|
|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಛಂದ ಪುಸ್ತಕ, Chanda Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
144 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
186094 |
ಈ ಪ್ರಶಾಂತ ಆಡೂರ, ಅವರ ಪತ್ನಿ, ಅವರ ತಾಯಿ - ಈ ಮೂವರ ಜಗತ್ತಿನಲ್ಲಿ ಏನು ಬೇಕಾದರೂ ಆಗಬಹುದು. ಹೆಂಡತಿ ಸ್ನಾನಕ್ಕೆ ಹೋದರೆ ಗಂಟೆಗಟ್ಟಲೆ ವಾಪಸ್ ಬರೋದಿಲ್ಲ. ಕೊರಿಯರ್ನವನು ‘ಡೋರ್ ಓಪನ್, ಬಟ್ ಬಾತ್ರೂಮ್ ಲಾಕ್ಡ್’ ಷರಾ ಬರೆದು ಹೋಗುತ್ತಾನೆ. ಕಳ್ಳಕುಬಸಾ ಮಾಡೋ ಪ್ರಹಸನ ನಡೆಯುತ್ತದೆ. ಮೋನಪ್ಪನ ಮಗಳು ದೊಡ್ಡೋಳಾದ ತಕ್ಷಣ. ಅಳಿಯನಿಗೆ ಮದುವೆ ವಯಸ್ಸಾಗಿದೆ ಅನ್ನೋದು ಮಾವನಿಗೆ ಹೊಳೆಯುತ್ತದೆ. ಅದ್ಯಾರೋ ಕೋಮಾಕ್ಕೆ ಹೋಗುತ್ತಾರೆ. ಆಶೀರ್ವಾದಕ್ಕಾಗಿ ಉಡುಗೊರೆ ಕೊಡೋ ಹೊಸ ಕಂಗಾಲು ಪ್ರಸಂಗ ಎದುರಾಗುತ್ತದೆ!
ಪ್ರಶಾಂತ ಆಡೂರ ಪ್ರಬಂಧಗಳನ್ನು ಕೇವಲ ಹಾಸ್ಯಲೇಖನಗಳೆಂದು ಕರೆಯುವಂತಿಲ್ಲ. ತಮಾಷೆಯಾಗಿ ಬರೆಯುತ್ತಲೇ ಬದುಕಿನ ವಿವಿಧ ಮಗ್ಗಲುಗಳನ್ನು ಸ್ಪರ್ಶಿಸುತ್ತಾರೆ. ಕಟುಸತ್ಯಗಳನ್ನು ಹೇಳುತ್ತಾರೆ. ನೋಯಿಸದೇ ನಗಿಸುತ್ತಾರೆ ಮತ್ತು ನಗಿಸುತ್ತಲೇ ಯೋಚಿಸುವಂತೆ ಮಾಡುತ್ತಾರೆ.
ನಾಲ್ಕು ಗೆಳೆಯರು ಜಗಲಿಯಲ್ಲೋ ಅರಳೀಕಟ್ಟೆಯಲ್ಲೋ ಹಸಿರು ಹುಲ್ಲುಗಾವಲಿನಲ್ಲೋ ಹರಟೆ ಹೊಡೆಯುತ್ತಿದ್ದರೆ. ಹಾಸ್ಯಕ್ಕೆಲ್ಲಿಯ ಬರ? ಇವರ ಬರಹಗಳೂ ಅಷ್ಟೇ ಆಪ್ಯಾಯಮಾನ. ಅಲ್ಲೆಲ್ಲೋ ಒಬ್ಬ ಲೇಖಕ ಕೂತು ಇದನ್ನೆಲ್ಲ ಬರೆದಿದ್ದಾನೆ ಎಂಬ ಭಾವನೆ ಹುಟ್ಟದಂತೆ, ಸಖಸಮ್ಮಿತ ಶೈಲಿಯಲ್ಲಿ ಬರೆಯುವ ಪ್ರಶಾಂತ ಬರಹದ ದೊಡ್ಡ ಶಕ್ತಿ ಅವರು ಬಳಸುವ ಧಾರವಾಡದ ಭಾಷೆ. ಅವರ ಪುಟ್ಟ ಕುಟುಂಬ, ಏನಾದರೊಂದು ತರಲೆ ಮಾಡುವ ಮಿತ್ರರು, ಅದಕ್ಕೆ ತಕ್ಕಂತೆ ಒದಗಿ ಬರುವ ಪ್ರಸಂಗಗಳು.
