|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸುಧಾ ಎಂಟರ್ಪ್ರೈಸಸ್, Sudha Enterprises |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2008 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
304 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9798190685336 |
ಕೋಡ್ |
: |
153384 |
ಆ ಹುಡುಗನನ್ನು ಮಾತನಾಡಿಸಬೇಕೆಂದು ಅವಳ ಹೃದಯ ಹಾತೊರೆಯಿತು. ಅವನನ್ನು ಅಪ್ಪಿಕೊಳ್ಳಬೇಕೆಂಬ ಬಯಕೆ. ಅದನ್ನೇ ಕಾರ್ಯರೂಪಕ್ಕೆ ತರುವ ಶಕ್ತಿ ಅವಳಿಗಿರಲಿಲ್ಲ. “ಇಲ್ಲಿ ಬಾ” ಎಮ್ದು ಸನ್ನೆ ಮಾಡಿದಳು. ಅಳುಕಿಕೊಂಡು ಹೆಜ್ಜೆ ಇಟ್ಟರು ಅದರಲ್ಲಿ ದೃಢತೆ ಇತ್ತು. ಅದು ಅಪರಿಚಿತವಲ್ಲ. ಕ್ರಾಪಿನಲ್ಲಿ ಕೈಯಾಡಿಸಿದಳು. ಅರ್ಥವಾಗದ ಅಲೌಕಿಕ ಸಂತಸ. “What is your name?” ಮೃದುವಾದ ಪ್ರಶ್ನೆ. “My name is Rajesh. Master Giridhar” ಎಂದು ಹೇಳೀ ಓಡಿಬಿಟ್ಟ. ಹತ್ತಿರಕ್ಕೆ ಬಂದ ತಂದೆಯ ಕೈ ಹಿಡಿದು ನಿಧಾನವಾಗಿ ಸಾಗಿಹೋದ. ಕಾರಿನ ಬಾನೆಟ್ ಎತ್ತಿ ರಿಪೇರಿಯಲ್ಲಿ ತೊಡಗಿದ್ದ ರಾಜು ಹತ್ತಿ ಕೂತು ಸ್ಟಾರ್ಟ್ ಮಾಡಿದ. ಸುಮನ್ ಯಾಂತ್ರಿಕವಾಗಿ ಹತ್ತಿ ಕೂತಳು. ಅವಳ ಹೃದಯ “ಗಿರಿಧರ್...ಗಿರಿಧರ್” ಎಂದು ಜಪಿಸುತ್ತಿತ್ತು.
|
ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.
|
|
| |
|
|
|
|
|
|
|
|
|