|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಐ ಆಮ್ ಅನದರ್ ಯೂ ಒಂದು ಅಪ್ರತಿಮ ಒಳನೋಟದ ಕಥಾನಕ! ಹಲವು ವರ್ಷಗಳ ಹಿಂದೆ ಪಲಾಯನವಾದಕ್ಕೆ ಶರಣಾಗಿದ್ದ ಲೇಖಕಿ ಪ್ರಿಯಾರೊಂದಿಗೆ ನೀವಿದರ ಪ್ರಯಾಣವನ್ನು ಆರಂಭಿಸುತ್ತೀರಿ. ಅವರೊಂದಿಗೆ ನೆದರ್ಲೆಂಡಿಗೆ ಪ್ರಯಾಣ ಬೆಳೆಸುವ ನೀವು ಅಲ್ಲಿ ಅವರು ಹಾದುಬರುವ ಪ್ರತಿಯೊಂದು ರಿವಾಜಿನ ಅನುಭವವನ್ನೂ ಪಡೆಯುತ್ತೀರಿ. ಅವರು ಹೇಗೆ ತಮ್ಮನ್ನು ತಾವು “ಸರಿಪಡಿಸಿ”ಕೊಂಡರು ಅನ್ನುವುದು ನಿಮಗೊಂದು ಪಾಠವಾಗುತ್ತದೆ, ನಿದರ್ಶನವಾಗುತ್ತದೆ. ಪ್ರತಿಯೊಂದು ಅಧ್ಯಾಯವೂ ಹೊಸ ಅಚ್ಚರಿಯೊಂದಿಗೆ ತರೆದುಕೊಂಡು ಹೊಸ ಅರಿವಿಗೆ ದಾರಿ ಮಾಡಿಕೊಡುತ್ತದೆ. ಈ ಪುಸ್ತಕದ ಪ್ರತಿ ಪುಟವೂ ಸಂಘರ್ಷದ ಪ್ರಾಮಾಣಿಕ ನಿರೂಪಣೆಯಿಂದ ಕೂಡಿದೆ. ಸೋಲುಗಳನ್ನು ಗೆದ್ದು ಬರುವ ಸಂಭ್ರಮವನ್ನೂ ಇಲ್ಲಿ ಕಾಣುತ್ತೇವೆ. ಇದರೊಳಗಿನ ಅನುಭವಗಳು ಹೊಸ ಕಲಿಕೆಯೊಂದಿಗೆ ಹರಳುಗಟ್ಟುತ್ತಾ ಔದ್ಯೋಗಿಕವಾಗಿ, ವೈಯಕ್ತಿಕವಾಗಿ ನಮ್ಮನ್ನು ಗೆಲುವಿನತ್ತ ಕರೆದೊಯ್ಯುತ್ತವೆ.
ಈ ಪುಸ್ತಕವು ಹಲವು ಪಾಠಗಳು, ಹಲವು ಸತ್ಯಗಳು ಹಾಗೂ ಹಲವು ಒಳನೋಟಗಳಿಂದ ಸಮೃದ್ಧವಾಗಿದೆ. ನಿಮ್ಮೊಳಗನ್ನು ಇದು ಜಾಗೃತಗೊಳಿಸುವಂತಿದೆ. ನಿಮಗೆ ಸರಿಯೆಂದು ಗೊತ್ತಿದ್ದೂ ನೀವು ಅನುಸರಿಸುವ ಧೈರ್ಯವಿಲ್ಲದೆ ಬಿಟ್ಟಿದ್ದ ದಾರಿಯಲ್ಲಿ ನಡೆಯುವಂತೆ ಈ ಪುಸ್ತಕವು ಪ್ರೇರೇಪಣೆ ನೀಡುತ್ತದೆ.
|
| |
|
|
|
|
|
|
|
|