|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಲೇಖಕಿ ವಿನುತಾ ವಿಶ್ವನಾಥ ಅವರ ಆತ್ಮಕಥನ-ಹುಣ್ಸ್ ಮಕ್ಕಿ ಹುಳ. ತಮ್ಮ ಏಳನೇ ವಯಸ್ಸಿನಲ್ಲಿ ಬೆಂಕಿ ಅವಘಟಡಕ್ಕೆ ಸಿಲುಕಿ ಮುಖದ ಚೆಲುವನ್ನು ಕಳೆದುಕೊಂಡವಳು. ಕಣ್ಣಿನ ಮಾತು ಕೇಳಬೇಡಿ, ಮನಸ್ಸಿನ ಮಾತಿಗೆ ಕಿವಿಗೊಡಿ ಎಂಬ ಶೀರ್ಷಿಕೆಯೊಂದಿಗೆ ಫೇಸ್ ಬುಕ್ ನಲ್ಲಿ ಬರೆಯುತ್ತಿದ್ದಅಭಿಪ್ರಾಯಗಳು ಬರಹ ವಲಯವನ್ನು ಆಕರ್ಷಿಸಿದ್ದವು. ಮುಂದೆ ಈ ಹವ್ಯಾಸವು ತಮ್ಮ ಆತ್ಮಕಥನ ಬರೆಯಲು ಪ್ರೇರಣೆ ನೀಡಿತು.
ಲೇಖಕಿ ಡಿ. ಸುಮನ್ ಕಿತ್ತೂರು ಅವರು ಕೃತಿಗೆ ಬೆನ್ನುಡಿ ಬರೆದು ಸಣ್ಣ ಸಣ್ಣ ವಿಚಾರಗಳಲ್ಲಿ ಎಷ್ಟೋ ದೊಡ್ಡ ದೊಡ್ಡ ತಾತ್ವಿಕ ಪಯಣ ತೆರೆದುಕೊಳ್ಳುತ್ತದೆ ಎಂಬುದನ್ನು ಈ ಆತ್ಮಕಥೆ ನಿರೂಪಿಸುತ್ತದೆ. ತಮ್ಮದಲ್ಲದ ತಪ್ಪಿಗೆ, ಸಮಾಜದೊಂದಿಗೆ, ಅದರ ತಿರಸ್ಕಾರದೊಂದಿಗೆ ಗುದ್ದಾಡಲೂ ಸಹ ಆಗದ, ಆತ್ಮಸ್ಥೈರ್ಯ ಕಳೆದುಕೊಂಡು ಮೂಲೆಗುಂಪಾಗುವ ಎಷ್ಟೊ ಜೀವಗಳಿಗೆ ಈ ಆತ್ಮಕಥೆ ಸ್ಫೂರ್ತಿಯಾಗಲಿದೆ ಎಂದು ಪ್ರಶಂಸಿಸಿದ್ದಾರೆ.
|
| |
|
|
|
|
|
|
|
|