ನೀವಿದನ್ನು ಓದಿ ಮುಗಿಸುವ ಹೊತ್ತಿಗೆ ಬೀಪಿ ಇಳಿದು ಹೋಗಿ, ಶುಗರು ನಾರ್ಮಲ್ಲಾಗಿ, ಆಯಸ್ಸು ಕನಿಷ್ಠ ಒಂದೆರಡು ವರುಷ ಹೆಚ್ಚುತ್ತದೆ!
|
1973ರಾಗ ಹುಟ್ಟಿದ್ದು... ಹಂಗ ನಮ್ಮವ್ವನ ಅವ್ವನ ತವರಮನಿ ಅಂದರ ನಮ್ಮಜ್ಜಿ ತವರಮನಿ ಅಂತ ಮಲೆನಾಡಿನ ಶಿವಮೊಗ್ಗಾದೊಳಗ ಹುಟ್ಟಿದರು ಬೆಳದಿದ್ದು-ಬಲತಿದ್ದು ಎಲ್ಲಾ ಬೈಲನಾಡಿನ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಎಸ್ಸಿ, ಎಮ್.ಬಿ.ಎ (ಸಿಂಬಾಯ್ಸಿಸ್).
ಸದ್ಯೇಕ ಹುಬ್ಬಳ್ಳ್ಯಾಗ ಒಂದ ಪ್ರಾವೇಟ ಕಂಪನಿ ಒಳಗ ಸಿ.ಇ.ಒ. ಅಂತ 20 ವರ್ಷದಿಂದ ನೌಕರಿ, ಕನ್ನಡ ಆನ್ ಲೈನ ಬ್ಲಾಗ ಒಳಗ ಆವಾಗ ಇವಾಗ ಅಂಕಣಾ ಬರಿಯೋದು. ವಿಜಯ ಕರ್ನಾಟಕ ‘ಹಾಳ ಹರಟೆ ಅಂಕಣಕಾರ’ ಇದ್ದೆ, ಈಗ ವಿಜಯವಾಣಿ ‘ಗಿರಮಿಟ್’ ಅಂಕಣ ಬರಿಲಿಕತ್ತೇನಿ. ನಂದ ಒಂದ ಸ್ವಂತ www.adur.org ಅಂತ ಬ್ಲಾಗ ಬ್ಯಾರೆ ಅದ.
ಹಂಗ ಸದ್ಯೇ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೆಂಬರ್ ಬ್ಯಾರೆ ಇದ್ದೇನಿ.
ತಲ್ಯಾಗ ತಿಳದಾಗೊಮ್ಮೆ ಪೇಂಟಿಂಗ ಮಾಡ್ತೇನಿ, ವಾರಕ್ಕ ಒಂದ ಮೂರ ಸರತೆ ಫೋಟೊಗ್ರಾಫಿ... ಇವು ಸಂಸಾರೇತರ ಹವ್ಯಾಸ. ಹಂಗ ಸಂಸಾರದ ಜಂಜಾಟದ ಜೊತಿ ಹೆಂಡತಿ ಹೂಂ ಅಂದಾಗ ಒಂದಿಷ್ಟ ಸಮಾಜಿಕ ಕೆಲಸನೂ ಮಾಡತಿರ್ತೇನಿ ಆ ಮಾತ ಬ್ಯಾರೆ. ಅಂದರ ಊರ ಉಸಾಬರಿ ಅನ್ನರಿ.
ಮನ್ಯಾಗ ಸದ್ಯೇಕ ಒಂದ ಹೆಂಡ್ತಿ ಎರಡ ಮಕ್ಕಳನ ಕಟಗೊಂಡ ನಮ್ಮವ್ವನ ನೇತೃತ್ವದೊಳಗ ಸಂಸಾರ ನಡಸಿಗೋತ ಹೊಂಟೇನಿ.
|
|
| |
|
|
|
|
|
|
|
|
|