|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ನಾಡಿನಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನ ನೀಡಿದ್ದೇವೆ ಎನ್ನುತ್ತಲೇ ಸಮಾಜ ಹೆಜ್ಜೆಹೆಜ್ಜೆಗೂ ಆಕೆಯ ಏಳಿಗೆ, ಸುಸ್ಥಿರ ಬದುಕಿನ ಅನಂಗೆ ಕೊಳ್ಳಿ ಇಡುತ್ತಲೇ ಇದೆ. ಹೆಣ್ಣಿನ ಇಂತಹ ಒಳಬೇಗುದಿಯ ಆರ್ತನಾದಕ್ಕೆ ನಮ್ಮ "ಆಂದೋಲನ" ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ "ಹೆಳೊಳನೋಟ" ಅಂಕಣ ವೇದಿಕೆಯಾಗಿತ್ತು. ಅಂತಾರಾಷ್ಟ್ರೀಯ ಮಹಿಳಾ ದಿನ "ಮಾರ್ಚ್ ೮ ೨೦೧೮"ದಂದು ಆರಂಭವಾದ ಅಂಕಣ, ಒಂದು ವರ್ಷವಿಡಿ ಪ್ರತಿ ಮಂಗಳವಾರ ನಿರಂತರವಾಗಿ ಪ್ರಕಟವಾದ ಸಂತೃಪ್ತಿ ನಮ್ಮದು. ಅಂಕಣದ ಸಂಪಾದನೆಯ ಹೊಣೆ ಹೊತ್ತಿದ್ದ ಚಿಂಶತಿ ರೂಪ ಹಾಸನ ಅವರ ಪರಿಶ್ರಮವನ್ನು ಪತ್ರಿಕೆ ಈ ಮೂಲಕ ಅಭಿನಂದಿಸುತ್ತದೆ.
ಮಹಿಳೆಯರ ಬದುಕಿನ ಸಂಘರ್ಷ, ಒಲೆ ಉರಿಯ ಬೇಗೆಯಿಂದ ಹಿಡಿದು ಹೆಣ್ಣಿನ ಭ್ರೂಣಹತ್ಯೆವರೆಗೂ... ಸಮಾಜದ ವ್ಯಂಗ್ಯ, ಉದಾಸೀನಗಳನ್ನು ಸಹಿಸಿಕೊಳ್ಳುತ್ತಲೇ ಆನಿವಾರ್ಯ ಸಂದರ್ಭಗಳಲ್ಲಿ ಮನೆಯ ಒಳಗೂ ಹೊರಗೂ ದುಡಿಯುತ್ತ ಸಂಸಾರದ ನೊಗವನ್ನು ಗಂಡಿಗಿಂತ ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸುತ್ತಿರುವುದನ್ನು, ಮಾನಿನಿಯರ ಎದೆಯಾಳದ ನೋವನ್ನು, ಗರ್ಭದೊಳಗಿನ ಚೀರಾಟವನ್ನು ಇಂಚಿಂಚು ವಿಶ್ಲೇಷಿಸಿ, ಅಕ್ಷರ ರೂಪ ನೀಡಿದ ಬರಹಗಳು ನೋವಿನ ದನಿಯನ್ನು ಸಮಗ್ರವಾಗಿ ಹಿಡಿದಿಟ್ಟಿದ್ದು ಅರ್ಥಪೂರ್ಣವೆನಿಸಿದೆ. ಸುಮಾರು ೩೧ ಲೇಖಕಿಯರ, ೫೦ ಲೇಖನಗಳು ಈ ಸರಣಿಯಲ್ಲಿ ಪ್ರಕಟವಾಗಿದೆ. ಈ ಸಹಯಾನ ತುಂಡಾಗದಂತೆ ಪ್ರತಿ ವಾರವೂ ತಪ್ಪದೇ ಬರಹವನ್ನು ಒದಗಿಸುತ್ತಾ ಬಂದ ಎಲ್ಲ ಲೇಖಕಿಯರ ಸಹಕಾರಕ್ಕೆ ಹೃದಯಪೂರ್ವಕ ವಂದನೆಗಳು. ಹಾಗೇ ಲೇಖನಗಳಿಗೆ ಸೂಕ್ತ ರೇಖಾಚಿತ್ರಗಳನ್ನು ನೀಡಿದ ಸಂಘಮಿತ್ರೆಯವರಿಗೂ ಧನ್ಯವಾದಗಳು.
ಜೊತೆಗೆ ಓದುಗರಿಂದ ಒಳ್ಳೆಯ ಪ್ರತಿಕ್ರಿಯೆಯ ಬೆಂಬಲವೂ ಸಿಕ್ಕಿದೆ. ಇಲ್ಲಿ ಧರ್ಮ, ಜಾತಿ ಭೇದದ ಹಂಗಿಲ್ಲದೆ ಎಲ್ಲ ಬಗೆಯ ಹೆಣ್ಣುಮಕ್ಕಳ ಮನದೊಳಗೆ ಸದಾ ರಿಂಗಣಿಸುವ ಸ್ವಾತಂತ್ರ್ಯ ಸಬಲೀಕರಣದ ತುಮುಲಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ರೀತಿ ಓದುಗರಿಗೆ ಇಷ್ಟವಾಗಿದೆ. ಕೇವಲ ಇಷ್ಟವಲ್ಲ ಅರ್ಥವೂ ಆಗಿದೆ ಎನ್ನಬಹುದು. ಇಂತಹ ವಿಶೇಷವಾದ ಆಂಕಣ ಪ್ರಯೋಗದ ಪ್ರಯತ್ನಕ್ಕೆ ಸಹಕಾರ ನೀಡಿದ ಎಲ್ಲರನ್ನೂ "ಆಂದೋಲನ" ಅಭಿನಂದಿಸುತ್ತದೆ. ಹಾಗೇ ಇದನ್ನು ಪುಸ್ತಕ ರೂಪದಲ್ಲಿ ತಂದು ದಾಖಲಾಗಿಸುತ್ತಿರುವ ಅಭಿರುಚಿ ಪ್ರಕಾಶನದ ಗಣೇಶ್ ಅವರಿಗೂ ನಮ್ಮ ಹಾರ್ದಿಕ ವಂದನೆಗಳು ಸಲ್ಲುತ್ತವೆ.
|
| |
|
|
|
|
|
|
|
|
|