
|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2017 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
504 |
ಪುಸ್ತಕದ ಗಾತ್ರ |
: |
1/4 Crown Size |
ಕೋಡ್ |
: |
125498 |
ಶೆಟ್ಟರ್ ಅವರ ‘ಹಳಗನ್ನಡ – ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಕನ್ನಡವನ್ನು ಕುರಿತ ಬಹು ಮುಖ್ಯ ಅಧ್ಯಯನಗಳಲ್ಲಿ ಒಂದು. ಈ ಪುಸ್ತಕಕ್ಕೆ ಇರುವ ಸಾಹಿತ್ಯ ಚರಿತ್ರೆಯ ಒಂದು ಓದು ಮತ್ತು ಸಾಮಾಜಿಕ ಚರಿತ್ರೆಯ ಮರು ಓದು ಎಂಬ ಉಪಶೀರ್ಷಿಕೆಗಳು ಶೆಟ್ಟರ್ ಅವರ ಅಧ್ಯಯನದ ವ್ಯಾಪ್ತಿಯನ್ನು ತಿಳಿಸುತ್ತವೆ. ಜನಸಮುದಾಯವೊಂದರ ಸಂಸ್ಕೃತಿಯ ಬೆಳವಣಿಗೆಯ ಕಥನವನ್ನು ಭಾಷೆ ಮತ್ತು ಲಿಪಿಗಳನ್ನು ಕೇಂದ್ರವಾಗಿರಿಸಿಕೊಂಡು ನಿರೂಪಿಸುವ ಪ್ರಯತ್ನ ಕನ್ನಡಕ್ಕಂತೂ ಹೊಸತು. ಭಾಷಾಶಾಸ್ತ್ರ, ಲಿಪಿ ವಿನ್ಯಾಸ, ಚರಿತ್ರೆ, ಸಾಹಿತ್ಯದ ಶಿಸ್ತುಗಳನ್ನು ಆಧಾರವಾಗಿಟ್ಟುಕೊಂಡು ಬರವಣಿಗೆಯ ವಿಕಾಸದಲ್ಲಿ ಜನಸಮೂಹವೊಂದರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಯತ್ನ ಈ ಕೃತಿಯಲ್ಲಿದೆ.
ಶೆಟ್ಟರ್ ಅವರ ಹಿಂದಿನ ಪುಸ್ತಕ, ೨೦೦೭ರಲ್ಲಿ ಪ್ರಕಟವಾದ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ’ಯಲ್ಲಿ ಮಂಡಿತವಾದ ವಿಚಾರಗಳ ಮುಂದುವರಿಕೆಯಾಗಿ, ಶೆಟ್ಟರ್ ಅವರು ವಿವಿಧ ಎಡೆಗಳಲ್ಲಿ ಕಳೆದ ಮೂವತ್ತು ವರ್ಷಗಳ ಕಾಲ ಇಂಗ್ಲಿಷ್ ನಲ್ಲಿ ಮಂಡಿಸುತ್ತ ಬಂದಿರುವ, ಚೆದುರಿಹೋಗಿದ್ದ ವಿಚಾರಗಳ ಕ್ರೋಡೀಕರಣವಾಗಿ ಈ ಪುಸ್ತಕ ರೂಪುಗೊಂಡಿದೆ.
ಕನ್ನಡದ ಬೆಳವಣಿಗೆಯ ಬಗ್ಗೆ, ಈ ನೆಲದ ಸಾಮಾಜಿಕ ಬದುಕಿನ ಸ್ವರೂಪದ ಬಗ್ಗೆ ಸ್ವೀಕೃತವೆಂದು ಒಪ್ಪಿರುವ ಅನೇಕ ಸಂಗತಿಗಳನ್ನು ಮರುಪರಿಶೀಲಿಸಿಕೊಳ್ಳುವ ಅಗತ್ಯವನ್ನು ಈ ಪುಸ್ತಕ ಮನಗಾಣಿಸುತ್ತದೆ. ಸಾಮಾನ್ಯ ಶಕೆಯ ಮೊದಲ ಸಾವಿರ ವರ್ಷಗಳಲ್ಲಿ ೨,೦೨೦ ಕನ್ನಡ, ೩೦೦ ಸಂಸ್ಕೃತ ಮತ್ತು ೩೦೦ ಪ್ರಾಕೃತ ಶಾಸನಗಳನ್ನು ಶೆಟ್ಟರ್ ಅವರು ಮೂಲ ಆಕರಗಳೆಂದು ಕರೆದಿದ್ದಾರೆ. ಮೊದಲ ಸಹಸ್ರಮಾನದ ಶಾಸನಗಳ ಪ್ರಮಾಣವೇ ಅಚ್ಚರಿ ಹುಟ್ಟಿಸುತ್ತದೆ. ಭಾರತದ ಇನ್ನು ಯಾವ ದೇಶೀ ಭಾಷೆಯಲ್ಲೂ ಈ ಪ್ರಮಾಣದ ಶಾಸನಗಳು ಇಲ್ಲದಿರುವುದರಿಂದ ಆರಂಭ ಕಾಲದ ದೇಶೀಯ ಅಕ್ಷರ ಇತಿಹಾಸ ರಚನೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಸ್ಥಾನವಿದೆ ಎನ್ನುತ್ತಾರೆ ಶೆಟ್ಟರ್.
