿರ್ಮಿಸಲು ಹೊರಡುತ್ತಾನೆ. ಹೊಟ್ಟೆಯ ಹಸಿವೆಯನ್ನು ಕಡೆಗಣಿಸಿ ಶೋಧದ ಹಸಿವೆಯನ್ನು ಹಿಂಗಿಸಿಕೊಳ್ಳಲು ಗುಜರಿಯಲ್ಲಿ ತುಕ್ಕು ಕೊಳವೆ, ತಿಪ್ಪೆಯಲ್ಲಿ ಪ್ಲಾಸ್ಟಿಕ್ ವಾಲ್ವ್ಗಳಿಗೆ ಹುಡುಕುತ್ತಾನೆ. ಚರಂಡಿಯ ಪೈಪ್ಗಳನ್ನು ಕತ್ತರಿಸಿ ಗಾಳಿಯಂತ್ರದ ಅಲಗುಗಳನ್ನು ತಯಾರಿಸುತ್ತಾನೆ. ಹುಚ್ಚನೆಂದು ಕರೆದವರೇ ಅಚ್ಚರಿಗೊಳ್ಳುವಂತೆ ಗಾಳಿಯಿಂದ ಬೆಳಕು ಹೊಮ್ಮಿಸುತ್ತಾನೆ. ದೇಶವಿದೇಶಗಳಲ್ಲಿ ಸುದ್ದಿಯಾಗುತ್ತದೆ. ಎಡಿಸನ್, ರೈಟ್ ಬ್ರದರ್ಸ್, ಸ್ಟೀವ್ ಜಾಬ್ಸ್ಂಥವರಿಗೆ ಜನ್ಮ ಕೊಟ್ಟ ದೇಶದ ಜನರೇ ಆಫ್ರಿಕದ ಈ ಕಪ್ಪುವಜ್ರವನ್ನು ಗುರುತಿಸಿ ಅಮೆರಿಕಕ್ಕೂ ಕರೆಸಿ ಹೊಳಪು ಕೊಡಹೊರಡುತ್ತಾರೆ. ಈ ಹಳ್ಳಿಹುಡುಗನ ‘ಐ ಟ್ರೈ, ಐ ಮೇಡಿಟ್’ (‘ಯತ್ನಿಸಿದೆ, ಯಶಸ್ವಿಯಾದೆ’) ಎಂಬ ತೊದಲು ವಾಕ್ಯವೇ ಸಾಧಕರ ಅಂತರರಾಷ್ಟ್ರೀಯ ಮೇಳದ ಘೋಷವಾಕ್ಯವಾಗುತ್ತದೆ. ಶಾಲೆಗೆ ಹೋಗಬೇಕೆಂಬ ಹುಡುಗನ ಕನಸು ಆನಂತರವೇ ನಿಜವಾಗುತ್ತದೆ. ಬರದ ನೆಲದಲ್ಲಿ ಹಸುರು ಚಿಮ್ಮಿಸಿ ಅಮ್ಮನ ಶ್ರಮವನ್ನು ಕಮ್ಮಿ ಮಾಡಬೇಕೆಂಬ ಕನಸು ನನಸಾಗುತ್ತದೆ.
ತೀವ್ರ ಬರ, ಉಗ್ರ ಏಡ್ಸ್, ಮೂಢನಂಬಿಕೆಗಳ ಕ್ರೌರ್ಯ ತಲ್ಲಣಗಳ ಪಾತಾಳದೊಳಕ್ಕೆ ಓದುಗರನ್ನು ಅದ್ದಿ ಎತ್ತುತ್ತಲೇ ಈ ಪುಸ್ತಕ, ಮನುಷ್ಯ ಸಾಧನೆಯ ಉತ್ತುಂಗವನ್ನು ತೋರಿಸುತ್ತದೆ. ಒಂದು ಸಾರ್ಥಕ ಓದಿನ ಸಿಹಿನೆನಪನ್ನು ನಮ್ಮೊಳಗೆ ಇಳಿಸುತ್ತದೆ.
|
| | |
|
|
|
|
|
|
|