Items
0
Total
  0.00 
Welcome Guest.

 
ಗ್ರೇತಾ ಥನ್ ಬರ್ಗ್ (ಮೂಕ ಪೃಥ್ವಿಗೆ ಮಾತುಕೊಟ್ಟ ಕಿಶೋರಿ)
ಲೇಖಕರು: ನಾಗೇಶ ಹೆಗಡೆ, Nagesh Hegde

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಭೂಮಿ ಬುಕ್ಸ್, Bhoomi Books
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ಕೋಡ್ : 1120658

ಆಸೆಯೇ ದುಃಖಕ್ಕೆ ಕಾರಣ ಎಂಬ ಪ್ರಸಿದ್ಧ ಮಾತಿದೆ. ಇದು ಬುದ್ಧನ ನುಡಿ. ಪಾಳಿ ಭಾಷೆಯಲ್ಲಿ ಆಸೆ ಎನ್ನುವುದಕ್ಕೆ `ತನ್ಹಾ` ಎಂದಿದೆ. ಸಂಸ್ಕೃತದಲ್ಲಿ `ತೃಷ್ಣೆ` ಎಂದಿದೆ. ಇಂಗ್ಲೀಷ್ನಲ್ಲಿ ಕ್ರೇವಿಂಗ್ ಎಂದಿದೆ. ಇದನ್ನು ನೋಡಿದಾಗ `ಆಸೆ` ಪದ ಸಾಲದು ಅನ್ನಿಸುತ್ತದೆ. ಇದಕ್ಕೆ ಹತ್ತಿರದ ಪದ ಹುಡುಕುತ್ತ ಕಂಡದ್ದು- `ದಾಹ` ಅಂದರೆ `ದಹಿಸುವುದು` ಎಂದೂ ಅರ್ಥವಂತೆ. ಸದ್ಯಕ್ಕೆ ದಾಹವೇ ದುಃಖಕ್ಕೆ ಕಾರಣ- ಎಂದಿಟ್ಟುಕೊಳ್ಳಬಹುದೇನೊ.
ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು, ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಸೈಕ್ಲೋನ್ಗಳು ಅಪ್ಪಳಿಸುತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು.
ಈಗ, ಪುಣ್ಯಕ್ಕೆ ಭೂಮಿತಾಯಿಯೇ ಸ್ವೀಡನ್ನ ಹದಿನಾರು ವರ್ಷದ ಬಾಲೆ ಗ್ರೇತಾ ಥನ್ಬರ್ಗ್ಳ ಮೈಮೇಲೆ ಬಂದು ನುಡಿಸಿದಂತೆ ಗ್ರೇತಾ ನುಡಿಯುತ್ತಿದ್ದಾಳೆ. ಇಂದಿನ ಹವಾಮಾನ ಸಂಕಷ್ಟಕ್ಕೆ ಕಾರಣರಾದ ಜಗತ್ತಿನ ನಾಯಕರಿಗೆ `ಹೌ ಡೇರ್ ಯೂ` ಎಂದು ಕೇಳುತ್ತಿದ್ದಾಳೆ. ಹೀಗೆ ಕೇಳುತ್ತಾ ಮೂಕ ಪೃಥ್ವಿಗೆ ಮಾತು ಕೊಟ್ಟ ಈ ಹುಡುಗಿಗೆ ಇಡೀ ಭೂಮಿಯೇ ತನ್ನ ಮನೆ ಎಂಬ ಭಾವನೆ ಇದೆ ಎಂದು ಲೇಖಕರು ಗುರುತಿಸುತ್ತಾರೆ. ನಿಜ, ತನ್ನೊಳಗೇನೆ ಸಕಲ ಜೀವಸಂಕುಲವನ್ನು ಧರಿಸಿರುವಂತೆ ಈ ಬಾಲೆ ಕಾಣುತ್ತಾಳೆ. ಆಶ್ಚರ್ಯವೆಂದರೆ, ಕೆನಡಾದ ಸೆವರ್ನ್ ಸುಝಕಿ ಕೂಡ ``ನಮ್ಮದು ಐದು ನೂರು ಕೋಟಿ ಜನ, ಮೂರು ಕೋಟಿ ಜೀವ ಪ್ರಬೇಧಗಳ ಒಂದು ದೊಡ್ಡ ಕುಟುಂಬ. ರಾಷ್ಟ್ರದ ಗಡಿಗಳು ಎಷ್ಟೇ ಇದ್ದರೂ ಈ ಕುಟುಂಬ ಮಾತ್ರ ಒಂದೇ. ಅದನ್ನು ಬದಲಿಸಲು ಸಾಧ್ಯವಿಲ್ಲ. ಭೂಮಿಗೆ ಸಂಕಷ್ಟ ಬಂದರೆ ನಮಗೆಲ್ಲರಿಗೂ ಬಂದ ಹಾಗೇ. ನಮಗೆಲ್ಲರಿಗೂ ಒಂದೇ ಬಗೆಯ ನಾಳೆಗಳು ಕಾದಿವೆ. ನಾವೆಲ್ಲ ಒಂದಾದರೆ ಮಾತ್ರ ನಾಡಿನ ಭೂಮಿ ಜೀವಂತವಿರಲು ಸಾಧ್ಯ`` ಎನ್ನುತ್ತಾಳೆ. ಭಾರತ ಮೂಲದ ಅಂಜಲಿ ಅಪ್ಪಾದುರೈ ಕೂಡ ಹೀಗೇಯೆ ಮಾತಾಡುತ್ತಿದ್ದಾಳೆ. ಬಾಲ್ಯಕ್ಕೆ ಮಾತ್ರ ಇಂತಹ ಧಾರಣಾಶಕ್ತಿ ಇದೆಯೆ.
-ದೇವನೂರ ಮಹಾದೇವ
(ಮುನ್ನುಡಿಯಿಂದ)

