Items
0
Total
  0.00 
Welcome Guest.

 
Rs. 195    
10%
Rs. 176/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 272
ಪುಸ್ತಕದ ಗಾತ್ರ : 1/8 Demy Size
ಕೋಡ್ : 172235

ಇದು 140 ಅಕ್ಷರಗಳ ಲೋಕ. ಮಾತು, ಪ್ರೀತಿ, ಅಚ್ಚರಿ, ಆತಂಕ, ನೋವು, ನಲಿವು ಎಲ್ಲವೂ ಖಡಕ್ಕಾಗಿ 140 ಅಕ್ಷರಗಲಲ್ಲಿ ಮುಗಿದುಹೋಗಬೇಕು. 140 ಅಕ್ಷರಗಲ ಆಚೆಯೂ ಒಂದು ಲೋಕವಿದೆಯಾ? ಒಂದು ಅನುಭವ ಇದೆಯಾ ಎಂದು ಪ್ರಶ್ನಿಸಿಕೊಳ್ಳುತ್ತಿರುವ ಕಾಲ. ಇಂಗ್ಲಿಷ್ ಲೋಕದಲ್ಲಿ ಈಗಾಗಲೇ ಶೇಕ್ಸ್‍ಪಿಯರ್‌ನ ನಾಟಕಗಳನ್ನೂ, ಜಾಗತಿಕ ಕ್ಲಾಸಿಕ್‌ಗಳನ್ನೂ, ಮಹಾನ್ ವಿಮರ್ಶೆಗಳನ್ನೂ ಇದೇ 140 ಅಕ್ಷರಗಳಲ್ಲಿ ಕೂಡಿಸುವ ಕೆಲಸ ಆರಂಭವಾಗಿದೆ. ನಾವೀಗ ಸೋಶಿಯಲ್ ನೆಟ್‌ವರ್ಕ್ ಕಾಲದಲ್ಲಿದ್ದೇವೆ. ಫೇಸ್‌ಬುಕ್, ಟ್ವಿಟರ್, ಆರ್ಕುಟ್... ಹೀಗೆ ನಮ್ಮ ಬದುಕು, ಬರಹ ಎರಡೂ ಸಹಾ ಇಂತಿಷ್ಟು ಅಕ್ಷರ, ಒಂದಿಷ್ಟು ಸಾಲುಗಳಲ್ಲಿ ಮುಗಿದುಹೋಗುತ್ತಿದೆ. 140 ಅಕ್ಷರ, ಒಂದಾರು ಪ್ಯಾರಾ ನಂತರವೂ ಸಾಹಿತ್ಯವಿದೆ ಎನ್ನುವುದು ಇಂದು ಅಚ್ಚರಿ. ಒಂದು ಹೊಸ ತಲೆಮಾರು ತಲೆ ಎತ್ತಿದೆ. ಅವರಿಗೆ ಪುಸ್ತಕ ಎನ್ನುವುದು ಆ ಹಾಳೆ, ಆ ಅಕ್ಷರ, ಆ ಘಮ ಅಲ್ಲ. ಅದು ಕಿಂಡಲ್ ಇಲ್ಲವೇ ಅಂಡ್ರಾಯ್ಡ್‌ನ ಒಂದು ಅಪ್ಲೇಕೇಷನ್ ಮಾತ್ರ.

ಇಂತಹ ಕಾಲದಲ್ಲಿ ಜೋಗಿ ಪಕ್ಕಾ ಪರಸಂಗದ ಗೆಂಡೆತಿಮ್ಮನಂತೆ ಹಾಜರಾಗಿದ್ದಾರೆ. ಅವರು ಹೊತ್ತು ತಂದಿರುವ ಗೂಡೆಯೊಳಗೆ ಎಷ್ಟೊಂದು ಕೌತುಕವಿದೆ. ಪಕ್ಕಾ ಶರೀಫಜ್ಜನಂತೆ ‘ಬರಕೋ ಪದಾ ಬರಕೋ..’ ಎನ್ನುತ್ತಿದ್ದಾರೆ. ಬರೆಯುವುದು ಹೇಗೆ ಎನ್ನುವುದನ್ನೂ ರಸವತ್ತಾಗಿ ಉಣಬಡಿಸಲು ಜೋಗಿಗೆ ಮಾತ್ರ ಸಾಧ್ಯ. ಪರಸಂಗ ಕಟ್ಟಲು ಈ ಪುಸ್ತಕದ ಮೂಲಕ ಪ್ರೇರೇಪಿಸುತ್ತಿರುವ ಜೋಗಿಗೆ ಒಂದು ಸಲಾಂ...

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.

uploads/authorimages/989.jpg
ಲೇಖಕರ ಇತರ ಕೃತಿಗಳು
10%
ಎಲ್ಲಾನು ಮಾಡುವುದು ಹೊಟ್ಟೆಗಾಗಿ
ಜೋಗಿ, Jogi
Rs. 95    Rs. 86
10%
ಅಂಕಣ ಗಾಳಿಯಾಟ
ಜೋಗಿ, Jogi
Rs. 120    Rs. 108
10%
ಮಾತು ಮೌನ ಧ್ಯಾನ ....
ಜೋಗಿ, Jogi
Rs. 75    Rs. 68
10%
ಲೈಫ್ ಈಸ್ ಬ್ಯೂಟಿಫುಲ್
ಜೋಗಿ, Jogi
Rs. 120    Rs. 108
Best Sellers
ಯಶಸ್ಸಿನ ನಿಯಮದ ಸಾರ
ನೆಪೋಲಿಯನ್ ಹಿಲ್, Napoleon Hill
Rs. 153/-   Rs. 170
ಚಪಾತಿಗೆ Curries (ಅಡಿಗೆ ಪುಸ್ತಕ)
ವಾಣಿ ರವಿಶಂಕರ್, Vani Ravishankar
Rs. 90/-   Rs. 100
ಕೃಷಿಯಲ್ಲಿ ಸಸ್ಯ ಸಂರಕ್ಷಣಾ ರಾಸಾಯನಿಕಗಳ ಬಳಕೆ
ಕವಿತ ಎಂ ವೈ, Kavita M V
Rs. 225/-   Rs. 250
ಅಘೋರಿಗಳ ಲೋಕದಲ್ಲಿ : ನಿಷಿದ್ಧ ಪ್ರಪಂಚದ ಅನುಭವ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 315/-   Rs. 350

Latest Books
ಬಸವ ವಚನ ಭಾವಯಾನ : ಬಸವಣ್ಣನವರ ಷಟ್ ಸ್ಠಲ ವಚನಗಳಿಗೆ ಭಾವಾರ್ಥ
ಮಲ್ಲೇಶಯ್ಯ ಕೆ ಬಿ, Malleshaiah K B
Rs. 189/-   Rs. 210
ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ
ನಾರ್ಲಾ ವಿ ಆರ್, Narla V R
Rs. 72/-   Rs. 80
ಸಾಧನಗಳಿಂದ ಯೋಗ ಸಾಧನೆ
ವಿರೂಪಾಕ್ಷ ಬೆಳವಾಡಿ, Virupaksha Belavadi
Rs. 306/-   Rs. 340
ಶ್ರೀತುಲಸೀ ಅಮೃತಪಾನ : ಒಂಬತ್ತು ಕಥೆಗಳು
ಸ್ವಾಮಿ ಶಿವಾತ್ಮಾನಂದ, Swami Sivatmananda
Rs. 135/-   Rs. 150


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.