|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ರವೀಂದ್ರನಾಥ ಠಾಕೂರರ ಯೌವನದ ನಂತರದ ಬದುಕಿನ ಘಟನೆಗಳನ್ನು ಚಿತ್ರಿಸುವ ಕೃತಿ ಗುರುದೇವ (ಪುಸ್ತಕ ಎರಡು). ರವೀಂದ್ರರು ಆ ವೇಳೆಗಾಗಲೇ ಕವಿಯಾಗಿ, ನಾಟಕಕಾರರಾಗಿ ಕಥೆಗಾರರಾಗಿ ತಮ್ಮ ಇರವನ್ನು ಸ್ಥಿರಪಡಿಸಿಕೊಂಡಿದ್ದರು. ಮುಂದಿನದು ಸೃಜನಶೀಲತೆಯ ತುಮುಲದ ಬದುಕು. ರವೀಂದ್ರರ ವಿವಾಹ, ಮಕ್ಕಳು, ಕುಟುಂಬ ಜೀವನದೊಂದಿಗೆ ಅವರ ಸೃಜನಶೀಲತೆಯೂ ವಿಸ್ತಾರಗೊಂಡಿತು. ಕಾದಂಬರಿಗಳನ್ನು ರಚಿಸಿದರು, ನಾಟಕ ರಚಿಸಿ ಪ್ರದರ್ಶಿಸಿದರು. ಕವಿತೆಗಳು, ಪ್ರಬಂಧಗಳು ಪ್ರಕಟವಾದವು. ಶಾಂತಿನಿಕೇತನದ ಸ್ಥಾಪನೆ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡೇ ತಮ್ಮ ಕಾವ್ಯ ಕೃಷಿಯನ್ನು ಮುಂದುವರಿಸಿದರು. ಹಿತಶತ್ರುಗಳ ಕಿರುಕುಳ, ಅಪಮಾನ ಸಹಿಸಿಕೊಂಡರು. ಪತ್ನಿ, ಮಕ್ಕಳ, ಬಂಧುವರ್ಗದವರ ಸಾವಿನ ನೋವು, ಜೊತೆಗೆ ಬ್ರಿಟಿಷ್ ಸರಕಾರದ ವಕ್ರದೃಷ್ಟಿ. ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸಂಪರ್ಕ, ಹಲವು ಬಾರಿ ವಿದೇಶ ಪ್ರವಾಸ, ಗೀತಾಂಜಲಿಗಾಗಿ ನೊಬೆಲ್ ಪಾರಿತೋಷಕ ಪುರಸ್ಕಾರ - ಹೀಗೆ ರವೀಂದ್ರರ ಬದುಕಿನ ಹಲವು ರೋಚಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿ.
|
| |
|
|
|
|
|
|
|
|
|