|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇಂಡಿಯಾ ಮತ್ತು ಇರಾನ್ - ಈ ಎರಡು ಹೆಸರುಗಳ ಸಂಯುಕ್ತ ಪದವೇ "ಇಂಡಿರಾನ್". ಈ ಶೀರ್ಷಿಕೆಗೆ ತಕ್ಕಂತೆ ಕಾದಂಬರಿ ಇಂಡಿಯಾ ಮತ್ತು ಇರಾನ್ ದೇಶಗಳ ಇಬ್ಬರು ಪ್ರಜೆಗಳು - ಇರಾನ್ನ ಹೆಣ್ಣು, ಇಂಡಿಯಾದ ಗಂಡು - ಇವರ ಮುಖಾಮುಖಿಯನ್ನು ನಿರೂಪಿಸುತ್ತದೆ. ಇದು ಪರಸ್ಪರ ಪತ್ರವ್ಯವಹಾರದ ಮೂಲಕ ಕುದುರುವ ಮನಸ್ಸುಗಳ ಮುಖಾಮುಖಿಯೇ ಹೊರತು ಸಶರೀರ ಮುಖಾಮುಖಿಯಲ್ಲ. ಹಲವು ವರ್ಷಗಳ ಹಿಂದೆ, ಕಾದಂಬರಿಯ ನಿರೂಪಕ ಮತ್ತು ಇರಾನ್ನ ಆ ಹೆಣ್ಣು ಮಗಳು ರೋಫೆ, ಇಬ್ಬರೂ ಹದಿಹರೆಯದವರಾಗಿದ್ದಾಗ ಪರಸ್ಪರ ಸಂಧಿಸಿ, ಪರಿಚಯ ಮಾಡಿಕೊಂಡ ನೆನಪು ಮತ್ತು ಅದರ ಮುಂದುವರಿಕೆಯಾಗಿ ಈ ದೀರ್ಘ ಕಾಲಾವಧಿಯ ಉದ್ದಕ್ಕೂ ಇ-ಅಂಚೆಯ ಪತ್ರ ವಿನಿಮಯದಿಂದಾಗಿ ಉಳಿದುಕೊಂಡ ಸಂಬಂಧ ಇದು ಸ್ಥೂಲವಾಗಿ ಕಾದಂಬರಿಯ ವಸ್ತು.
(ಜಿ. ರಾಜಶೇಖರ್ ಅವರ ಮುನ್ನುಡಿಯಿಂದ)
|
ಎಚ್. ಎಸ್. ಮಂಜುನಾಥ ಹವ್ಯಾಸಿ ಲೇಖಕರು ಹಾಗೂ ಫ್ರೀಲ್ಯಾನ್ಸ್ ಪತ್ರಕರ್ತರು. ಇವರ :ಮಧ್ಯಪ್ರದೇಶ : ಐದು ವರ್ಷ", "ಹತ್ತು ಸುತ್ತು", "ಸಂತಾಲರ ಜಾನಪದ ಕಥೆಗಳು", "ಮಾಯಾ ಮಂಜೂಷ", "ಚಾರ್ಲಿ ಚಾಪ್ಲಿನ್", "ಚಿತ್ರೋತ್ಸವಗಳು : ಹಿನ್ನೆಲೆ ಮುನ್ನೆಲೆ", "ಭವಿಷ್ಯದ ಕಥೆಗಳು" (ಅನುವಾದ), "ಅಪ್ಪ-ಅಮ್ಮ : ಪತ್ರ-ಚಿತ್ರ" (ಸಂಪಾದಿತ) ಮುಂತಾದ ಕೃತಿಗಳು ಪ್ರಕಟಗೊಂಡಿವೆ.
|
|
| |
|
|
|
|
|
|
|
|
|