|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆರ್ಯರು ಭಾರತಕ್ಕೆ ಹೊರಗಿನಿಂದ ವಲಸೆ ಬಂದವರು ಮತ್ತು ಋಗ್ವೇದವು ಆರ್ಯರ ಹಿಂದಿನ ಹಾಗೂ ನಂತರದ ಅನುಭವಗಳನ್ನು ಪ್ರತಿಫಲಿಸುತ್ತದೆ ಎಂಬ ಅಭಿಪ್ರಾಯಗಳು ಪ್ರಚಲಿತವಾಗಿದ್ದುವಷ್ಟೆ. ಇತರ ಧರ್ಮಗಳನ್ನು ಮೂದಲಿಸುವುದರಲ್ಲೇ ಸುಖ ಕಾಣುತ್ತಿದ್ದ ಹಿಂದುತ್ವವಾದಿಗಳಿಗೆ ಮೇಲಿನ ಅಭಿಪ್ರಾಯಗಳು ನುಂಗಲಾರದ ತುತ್ತಾಗಿ ಪರಿಣಮಿಸಿದುದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ಅಭಿಪ್ರಾಯಗಳನ್ನು ನಿರಾಕರಿಸಿ, ಆರ್ಯರು ಮೂಲತಃ ಭಾರತವಾಸಿಗಳೇ, ಇಲ್ಲಿಂದ ವಲಸೆ ಹೋಗಿದ್ದು ಪಿತೃಭೂಮಿಗೆ ಹಿಂದಿರುಗಿದವರು ಎಂಬುದನ್ನು ಪಟ್ಟು ಹಿಡಿದು ಸಾಧಿಸಲು ಚರಿತ್ರೆಯನ್ನು ತಿರುಚುವವರಿಗೆ ಏನಾದರೊಂದು ಉಪಾಯ ಅಗತ್ಯವಾಯಿತು. ಈ ಮಧ್ಯೆ - ಇಬ್ಬರು ವಿದ್ವಾಂಸರು ಸಿಂಧೂ ಲಿಪಿಯನ್ನು ನಿರ್ವಚಿಸಿ, ಆರ್ಯರ ವಲಸೆ ಕುರಿತು ‘ಸಮರ್ಥ’ ಆಧಾರ ಒದಗಿಸಿದರು. ಮುದ್ರಿಕೆಗಳಲ್ಲಿದ್ದ ಚಿತ್ರಗಳನ್ನು ಕಂಪ್ಯೂಟರ್ ಸಹಕಾರದಿಂದ ಪರಿಷ್ಕರಿಸಿದರು! ಇದು ಸುಳ್ಳು ಕುದುರೆಯ ಸಾಕ್ಷ್ಯ ಎಂದು ವಾದ-ವಿವಾದಕ್ಕೊಳಗಾಯಿತು. ‘ಇತಿಹಾಸದ ರಾಜಕೀಯ’ ಮೇಲಿನ ಪ್ರಕರಣವನ್ನು ಸೂಕ್ಷ್ಮ ವಿಶ್ಲೇಷಣೆಗೊಳಪಡಿಸಿ, ವಸ್ತುಸ್ಥಿತಿಯನ್ನು ಗ್ರಹಿಸಲು ಸಹಾಯಕವಾಗುವ ಕೃತಿ. ಹಲವು ಮೂಲಗಳಿಂದ ಹಾಗೂ ಆಕರ ಗ್ರಂಥಗಳಿಂದ ಸಂಗ್ರಹಿಸಿದ ವಿಷಯಗಳನ್ನು ಡಾ|| ಕೆ. ಎಲ್. ಗೋಪಾಲಕೃಷ್ಣಯ್ಯನವರು ಈ ಗ್ರಂಥದಲ್ಲಿ ವಿಮರ್ಶಾತ್ಮಕವಾಗಿ ಸಮೀಕ್ಷಿಸಿದ್ದಾರೆ.
|
ಡಾ|| ಕೆ. ಎಲ್. ಗೋಪಾಲಕೃಷ್ಣಯ್ಯನವರು ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿ. ಪದವೀಧರರು. ಕೆ.ಜಿ.ಎಫ್. ಕಾಲೇಜಿನಲ್ಲಿ ಕೆಲವರ್ಷಗಳು ಹಾಗೂ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಸುದೀರ್ಘಕಾಲ ಪ್ರೊಫೆಸರ್ ಆಗಿದ್ದವರು. ‘ಹೊಸತು’ ಪತ್ರಿಕೆಯ ಸಹಸಂಪಾದಕರಾಗಿದ್ದು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇತಿಹಾಸ ಮತ್ತು ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ.
|
|
| |
|
|
|
|
|
|
|
|
|