|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಒಂದೇ ಆವರಣದ ವಿಭಿನ್ನ ಸಂಸ್ಕೃತಿಗಳು ನಿರ್ಮಿಸುವ ಒತ್ತಡಗಳು, ರೂಪಿಸುವ ವ್ಯಕ್ತಿತ್ವಗಳು,ರೂಢಿಸುವ ಮೇಲು ಕೀಳರಿಮೆಗಳು ವ್ಯಕ್ತಿ ಬದುಕನ್ನು ಅಸ್ತವ್ಯಸ್ತಗೊಳಿಸುವ ತರಾವರಿ ನಮೂನೆಗಳನ್ನು ಈಶ್ವರ ಅಲ್ಲಾ ಮನವರಿಕೆ ಮಾಡಿಕೊಡುತ್ತದೆ. ನಮ್ಮ ನೆಲದ ಧರ್ಮ ಮತ್ತು ರಾಷ್ಟ್ರೀಯತೆಯ ಸಮಾಜವ್ಯಾಪೀ ಬಿಕ್ಕಟ್ಟಿನ ಒಳನೇಯ್ಗೆಯ ಚೂಪುತುದಿಗಳನ್ನು ಲೇಖಕರು ನಿಸ್ಸಂಕೋಚವಾಗಿ ಗುರುತಿಸಿದ್ದಾರೆ. ಮತೀಯ ನಿಷ್ಠೆ ಹಾಗೂ ಮಾನವೀಯತೆಗಳ ನಡುವಿನ ಅಗಾಧ ಕೊರಕಲು ಸೂಕ್ಷ್ಮ ಸಂವೇದನೆಯ ಶೌಕತ್, ಗೋಪಿಯರಲ್ಲಿ ಮೂಡಿಸುವ ಭಯ, ಆಕ್ರೋಶ, ಅಸಹಾಯಕತೆ ಯುವಪೀಳಿಗೆಯ ಪಾಡನ್ನು ಸಂಕೇತಿಸುತ್ತದೆ. ಸಾಮಾಜಿಕತೆಯ ಜೊತೆಗೆ ಸ್ವಪರಿಸರದ ಪ್ರಭಾವಗಳ ಹಲವು ಮಗ್ಗಲುಗಳನ್ನು ನಿಷ್ಠುರವಾಗಿ ವಿವೇಚಿಸುತ್ತಲೇ ಸ್ವಾತ್ಮಪರಿವೀಕ್ಷಣೆ ಮಾಡಿಕೊಳ್ಳುವ ಈ ಯುವಕರ ಆಗಂತುಕತೆ, ಅನುಮಾನ, ಬಂಡಾಯ ಪ್ರವೃತ್ತಿ, ಹತಾಶೆ - ನಮ್ಮ ಮನಸ್ಸನ್ನು ತೀವ್ರ ಚಿಂತನೆಗೆ ಒಳಪಡಿಸುತ್ತದೆ. ನಿರ್ಭಾವುಕ ಮಾತುಗಾರಿಕೆಯ ಈಶ್ವರ ಅಲ್ಲಾ ವಸ್ತು ಮತ್ತು ತಂತ್ರಗಳ ಅನ್ಯೋನತೆಗೆ ಒಳ್ಳೆಯ ಮಾದರಿಯಾಗುವುದಲ್ಲದೆ, ಕನ್ನಡದಲ್ಲಿ ಅದ್ವೀತಿಯ ಬರವಣಿಗೆಯಾಗಿದೆ. ನಾವೆಲ್ಲರೂ ಒಂದೇ ಜಾತಿಯಲ್ಲಿ ಸಾರ್ವಜನಿಕ ಹಾಗೂ ವೈಯುಕ್ತಿಕ ಜೀವನದ ವಿಸಂಗತಿಯಿಂದ ವ್ಯಕ್ತಿತ್ವವೊಂದು ಸದ್ದುಗದ್ದಲವಿಲ್ಲದೆ ವಿಘಟಿತವಾಗುತ್ತಾ ಹೋಗುವ ಪರಿಯನ್ನು ಲೇಖಕರು ಮಾರ್ಮಿಕವಾಗಿ ರೇಖಿಸಿದ್ದಾರೆ. ಕಾಮುವಿನ ಕೃತಿಗಳಂತೆಯೇ ಒಂದು ಓದಿಗೆ ತಮ್ಮೆಲ್ಲ ಸಾರವಂತಿಕೆಯನ್ನು ಹಿಂಡಿಕೊಡುವಂಥ ಬರಹಗಳಲ್ಲ ಇವು.
|
| |
|
|
|
|
|
|
|
|
|