|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
200 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789384486396 |
ಕೋಡ್ |
: |
189620 |
‘ರೇಲ್ವೆ ರಾಜು’ ಎಂದೆ ಪ್ರಸಿದ್ಧನಾದ ಒಬ್ಬ ನಿರಪಾಯಿ ಯುವಕನ ಕಥೆ ಇದು. ಯಾವ ಪೂರ್ವ ತಯ್ಯಾರಿಯೂ ಇರದೆ ಬದುಕನ್ನು ಅದು ಬಿಚ್ಚಿಕೊಂಡಂತೆ ಅದಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತ ಹೋಗುವ ರಾಜು ಅಚಾನಕ್ ಆಗಿ ಸುಂದರ ನರ್ತಕಿ ರೋಸಿಯಿಂದ ಆಕರ್ಷಿತನಾಗುವನು. ಅವಳು ತನ್ನ ಸಂಶೋಧಕ ಪತಿಯಿಂದ ದೂರವಾಗುವುದಕ್ಕೂ ಕಾರಣನಾಗುವನು. ಸಹಜ ಪ್ರತಿಭೆಯ ರೋಸಿಯನ್ನು ತನ್ನ ಪರಿಶ್ರಮದಿಂದ ಒಬ್ಬ ದೊಡ್ಡ ನರ್ತಕಿಯನ್ನಾಗಿ ಮಾಡುತ್ತಾನೆ. ಅವಳೊಂದಿಗೆ ತಾನೂ ಪ್ರಸಿದ್ಧಿ ಮತ್ತು ಸಂಪತ್ತನ್ನು ಸಂಪಾದಿಸುತ್ತಾನೆ. ಸಂಪಾದಿಸುವುದರ ಜೊತೆಗೆ ಸಾಕಷ್ಟು ಕಳೆದುಕೊಳ್ಳುತ್ತಾನೆ. ಜೈಲುವಾಸವನ್ನೂ ಅನುಭವಿಸುವನು. ಜೈಲಿನಿಂದ ಹೊರಬಂದ ಮೇಲೆ ವಿಚಿತ್ರ ಪರಿಸ್ಥಿತಿಗೆ ಪ್ರಜ್ಞಾಪೂರ್ವಕವಾಗಿ ಒಪ್ಪಿಸಿಕೊಳ್ಳುತ್ತ ಒಂದರ್ಥದಲ್ಲಿ ‘ಸಂತ’ನಾಗಿ ಬಿಡುತ್ತಾನೆ.
ಹೀಗೆ ‘ಗೈಡ್’ ರಾಜುವಿನ ಏಳು-ಬೀಳುಗಳ ಇತಿಹಾಸ. ಈ ಇತಿಹಾಸದ ನಿಗೂಢತೆಯನ್ನು ಆರ್.ಕೆ. ನಾರಾಯಣ್ ಅವರು ತಮ್ಮ ನವಿರಾದ ಹಾಸ್ಯ ಶೈಲಿಯಲ್ಲಿ ಭೇದಿಸುತ್ತಾರೆ. ಇದರೊಂದಿಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಾರೆ. ನೈದಿಲೆಯ ತರಹ ‘The Guide’ ಭಾರತೀಯ ಸಮಾಜದ ಸರೋವರದ ಮೇಲೆ ತೇಲಿಸಿದರೂ, ಆ ಸಮಾಜದ ಉದ್ದಗಲಗಳನ್ನು ಭೇದಿಸುತ್ತದೆ. ಯಾವ ತಯ್ಯಾರಿಯೂ ಇರದೆ ಒಮ್ಮಿಂದೊಮ್ಮೆಲೆ ‘ಸಂತ’ನಾದ ವ್ಯಕ್ತಿಯೊಬ್ಬನ ಬದುಕನ್ನು ಚಿತ್ರಿಸಿದೆ.
|
| | |
|
|
|
|
|
|
|
|