|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆರೋಗ್ಯಕರ ಸಾಮಾಜಿಕ ಚರ್ಚೆ ಮತ್ತು ಸಂಕಟಥನಗಳ ಮುಂದುವರಿಕೆಗೆ ಬದ್ಧವಾಗಿರುವ ಪ್ರಜಾವಾಣಿ,ಸಮಾಜದಲ್ಲಿ ಜಾತಿ ಪ್ರಜ್ಞೆಯ
ಸೂಕ್ಷ್ಮ ಮತ್ತು ಸಂಕೀರ್ಣ ಒಲವುನಲಿವುಗಳು ಹೇಗಿವೆ ಎಂಬುದನ್ನು ಅರ್ಥೈಸಿಕೊಳ್ಳಲು ನಡೆಸಿದ ಪ್ರಯತ್ನವೇ ಈ ಸಾರ್ವಜನಿಕ ಸಂವಾದ. ಸಾಮಾಜಿಕ ಅಭಿಪ್ರಾಯಗಳ ಈ ಅನುಸಂಧಾನದಲ್ಲಿ ಇಡೀ ನಾಡು ಅನನ್ಯ ರೀತಿಯಲ್ಲಿ ಪಾಲ್ಗೊಂಡಿದೆ. ಬಹುಪಾಲು ವೈಯಕ್ತಿಕ ಮತ್ತು ಖಾಸಗಿ ವಲಯದಲ್ಲೇ ಉಳಿದಿದ್ದು ಜಾತಿ ಕುರಿತ ಚರ್ಚೆ,ಸಂಪೂರ್ಣ ಮುಕ್ತವಾದ ಸಾರ್ವಾಜನಿಕ ಸಂವಾದವಾಗಿ ಬೆಳೆದು ಆರು ತಿಂಗಳ ಕಾಲ ವಿವಿಧ ಸ್ತರಗಳ ಸಾವಿರಾರು ಓದುಗರನ್ನು ಒಂದು ವಿಚಾರ ವೇದಿಕೆಗೆ ತಂದಿದೆ.ಪತ್ರಿಕೋದ್ಯಮದಲ್ಲಿ ಇದೊಂದು ಅಪೂರ್ವ ಸಾಮಾಜಿಕ ಪ್ರಯೋಗ.
ಈ ಮುಕ್ತ ಸಾರ್ವಜನಿಕ ಸಂವಾದದಲ್ಲಿ ಜಾತಿ ವ್ಯವಸ್ಥೆ ಮತ್ತು ಆಚರಣೆ ಕುರಿತು ತಾತ್ವಿಕ ವಿಮೋಚನೆ ಇರುವುದಲ್ಲದೆ,ಅವುಗಳ ಸಾಮಾಜಿಕ-ರಾಜಕೀಯ ಆಯಾಮಗಳೂ ಚರ್ಚಿತವಾಗಿವೆ.ಹತ್ತುಹಲವು ಸಂಗತಿಗಳು ಮರುವ್ಯಾಖ್ಯಾನಕ್ಕೆ ಪಕ್ಕಾಗಿವೆ.ಜಾತಿ ಸಂಬಂಧಿತ ದಿನನಿತ್ಯದ ಬದುಕಿನ ಸಾಮಾನ್ಯ ಅನುಭವಗಳು ಕಥನರೂಪ ಪಡೆದಿವೆ.ಹಾಗೇಯೇ ಸಂಕೀರ್ಣ ರಾಜಕೀಯ ಬೆಳವಣಿಗೆಗಳು ವಿಶ್ಲೇಷಣೆಗೆ ಒಳಗಾಗಿವೆ.ಏಕಾಂತದಿಂದ ಲೋಕಾಂತದವರೆಗೆ ಜಾತಿಯ ಸಂಚಲನಗಳ ಪ್ರತಿಫಲನ ಮತ್ತು ಅಕ್ಷರ ರೂಪದ ದಾಖಲೀಕರಣ ಇಲ್ಲಿದೆ.
ಜಾತಿ ಕುರಿತು ಮುಂದೆ ನಡೆಯಬಹುದಾದ ರಾಜಕೀಯ,ಸಾಮಾಜಿಕ,ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಧ್ಯಯನಗಳಿಗೆ ಇದು ನಿಸ್ಸಂಶಯವಾಗಿ ಒಂದು ಜನಮೂಲ ಮತ್ತು ಅವರ ಮನಮೂಲ ಆಕರ ಸಾಮಾಗ್ರಿ.
|
| |
|
|
|
|
|
|
|
|
|