|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೧೯೮೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಹಿತ್ಯ ಲೋಕದ ಅಪೂರ್ವ ಸಾಹಿತಿಯೂ ಹೌದು; ಸ್ವಾಂತಂತ್ರ್ಯಯೋಧರೂ ಹೌದು. ಗ್ರಾಮೀಣ ಜೀವನದ ಹಲವು ಹತ್ತು ಮುಖಗಳಿಗೆ ಚಿರಸ್ಮರಣೀಯ ಅಭಿವ್ಯಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ನೀಡಿ ಅಮರರೇ ಆಗಿರುವಂಥವರು. ಅವರ ಸಾಹಿತ್ಯದ ಉಪಲಬ್ಧಿ ಅಪ್ರಯತ್ನಪೂರ್ವಕವೂ ಸಹಜವೂ ಆದ ಸೃಷ್ಟಿಯ ಲೀಲಾವಿಲಾಸ ವೈಭವಗಳ ಪ್ರತೀಕವೇ ಆಗಿದೆ. ತಮ್ಮ ಆರಾಧ್ಯನಾಯಕರಾಗಿದ್ದ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಿಗೆ ಇಂಬುಕೊಡುವಂಥ ಸಾಹಿತ್ಯವನ್ನೂ ಅವರು ಸಮೃದ್ಧ ಪ್ರಮಾಣದಲ್ಲೇ ತಂದುಕೊಟ್ಟಿದ್ದಾರೆ. ಕುವೆಂಪು ಅವರೆಂದಿರುವಂತೆ, ಕನ್ನಡದಲ್ಲಿದ್ದ ಹಾಸ್ಯದ ಅರಕೆಯನ್ನು ಹೋಗಲಾಡಿಸಿದ ಕೆಲವೇ ಲೇಖಕರಲ್ಲಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರು ನಿಶ್ಚಯವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ.
|
| |
|
|
|
|
|
|
|
|
|