|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ದೇಶದ ಅಸಂಖ್ಯಾತ ಜನರು ಕಡುಬಡತನದಿಂದ ತೊಳಲುತ್ತಾರೆ. ಅದೇ ವೇಳೆ ಕೆಲವೇ ಮಂದಿ ಸಿರಿವಂತರು ಅಸಹ್ಯವೆನಿಸುವಂಥ ಆಡಂಬರದ ಜೀವನ ನಡೆಸುತ್ತಾರೆ. ಬಲಿಷ್ಠರು ದುರ್ಬಲರನ್ನು ಶೋಷಿಸುತ್ತಾರೆ. ಪುರೋಹಿತಶಾಹಿಗಳು ದೇವರ ಹೆಸರಿನಲ್ಲಿ ಜನರ ಮಧ್ಯೆ ಅಜ್ಞಾನ, ಮೂಢನಂಬಿಕೆ ಮತ್ತು ಗೊಡ್ಡು ಸಂಪ್ರದಾಯಗಳನ್ನು ಬಿತ್ತುತ್ತಾರೆ. ತಾರತಮ್ಯಕರ ಜಾತಿಪದ್ಧತಿ, ಅಸ್ಪೃಶ್ಯತೆ ಮುಂದುವರಿಯುತ್ತವೆ. ರಾಜಕೀಯದಲ್ಲಿ ಐಷಾರಾಮ ಜೀವನ ಎಂದು ಭಾವಿಸುವ ಜನರು ಹೆಚ್ಚುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ದೇಶದ ಏಳಿಗೆಯನ್ನು ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯ? ಈ ಅನಿಷ್ಟಗಳ ವಿರುದ್ಧ ಜಾಗೃತಿ ಉಂಟುಮಾಡಲು ಪ್ರಯತ್ನಿಸಿದವರು ಗೋರಾ. ಇವರು ಪ್ರಾಧ್ಯಾಪಕ, ಸಾಮಾಜಿಕ್ ಕಾರ್ಯಕರ್ತ, ಕಾಂಗ್ರೆಸಿಗ, ಗಾಂಧೀಜಿಯವರ ಅಭಿಮಾನಿ, ನಾಸ್ತಿಕ! ಕಟ್ಟಾ ಸಂಪ್ರದಾಯವಾದಿಗಳ ಕುಟುಂಬದಲ್ಲಿ ಜನಿಸಿದರೂ, ಸಂಪ್ರದಾಯ ಮುರಿದು ಶೂದ್ರದೀಕ್ಷೆ ಪಡೆದವರು. ಅವರು ಸವೆಸಿದ ಹಾದಿ ಕಠಿಣವಾದದ್ದು. ಹಾಗಿದ್ದರೂ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಕೈಬಿಡಲಿಲ್ಲ; ಪ್ರವಾಹಕ್ಕೆದುರು ಈಜಲು ಹೆದರಲಿಲ್ಲ.
|
| |
|
|
|
|
|
|
|
|
|