|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
132 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184675740 |
ಕೋಡ್ |
: |
002451 |
19ನೆಯ ಶತಮಾನದ ತತ್ತ್ವಶಾಸ್ತ್ರವು ಯೂರೋಪಿನ ಇತಿಹಾಸದಲ್ಲಿ ಒಂದು ಸ್ಥಿತ್ಯಂತರದ ಕಾಲ. ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಜರ್ಮನಿಗಳಲ್ಲಿ ಹತ್ತಾರು ನೂತನ ಪ್ರಭೇದಗಲು ಅಸ್ತಿತ್ವಕ್ಕೆ ಬಂದು ತತ್ತ್ವಶಾಸ್ತ್ರದ ಪರಿಧಿಯನ್ನು ಹಿಗ್ಗಿಸಿದವು. ಬರ್ಗ್ಸನ್, ಬ್ರಾಡ್ಲಿ, ಕ್ರೋಚೆ, ಡ್ಯೂಯಿ, ಜೆಂಟೀಲೆ, ವಿಲಿಯಂ ಜೇಮ್ಸ್, ಜಾರ್ಜ್ ಮೂರ್, ಬರ್ಟ್ರಂಡ್ ರಸೆಲ್, ಮುಂತಾದ ಘಟಾನುಘಟಿಗಳು ತಮ್ಮ ವಿಭಿನ್ನ ದಾರ್ಶನಿಕ ನೋಟಗಳನ್ನು ದಾಖಲಿಸಿದ ಯುಗ ಇದು. ಅವರೆಲ್ಲರ ಅನನ್ಯ ಮತ್ತು ಪ್ರತ್ಯೇಕ ಚಿಂತನೆಗಳನ್ನು ತಿಳಿಯದೆ 20ನೆಯ ಶತಮಾನದ ಯೂರೋಪಿನ ತತ್ತ್ವಶಾಸ್ತ್ರದ ಬೆಳವಣಿಗೆಗಳನ್ನು ಗುರುತಿಸುವುದು ಕಷ್ಟಸಾಧ್ಯ. ಜಟಿಲವಾದ ಸಿದ್ಧಾಂತಗಳನ್ನು ಹೃದ್ಯವಾಗುವಂತೆ ನಿರೂಪಿಸುವ ಕೃತಿ ಇದು. ಮಾರ್ಕ್ಸ್ನ ಅತಿಮುಖ್ಯವಾದ ‘ಅನ್ಯಾಕ್ರಾಂತತೆ’ಯ ಪರಿಕಲ್ಪನೆಯನ್ನು ವಿವರಿಸಲು ಒಂದು ಅಧ್ಯಾಯ ಮೀಸಲಾಗಿದೆ ಕೂಡ.
ಲೇಖಕ ಡಾ. ಎಸ್.ಪಿ. ಬ್ಯಾನರ್ಜಿ ಪಶ್ಚಿಮ ಬಂಗಾಳದ ಕೆಲವು ವಿಶ್ವವಿದ್ಯಾನಿಲಯಗಳ ಉಪಕುಲಪತಿ ಮತ್ತು ಪ್ರಾಧ್ಯಾಪಕರಾಗಿದ್ದ ಪ್ರಸಿದ್ಧ ಬರಹಗಾರರು. ಅವರ ಅನೇಕ ಲೇಖನಗಳು ಮತ್ತು ಕೃತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೌಲಿಕವೆಂದು ಗುತುರಿಸಲ್ಪಟ್ಟಿವೆ.
ಅನುವಾದಕರಾದ ಪ್ರೊ. ಶೈಲಜಾ ಮತ್ತು ಪ್ರೊ. ಟಿ.ಎಸ್. ವೇಣುಗೋಪಾಲ್ ಇಬ್ಬರೂ ಕಾಲೇಜು ಪ್ರಾಧ್ಯಾಪಕರು: ಒಬ್ಬರು ಇಂಗ್ಲಿಷ್ ಪ್ರಾಧ್ಯಾಪಕರು, ಇನ್ನೊಬ್ಬರು ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರು. ಇಬ್ಬರೂ ಲೇಖಕರಾಗಿ, ಅನುವಾದಕರಾಗಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಮಹತ್ಸಾಧನೆ ಮಾಡಿದವರು. ಡಿ.ಡಿ. ಕೋಸಾಂಬಿಯವರ ಇತಿಹಾಸದ ಕೃತಿಗಳನ್ನು ಕನ್ನಡಕ್ಕೆ ನೀಡಿರುವುದು ಇವರ ಶ್ರಮದ ಮುಕ್ತಾಫಲಗಳ ಒಂದು ಪ್ರಧಾನ ಭಾಗ. ಸಂಗೀತ ಮತ್ತು ಸಂಗೀತಗಾರರನ್ನು ಕುರಿತಾದ ಗ್ರಂಥಗಳನ್ನು ಕೊಟ್ಟಿರುವ ಶ್ರೇಯಸ್ಸು ಸಹ ಇವರದು.
|
| | |
|
|
|
|
|
|
|