|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಗುಬ್ಬಿ ವೀರಣ್ಣನವರು ‘ಗುಬ್ಬಿ ಕಂಪನಿ‘ಯ ಮೂಲಕ ನಾಟಕವನ್ನಾಡುವ ಮೊದಲು ವೃತ್ತಿರಂಗಭೂಮಿಯ ದುಃಸ್ಥಿತಿ ಶೋಚನೀಯವಾಗಿತ್ತು. ಮೊದಲು ನಾಟಕವನ್ನು ಆಡಬೇಕು. ಅನಂತರ ನಟರು ತಟ್ಟೆಯನ್ನು ಹಿಡಿದು ಪ್ರೇಕ್ಷಕರ ಬಳಿ ಹೋಗಬೇಕು. ಪ್ರೇಕ್ಷಕ ಮಹಾಪ್ರಭು ದಯಪಾಲಿಸಿದಷ್ಟು ಸ್ವೀಕರಿಸಿ ಬದುಕನ್ನು ನಡೆಸಬೇಕು. ಇಂತಹ ಸ್ಥಿತಿಯಲ್ಲಿ ಕ್ಯೂ ನಿಮ್ತು ನಾಟಕಗಳ ಟಿಕೆಟ್ ಕೊಳ್ಳುವಂತೆ ಮಾಡಿ ‘ಹೌಸ್ ಫುಲ್‘ ನಾಟಕಗಳನ್ನು ನಡೆಸಿದ ಕೀರ್ತಿ ವೀರಣ್ಣನವರದು! ವೀರಣ್ಣನವರ ರಂಗನಿಷ್ಠೆ ಅಮೋಘ! ವೀರಣ್ಣನವರ ಪತ್ನಿ ಸುಂದರಮ್ಮನವರು ರಂಗದ ಮೇಲೆ ಅಭಿನಯಿಸುತ್ತಿರುವಂತೆಯೇ ಮರಣ ಹೊಂದಿದರು. ಸಹನಟರಾಗಿದ್ದ ವೀರಣ್ಣನವರಿಗೆ ತಮ್ಮ ಪ್ರಿಯ ಪತ್ನಿ ಮರಣಿಸಿದರೂ ನಾಟಕವನ್ನು ಮುಂದುವರಿಸಿದರು. ನಾಟಕ ಮುಗಿಯುವವರೆಗೂ ತಮ್ಮ ಮಕ್ಕಳನ್ನೂ ಸುಂದರಮ್ಮನವರ ಬಳಿಗೆ ಹೋಗಲು ಬಿಡಲಿಲ್ಲ. ನಾಟಕ ಪೂರ್ಣ ಮುಗಿದ ಮೇಲೆಯೇ ಪ್ರೇಕ್ಷಕರಿಗೆ ನಡೆದ ದುರ್ಘಟನೆ ಅರಿವಿಗೆ ಬಂದದ್ದು! ಇದು ವೀರಣ್ಣನವರ ರಂಗನಿಷ್ಠೆಗೆ ಒಂದು ಉದಾಹರಣೆ ಮಾತ್ರ! ಗುಬ್ಬಿ ವೀರಣ್ಣನವರ ಚರಿತ್ರೆ, ಗುಬ್ಬಿ ನಾಟಕ ಕಂಪನಿಯ ಚರಿತ್ರೆ, ಕನ್ನಡ ವೃತ್ತಿ ರಂಗಭೂಮಿಯ ಚರಿತ್ರೆ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.
|
| |
|
|
|
|
|
|
|
|
|