ನಾಗೇಶ ಹೆಗಡೆ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು - ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸಿದವರು. ಇವರು ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ಲೇಖಕರಿಗೆ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಪ್ರಜಾವಾಣಿಯಲ್ಲಿ ವಿಜ್ಞಾನ ವಿಶೇಷ ಅಂಕಣ ಎಲ್ಲ ವಯೋಮಾನದವರಿಗೆ ವಿಜ್ಞಾನವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಸರಳವಾಗಿ ವಿವರಿಸುತ್ತದೆ.
ನಾಗೇಶ ಹೆಗಡೆಯರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕೆಮನೆ ಎಂಬ ಚಿಕ್ಕ ಹಳ್ಳಿ. ಜನ್ಮ ದಿನಾಂಕ ೧೪ ಫೆಬ್ರುವರಿ ೧೯೪೮. ಇವರು ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ್ದರು. ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ. ಫಿಲ್ ಮಾಡಿದರು.

ಲೇಖಕರ ಇತರ ಕೃತಿಗಳು
10%
ಭೂಮಿಯೆಂಬ ಗಗನನೌಕೆ : ....
ನಾಗೇಶ ಹೆಗಡೆ, Nagesh Hegde
Rs. 180    Rs. 162
10%
ಗಗನ ಸಖಿಯರ ಸೆರಗ ....
ನಾಗೇಶ ಹೆಗಡೆ, Nagesh Hegde
Rs. 95    Rs. 86
10%
ನಮ್ಮೊಳಗಿನ ದುಂದುಮಾರ
ನಾಗೇಶ ಹೆಗಡೆ, Nagesh Hegde
Rs. 120    Rs. 108
10%
ಇರುವುದೊಂದೇ ಭೂಮಿ : ....
ನಾಗೇಶ ಹೆಗಡೆ, Nagesh Hegde
Rs. 180    Rs. 162
Best Sellers
ಕರ್ನಾಟಕದ ಸಂಕ್ಷಿಪ್ತ ಇತಿಹಾಸ (ಕರ್ನಾಟಕ ಇತಿಹಾಸ)
ಸೂರ್ಯನಾಥ ಕಾಮತ್, Suryanath Kamath
Rs. 198/-   Rs. 220
Rapidex English Speaking Course in (Telugu)
Gupta R K
Rs. 194/-   Rs. 215
ಖಲೀಲ್ ಗಿಬ್ರಾನ್ ಪ್ರೇಮ ಪತ್ರಗಳು
ಖಲೀಲ್ ಗಿಬ್ರಾನ್, Kahlil Gibran
Rs. 108/-   Rs. 120
ಅಶ್ರುತಗಾನ
ಗಟ್ಟಿ ಕೆ ಟಿ, Gatti K T
Rs. 90/-   Rs. 100

Latest Books
ಪಂಜೆ ಮಂಗೇಶರಾಯರ ಕತೆಗಳು
ಪಂಜೆ ಮಂಗೇಶರಾಯರು, Panje Mangesharayaru
Rs. 176/-   Rs. 195
ಇಂಗ್ಲಿಷ್ ನುಡಿಗಟ್ಟು ಮತ್ತು ಪಡೆನುಡಿಗಳ ವಿವರಣಾತ್ಮಕ ಕೋಶ
ಬೇದ್ರೆ ಮಂಜುನಾಥ, Bedre Manjunatha
Rs. 90/-   Rs. 100
ಕಾಲಕ್ರಮ : ಹೊಸ ಮನುಷ್ಯ ಪತ್ರಿಕೆಯ ಮುಖ್ಯ ಸಂಪಾದಕೀಯ ಬರಹಗಳ ಸಂಗ್ರಹ
ನಾಗಭೂಷಣ ಡಿ ಎಸ್, Nagabhushana D S
Rs. 333/-   Rs. 370
ಮೂರ್ಖನ ಮಾತುಗಳ : ಹತ್ತು ನಾಕು ಮೆಟ್ಟಿಲು
ಅಹೋರಾತ್ರ / Ahoratra, Ahoratra
Rs. 270/-   Rs. 300


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.