|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ದಲಿತರ ಬದುಕಿನ ಆಯಾಮವಾದ ಚಿತ್ರಣವನ್ನು ಒಳಗೊಂಡಿರುವ ತಮ್ಮ ಬದುಕು ಕಾದಂಬರಿಗೆ ೨೦೦೫ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಗಳಿಸಿರುವ ಶ್ರೀಮತಿ ಗೀತಾ ನಾಗಭೂಷಣ ಅವರು ಕನ್ನಡದಲ್ಲಿ ಹಲವು ಪ್ರಥಮಗಳನ್ನು ಮೆರೆದಿರುವ ಲೇಖಕಿ. ಈ ಪ್ರಶಸ್ತಿಯನ್ನು ಗಳಿಸಿದ ಮೊದಲ ಲೇಖಕಿಯಾಗಿರುವಂತೆಯೇ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷೆಯಾಗಿರುವ ಗೌರವಕ್ಕೆ ಪಾತ್ರವಾಗಿದ್ದಾರೆ. ಕಥೆ ಮತ್ತು ಕಾದಂಬರಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಸಾಹಿತ್ಯ ರಚನೆ ಮಾಡಿರುವ ಗೀತಾ ಅವರು ದಲಿತ ಸಾಹಿತ್ಯಕ್ಕೆ ಅಪಾರವಾದ ಕಾಣಿಕೆ ನೀಡಿದ್ದಾರೆ.ಇದುವರೆಗೆ ಸುಮಾರು ೨೭ ಕಾದಂಬರಿಗಳು, ೨ ಕಥಾ ಸಂಕಲನಗಳು, ಸಂಪಾದನ ಗ್ರಂಥಗಳು ಪ್ರಕಟವಾಗಿವೆ.
|
ಡಾ|| ಎನ್. ಗಾಯತ್ರಿ ಸಾಹಿತ್ಯದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಪದವೀಧರೆ. ರಿಜರ್ವ್ ಬ್ಯಾಂಕಿನಲ್ಲಿ ಅಧಿಕಾರಿ. ಸಾಹಿತ್ಯದಲ್ಲಿ ಒಲವು. ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸುದೀರ್ಘ ಕಾಲ ‘ಅಚಲ’ ಮಾಸ ಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಮಹಿಳಾ ಅಧ್ಯಯನ ಮತ್ತು ಚಳುವಳಿಗಳಲ್ಲಿ ವಿಶೇಷ ಆಸಕ್ತಿ ಮತ್ತು ಕಾಳಜಿಯನ್ನು ಹೊಂದಿರುವ ಇವರ ಪ್ರಮುಖ ಕೃತಿಗಳು : ಮಹಿಳೆ ಬಿಡುಗಡೆಯ ಹಾದಿಯಲ್ಲಿ, ಮಹಿಳಾ ಚಳುವಳಿಯ ಮಜಲುಗಳು, ಮುಖಾಮುಖಿ, ಕ್ಲಾರಾ ಜೆಟ್ಕಿನ್, ಮಹಿಳಾ ಮೀಸಲಾತಿ ಮತ್ತು ಲಿಂಗ ರಾಜಕಾರಣ.
|
|
| |
|
|
|
|
|
|
|
|
|