ಕನ್ನಡದ ಲಿಪಿ ಹಾಗೂ ಭಾಷೆಯ ಉಗಮ, ಬೆಳವಣಿಗೆ, ವೈವಿಧ್ಯ, ಭಾಷಾ ಒಡನಾಟ, ಸಾಹಿತ್ಯ ಪ್ರಭೇದ, ಸಮಾಜ ಹಾಗೂ ಸಂಸ್ಕೃತಿಯ ಸ್ವರೂಪವನ್ನು ಅರಿಯುವಲ್ಲಿ ಈ ಶಾಸನಗಳಿಗೆ ಮಹತ್ವವಿರುವಂತೆಯೇ ಶಾಸನಗಳನ್ನು ಕೊರೆದ ಲಿಪಿ, ಶಿಲ್ಪಿಗಳು ಹಾಗೂ ಅವರ ಪೋಷಕರ ಬಗ್ಗೆಯೂ ಈ ಶಾಸನಗಳು ಹೊಸ ಬೆಳಕನ್ನು ಬೀರುತ್ತವೆ. ಹಾಗೆ ಲಿಪಿ, ಭಾಷೆ, ಸಾಹಿತ್ಯ ಮತ್ತು ಸಾಮಾಜಿಕ ಚರಿತ್ರೆಗಳನ್ನು ಹೊಸದಾಗಿ ನಿರೂಪಿಸುವ ಅವಕಾಶವನ್ನೂ ಒದಗಿಸುತ್ತವೆ. ಶೆಟ್ಟರ್ ಅವರ ಪುಸ್ತಕ ಕನ್ನಡದ ಆದಿ ಕಾಲದ ಚರಿತ್ರೆಯ ಇಂಥ ಒಂದು ಹೊಸ ನಿರೂಪಣೆಯಾಗಿದೆ.
|
ಪ್ರೊ. ಷ. ಶೆಟ್ಟರ್ ಅವರು ಜನಿಸಿದ್ದು ೧೯೩೫ ನೇ ಇಸವಿಯಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ಪಡೆದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು ೨೭ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇದೆ.
ಶ್ರೀಯುತರು ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದಿರುತ್ತಾರೆ. ಕೇಂಬ್ರಿಜ್, ಹಾರ್ವರ್ಡ್, ಹೈಡಲ್ ಬರ್ಗ್, ಅಥೆನ್ಸ್, ಲೈಡನ್, ಮಾಸ್ಕೋ ವಿಶ್ವವಿದ್ಯಾನಿಲಯಗಳಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ರಾಜ್ಯ ಹಾಗು ರಾಷ್ಟ್ರ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗು ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವವನ್ನೂ ಇವರು ಪಡೆದಿದ್ದಾರೆ.
೧೯೬೦-೯೬: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬೋಧನೆ
೧೯೭೮-೯೫: ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ
೧೯೯೬-೯೯: ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ
೨೦೦೨-೧೦: ಬೆಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ. ಎಸ್. ರಾಧಾಕೃಷ್ಣನ್ ಪ್ರಾಧ್ಯಾಪಕತ್ವ ಹಾಗು ೨೦೧೦ ರಿಂದ ಇದೇ ಸಂಸ್ಥೆಯಲ್ಲಿ ಎಮೆರಿಟಸ್ ಪ್ರಾಧ್ಯಾಪಕ ಸ್ಥಾನ[೧]
೨೦೦೫ ರಿಂದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ದಕ್ಷಿಣ ಭಾರತ ಶಾಖೆಯ ಗೌರವ ನಿರ್ದೇಶಕತ್ವ[೨].
|
|
| |
|
|
|
|