|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
112 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
189392 |
ಅತ್ತೆಮಾವ ಇರುವ ಮನೆಗೆ
ಯಾರು ಕೊಡುತ್ತಾರೆ ಹೆಣ್ಣು?
ಆದ್ದರಿಂದಲೇ ನಮ್ಮ ಗಣಪನಿಗೆ
ಮದುವೆ ಆಗಿಲ್ಲ ಇನ್ನೂ!
ಈ ಹನಿಗವನದಿಂದ ಆರಂಭವಾಗುವ ‘ಹನಿಮೋಹಿನಿ’ ಸಂಕಲನದ ಒಂದೊಂದು ಹನಿಯೂ ಸಣ್ಣ ಸಪ್ಪಳದೊಂದಿಗೆ ಆಹ್ಲಾದವನ್ನು, ಆಘಾತವನ್ನು, ಕಚಗುಳಿಯನ್ನು, ನಗುವನ್ನು, ನೋವನ್ನು, ಬೆರಗನ್ನು ಒಟ್ಟೊಟ್ಟಿಗೆ ಕೊಡುವ ಕಿರುಮಿಂಚಿನಂತೆ ಭಾಸವಾಗುತ್ತದೆ, ಕನ್ನಡ ಹನಿಗವನಗಳ ಪರಂಪರೆಯಲ್ಲಿ ಡುಂಡಿರಾಜರದ್ದು, ಔಟಾಗದ ಆಟದ ಅದ್ಭುತ ದಾಖಲೆ. ಸ್ಪಿನ್ ದಾಳಿಯಲ್ಲಿ ಬಲಿಷ್ಠ ವಿಕೆಟ್ಗಳನ್ನು ಸರಸರನೆ ಉದುರಿಸಿದ ಪವಾಡ. ಅವರ ಹನಿಗವನಗಳ ಬಹಳ ಮುಖ್ಯ ಸಾಧನೆಯೆಂದರೆ ಕನ್ನಡ ಭಾಷೆಯ ಪದಗಳ ಅರ್ಥಸಾಧ್ಯತೆಯನ್ನು ವಿಸ್ತರಿಸಿರುವುದು. ಅವರ ಹನಿಗವನಗಳು ಕೇವಲ ಹಾಸ್ಯದ ತುಣುಕುಗಳು ಅಲ್ಲ; ಅದರ ಹಿಂದೆ ನೈತಿಕತೆ, ಮೌಲ್ಯ ಪ್ರಜ್ಞೆ, ಸಾಮಾಜಿಕ ಕಾಳಜಿ ಅಂತರ್ಗತವಾಗಿದೆ.
ಡುಂಡಿರಾಜ್ ಅವರ ಕವನಗಳಲ್ಲಿ ಕಾಣುವ ಇನ್ನೊಂದು ಮಹತ್ವದ ಅಂಶ ಎಂದರೆ, ನಿಸರ್ಗವನ್ನು ಅಪೂರ್ವವಾಗಿ ಕಾಣುವ ಭಿನ್ನ ನೋಟಗಳು. ನಿಸರ್ಗದ ಆಗುಹೋಗುಗಳನ್ನು ಕಂಡೂ ಕಾಣದಂತೆ ಇರುವ ಆಧುನಿಕ ಜಗತ್ತಿಗೆ ಹೊಸ ಕಾಣ್ಕೆಯನ್ನು ಕೊಡುವ ದರ್ಶನ ಇಲ್ಲಿಯ ಅನೇಕ ಹನಿಗವನಗಳಲ್ಲಿವೆ. ಸದಾ ಲವಲವಿಕೆಯ ಡುಂಡಿರಾಜರ ಹನಿಗವನಗಳು ಎಲ್ಲಾ ಕಾಲಕ್ಕೂ ಸಲ್ಲುವ ನಮ್ಮೆಲ್ಲರ ಮನದ ಬಯಕೆಯ ಬೆಳಕಿಂಡಿಗಳು.
|
| |
|
|
|
|
|
|
|
|
|