|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪುಸ್ತಕಗಳಲ್ಲಿನ ಅನೇಕ ಸಮಸ್ಯೆಗಳನ್ನು ಯಾಂತ್ರಿಕವಾಗಿ ಬಿಡಿಸುವುದರಿಂದ, ಮಕ್ಕಳು ಯಾವುದೇ ಪರಿಕಲ್ಪನೆಗಳನ್ನು ಕಲಿಯಲಾರರು. ಮಕ್ಕಳಲ್ಲಿ ಗಣಿತದ ಮಹತ್ವದ ಕಲಿಕೆಯು ಒಗಟು, ಚುಟುಕು ಮತ್ತು ಚಟುವಟಿಕೆಗಳಿಂದಾಗುತ್ತದೆ. ಸಮಸ್ಯಾ ನಿವಾರಣಾ ವಿಧಾನವು ವಸ್ತುಗಳನ್ನು ಅರಿಯುವುದರ ಮೂಲಕ ಗಣಿತ ಕಲಿಕೆಯಲ್ಲಿ ಸಹಕರಿಸುತ್ತದೆ. ಗಣಿತಜ್ಝರ ಜೀವನದ ಉತ್ತೇಜಿತ ಕಥೆಗಳನ್ನು ಅನೇಕ ಸೃಜನಶೀಲ ಚಟುವಟಿಕೆಗಳೊಂದಿಗೆ ಹೊಂದಿಸಿರುವ ಈ ಪುಸ್ತಕವು ಮಕ್ಕಳಿಗೆ ಗಣಿತದ ಮೂರ್ತ ಅನುಭವ ನೀಡುತ್ತದೆ.
|
ಅರವಿಂದ ಗುಪ್ತ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ (1975). ವಿಜ್ಞಾನ ಚಟುವಟಿಕೆಗಳ ಕುರಿತು ೧೫ ಕೃತಿಗಳನ್ನು ರಚಿಸಿದ್ದಾರೆ. ಹಿಂದಿಯಲ್ಲಿ ಅವರ 140 ಕೃತಿಗಳು ಹೊರಬಂದಿವೆ. ದೂರದರ್ಶನಕ್ಕಾಗಿ ವಿಜ್ಞಾನ ಕುರಿತು 125 ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೊದಲ ಪುಸ್ತಕ ‘ಮ್ಯಾಚ್ಸ್ಟಿಕ್ ಮಾಡೆಲ್ಸ್ ಅಂಡ್ ಅದರ್ ಸೈನ್ಸ್ ಎಕ್ಸ್ಪೆರಿಮೆಂಟ್ಸ್’ ಭಾರತದ 12 ಭಾಷೆಗಳಿಗೆ ಅನುವಾದವಾಗಿದೆ; 5 ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿರುವ ರಾಷ್ಟ್ರೀಯ ಪ್ರಶಸ್ತಿಗೆ ಮೊದಲು ಭಾಜನರಾದವರು ಇವರು (1988). ಐ.ಐ.ಟಿ. ಕಾನ್ಪುರದ ಹಳೆಯ ವಿದ್ಯಾರ್ಥಿಗಳ ವಿಶೇಷ ಪ್ರಶಸ್ತಿ (2000), ಇಂದಿರಾಗಾಂಧಿ ಜನಪ್ರಿಯ ವಿಜ್ಞಾನ ಪ್ರಶಸ್ತಿ (2008), ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲು ಸ್ಥಾಪಿಸಿದ ‘ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿ’ (2010), ಇವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕೆಲವು. ಸದ್ಯ ಅವರು ಪುಣೆಯ I.U.C.A.A. ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಂತರಜಾಲದಲ್ಲಿ http://arvindguptatoys.com ಮೂಲಕ ಪುಸ್ತಕ ಮತ್ತು ಗೊಂಬೆಗಳ ಕುರಿತು ತಮ್ಮ ಆಸಕ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
|
|
| | |
|
|
|
|
|
|
|
|