
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಿನಿಮಾ ಬರಹಗಳೆಂದರೆ ಅದು ಸಾಹಿತ್ಯವಲ್ಲ, ಕೇವಲ ವರ್ಣರಂಜಿತ ಸುದ್ದಿಗಳು ಎನ್ನುವ ಭಾವನೆ ತುಂಬಾ ಹಿಂದಿನಿಂದಲೂ ಇದೆ. ಸಿನಿಮಾ ಮಾಧ್ಯಮ ಕೂಡ ಮೇಲೂ ನೋಟಕ್ಕೆ ಹಾಗೆ ಅನಿಸಿದರೂ ಕಥೆ, ಕವನ, ಕಾದಂಬರಿ ಅಥವಾ ಆತ್ಮ ಕಥೆಗಳ ಮೂಲಕ ಗಂಭೀರವಾದ ಸಾಹಿತ್ಯವೊಂದು ಕಟ್ಟಿಕೊಡುವ ಬದುಕಿನ ಅನುಭೂತಿ, ಸಿನಿಮಾದಲ್ಲೂ ಸಾಧ್ಯ ಎಂಬುದನ್ನು `ಗೇಟ್ ಕೀಪರ್` ಪುಸ್ತಕ ಹೇಳುತ್ತದೆ. ಈ ಕೃತಿಯಲ್ಲಿ ಜಗತ್ತಿನ ಹತ್ತಾರು ಭಾಷೆ, ನೂರಾರು ಬದುಕಿನ ಒಳ ಚಿತ್ರಣಗಳ ಕಥನಾಗಳು ಇವೆ. ಅಂಥ ಕಥನಗಳ ಜತೆಗೆ ನಮ್ಮ ಸಿನಿಮಾ - ಬದುಕನ್ನೂ ಸಹ ಪಕ್ಕದಲ್ಲಿಟ್ಟು ನೋಡುವ ಸ್ಮೂಕ್ಷ್ಮ ಸಂವೇದನೆಯ ಪ್ರಯತ್ನವೂ ಇಲ್ಲಿದೆ. ಕನ್ನಡದ ಜತೆಗೆ ಬೆಂಗಾಲಿ, ಹಿಂದಿ, ಮರಾಠಿ, ಗುಜರಾತಿ, ಮಲಯಾಳಂ, ಇರಾನ್, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್, ಬ್ರೆಜಿಲ್... ಹೀಗೆ ಜಗತ್ತಿನ ಹಲವು ಕ್ಲಾಸಿಕ್ ಚಿತ್ರಗಳ ಒಳ ನೋಟಗಳು ಇಲ್ಲಿವೆ. ಓದುವ ಅಭಿರುಚಿ ಹೊಂದಿದ ಓದುಗನೊಬ್ಬ ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಷ್ಟು ಕುತೂಹಲ, ರೋಚಕತೆ, ಅಭಿರುಚಿ ಮೂಡಿಸುವ ಸಿನಿಮಾ ಸಾಹಿತ್ಯ ಕೃತಿಯಿದು. ತೆರೆಯಲ್ಲಿ ಒಂದು ಸಿನಿಮಾ ಬಣ್ಣಗಳ ಮೂಲಕವೋ, ಸುಂದರವಾದ ಲೊಕೇಷನ್ ಮೂಲಕವೋ, ಭಾವನೆಗಳನ್ನು ಮೀಟುವ ಹಾಡುಗಳ ಮೂಲಕವೋ, ಮನಸ್ಸಿನ ಮೇಲೆ ಸವಾರಿ ಮಾಡುವಷ್ಟು ಚುರುಕಾದ ಸಂಭಾಷಣೆಗಳ ಮೂಲಕವೋ ಪ್ರೇಕ್ಷಕನನ್ನು ಹಿಡಿದಿಟ್ಟುಕೊಂಡು ಕೊನೆ ತನಕ ಸಾಗುವ ಹಾಗೆ ಕೃತಿಯ ಪ್ರತಿಯೊಂದು ಅಧ್ಯಾಯವೂ ಅಂತಹದ್ದೇ ಕುತೂಹಲ, ರೋಚಕತೆಯೊಂದಿಗೆ ಸಾಗುತ್ತವೆ ಎಂಬುದು ‘ಗೇಟ್ ಕೀಪರ್’ ಕೃತಿಯ ಹೆಚ್ಚುಗಾರಿಕೆ. ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ, ಜಗತ್ತಿನ ಕ್ಲಾಸಿಕ್ ಸಿನಿಮಾಗಳ ಮೋಡಿ ಒಳಗಾದವರಿಗೆ, ಈಗಷ್ಟೆ ಸಿನಿಮಾ ಕನಸು ಕಟ್ಟಿಕೊಂಡು, ಸಿನಿಮಾ ಕತೆಗಳ ಕಟ್ಟುವ ದಾರಿಯಲ್ಲಿರುವ ಉತ್ಸಾಹಿ ಸಿನಿ ಕೃಷಿಕರಿಗೆ ಈ ಪುಸ್ತಕ ಸದಾ ಜತೆಯಾಗಿರುವ ಅರ್ಹತೆಯನ್ನು ಹೊಂದಿದೆ.
|
| |
|
|
|
|