|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಂದು ಉತ್ಪನ್ನವನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿದಾಗ, ಸಹಜವಾಗಿ ಅದರ ಒಟ್ಟು ಉತ್ಪಾದನಾ ವೆಚ್ಚ ತಗ್ಗುತ್ತದೆ. ಹೆನ್ರಿ ಫೋರ್ಡ್ ಈ ತತ್ವವನ್ನು ಸಮರ್ಥವಾಗಿ ಜಾರಿಗೆ ತಂದನು. ಅತ್ಯುತ್ತಮ ತಂತ್ರಜ್ಞರನ್ನು ತನ್ನ ಸಂಸ್ಥೆಗೆ ಆಕರ್ಷಿಸಲು ದುಪ್ಪಟ್ಟು ಮಜೂರಿಯನ್ನು ನೀಡಿದನು. ಅಂದು ಕಾರ್ಮಿಕನೊಬ್ಬ ದೈನಂದಿನ ವೇತನ 2.34 ಡಾಲರ್. ಫೋರ್ಡ್ ಈ ವೇತನವನ್ನು 5 ಡಾಲರಿಗೆ ಏರಿಸಿದನು! ಕಾರು ಮಾರಾಟದಲ್ಲಿ ಬಂದ ಲಾಭದಲ್ಲಿ ನಿಗದಿತ ಪ್ರಮಾಣವನ್ನು ತನ್ನ ಕಾರ್ಮಿಕರಿಗೆ ಹಂಚಿದನು! ತನ್ನ ಕೆಲಸಗಾರರು ಉತ್ತಮ ಬದುಕನ್ನು ನಡೆಸಲು ನೆರವಾಗಲು ‘ಸೋಶಿಯಲ್ ಡಿಪಾರ್ಟ್ಮೆಂಟ್‘ ಆರಂಭಿಸಿ ಕಾರ್ಮಿಕರು ಧೂಮಪಾನ, ಮದ್ಯಪಾನ, ಜೂಜು ಮುಂತಾದ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರವಹಿಸಿದನು. ತನ್ನ ದುಡಿತದ ಹಣವನ್ನು ಪೋರ್ಡ್ ಪ್ರತಿಷ್ಠಾನದಲ್ಲಿಟ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿದನು. ಇಷ್ಟೆಲ್ಲ ಒಳ್ಳೆಯ ಗುಣಗಳು ಹಾಗೂ ದೂರದರ್ಶಿತ್ವವಿದ್ದರೂ ಈತ ಕಾರ್ಮಿಕ ಸಂಘಗಳನ್ನು ಹಾಗೂ ಯಹೂದಿಯನ್ನು ದ್ವೇಷಿಸುತ್ತಿದ್ದನು. ಹಿಟ್ಲರಿನಿಂದ ಸನ್ಮಾನಿತನಾದನು!
|
| |
|
|
|
|
|
|
|
|