|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮದರಾಸ್ ವಿಶ್ವವಿದ್ಯಾನಿಲಯವು ನಡೆಸುತ್ತಿದ್ದ‘ಕನ್ನಡ ವಿದ್ವಾನ್‘ ಪರೀಕ್ಷೆಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದ ‘ನಮ್ಮ ಊರಿನ ರಸಿಕರು‘ ಎನ್ನುವ ಪುಸ್ತಕವು ಪಠ್ಯವಾಗಿತ್ತು! ಗೊರೂರು ಅವರು ಕನ್ನಡ ವಿದ್ವಾನ್ ಪರೀಕ್ಷೆಯನ್ನು ಕಟ್ಟಿದಾಗ, ಅವರು ತಾವು ಬರೆದ ಪುಸ್ತಕವನ್ನು ತಾವೇ ಓದಬೇಕಾಯಿತು. ವಿದ್ವಾನ್ ಪರೀಕ್ಷೆಯ ಪರೀಕ್ಷಕರಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ‘ಏನ್ರಿ! ನೀವೇ ಬರೆದ ಪುಸ್ತಕ ಅದು. ಇನ್ನೂ ಚೆನ್ನಾಗಿ ಓದಿಕೊಂಡು ಬಂದು ಉತ್ತರ ಬರೆಯಬಾರದಿತ್ತೆ? ನಿಮಗೆ ಕೊಟ್ಟ ಅಂಕವೇ ಹೆಚ್ಚಾಯಿತು‘ ಎಂದು ಆಕ್ಷೇಪಿಸಿದರೆಂತೆ! ಇಂತಹ ಪ್ರಸಂಗ ಯಾವ ಸಾಹಿತಿಯ ಬದುಕಿನಲ್ಲೂ ಬಂದಿರಲಾರದು! ಗೊರೂರು ಕನ್ನಡದಲ್ಲಿ ತಮ್ಮ ‘ನಮ್ಮ ಊರಿನ ರಸಿಕರು‘, ‘ಹಳ್ಳಿಯ ಚಿತ್ರಗಳು‘, ‘ಅಮೆರಿಕದಲ್ಲಿ ಗೊರೂರು‘ ಮುಂತಾದ ಪುಸ್ತಕಗಳ ಮೂಲಕ ಕನ್ನಡ ಹಸ್ಯ ಸಾಹಿತ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿದ ಆದ್ಯರು. ಹಾಸ್ಯ ಸಾಹಿತ್ಯದಷ್ಟೇ ಗಂಭೀರ ಸಾಹಿತ್ಯವನ್ನೂ ಬರೆದವರು. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಗೊರೂರು ಅವರು ಗಾಂಧೀಜಿಯವರ ಆಪ್ತ ವಲಯದಲ್ಲಿ ಒಬ್ಬರಾಗಿದ್ದರು.
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|